ಪ್ರಾಣಿಪ್ರಿಯ ದರ್ಶನ್ ರಿಂದ ಮಹತ್ವದ ಸಂದೇಶ….! ಹುಲಿ ರಕ್ಷಣೆಗೆ ದಚ್ಚು ಹೇಳಿದ್ದೇನು ಗೊತ್ತಾ..?!

ಜುಲೈ 29 ನ್ನು ವಿಶ್ವಹುಲಿ ದಿವಸವಾಗಿ ಆಚರಿಸಲಾಗುತ್ತದೆ. ಹೀಗಾಗಿ ಪ್ರಾಣಿಪ್ರಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಲಿ ರಕ್ಷಣೆಗೆ ಮಹತ್ವದ ಸಂದೇಶ ನೀಡಿದ್ದು, ಹುಲಿಗಳ ರಕ್ಷಣೆಗೆ ಮನವಿ ಮಾಡಿದ್ದಾರೆ.

ಹುಲಿ ರಕ್ಷಣೆ ಬಗ್ಗೆ ವಿಶೇಷ ಸಂದೇಶ ಉಳ್ಳ ವಿಡಿಯೋ ನಿರ್ಮಿಸಿರುವ ದರ್ಶನ್, ಅರಣ್ಯಗಳಲ್ಲಿ ಹುಲಿಗಳು ಮುಕ್ತವಾಗಿ ಬದುಕಲು 15 ರಿಂದ 16 ಚದರ ಕಿಲೋಮೀಟರ್ ಜಾಗ ಬೇಕಾಗುತ್ತದೆ. ಆದರೆ ಪ್ರಸ್ತುತ ಹುಲಿಗಳಿಗೆ ಕೇವಲ 5-6 ಚದರ ಕಿಲೋಮೀಟರ್ ನಷ್ಟೇ ಜಾಗ ಲಭ್ಯವಿದೆ.

ಹೀಗಾಗಿ ಹುಲಿಗಳು ಪರಸ್ಪರ ಕಾದಾಡಿ, ಆಹಾರಕ್ಕಾಗಿ ಹೊಡೆದಾಡಿ ಸಾಯುವ ಸ್ಥಿತಿತಲುಪುತ್ತಿದೆ. ಹೀಗಾಗಿ ಹುಲಿ ಸಂತತಿ ಬೆಳೆಯಲು ಮನುಷ್ಯರು ಕಾಡಿಗೆ ಹೋಗುವುದನ್ನು ಬಿಡಬೇಕು.

ಮನುಷ್ಯ ಕಾಡುಗಳನ್ನು ಆಕ್ರಮಿಸಿಕೊಳ್ಳುವುದನ್ನು ಬಿಟ್ಟರಷ್ಟೇ ವನ್ಯಜೀವಿಗಳು ಬದುಕಬಲ್ಲವು. ಇಲ್ಲದಿದ್ದರೇ ಮನುಷ್ಯ ಕಾಡಿಗೆ ಹೋದಂತೆ ವನ್ಯಜೀವಿಗಳು ನಾಡಿಗೆ ಬರುವಂತಾಗುತ್ತದೆ ಎಂದು ದರ್ಶನ್ ಎಚ್ಚರಿಸಿದ್ದಾರೆ.

ಟ್ವೀಟರ್ ನಲ್ಲೂ ಹುಲಿ ದಿನಕ್ಕೆ ಶುಭಕೋರಿ ಸಂದೇಶ ಹಂಚಿಕೊಂಡಿರುವ ದಚ್ಚು, ಹುಲಿ ರಕ್ಷಣೆ ಹಾಗೂ ಹುಲಿಗಳ ನೈಸರ್ಗೀಕ ನೆಲೆವಿಡು ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜುಲೈ 29 ರಂದು ಹುಲಿ ದಿನವನ್ನು ಆಚರಿಸಲಾಗುತ್ತದೆ. ಕಾಡುಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಹುಲಿ ಸಂತತಿಯನ್ನು ನಾವೆಲ್ಲರೂ ರಕ್ಷಿಸೋಣ ಎಂದಿದ್ದಾರೆ.

ಈ ಹಿಂದೆಯೂ ನಟ ದರ್ಶನ್ ಪ್ರಾಣಿಗಳಿಗಾಗಿ ಧ್ವನಿ ಎತ್ತಿದ್ದು,ಕೊರೋನಾದಿಂದ ಮೃಗಾಲಯಗಳು ಸಂಕಷ್ಟದಲ್ಲಿದ್ದು, ಅವುಗಳ ಉಳಿವಿಗಾಗಿ ಪ್ರಾಣಿಗಳನ್ನು ದತ್ತು ಪಡೆಯುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸಾವಿರಾರು ಅಭಿಮಾನಿಗಳು ಪ್ರಾಣಿಗಳನ್ನು ದತ್ತು ಪಡೆದು ಮೃಗಾಲಯಕ್ಕೆ ಸಹಾಯಹಸ್ತ ಚಾಚಿದ್ದರು.  

Comments are closed.