KGF Chapter 2 : ಬಾಲಿವುಡ್​ನ ಜೆರ್ಸಿ ಸಿನಿಮಾಗೆ ಭರ್ಜರಿ ಶಾಕ್​ ಕೊಟ್ಟ ಕೆಜಿಎಫ್​ 2

KGF Chapter 2  : ಸ್ಯಾಂಡಲ್​ವುಡ್​ ನಟ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಬಾಕ್ಸಾಫೀಸಿನಲ್ಲಿ ತನ್ನ ದಾಖಲೆಗಳನ್ನು ಮುಂದುವರಿಸುತ್ತಲೇ ಇದೆ. ಸಿನಿಮಾ ತೆರೆ ಕಂಡ 8 ದಿನಗಳಲ್ಲಿ ಪ್ರಶಾಂತ್​​ ನೀಲ್​ ನಿರ್ದೇನದ ಕೆಜಿಎಫ್​​ ಆರ್​ಆರ್​​​ಆರ್​ ಹಿಂದಿ ಸಂಗ್ರಹವನ್ನು ಮೀರಿಸುವ ಮೂಲಕ 2022ನೇ ಸಾಲಿನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿದೆ. ಬಾಲಿವುಡ್​ ತಾರೆಯರಾದ ಸಂಜಯ್​ ದತ್​, ರವೀನಾ ಟಂಡನ್​​ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್​​ ಚಾಪ್ಟರ್​ 2 ಸಿನಿಮಾ ಎರಡನೇ ವಾರಕ್ಕೆ ಕಾಲಿಡಲಿದ್ದು ಈ ವಾರದಲ್ಲಿಯೂ ಯಶ್​ ಸಿನಿಮಾ ಬಾಕ್ಸಾಫೀಸಿನಲ್ಲಿ ಭರ್ಜರಿ ಬೇಟೆ ಮುಂದುವರಿಸಲಿದೆ ಎಂದು ಅಂದಾಜಿಸಲಾಗಿದೆ. ಈ ಸಿನಿಮಾವು ಜಾಗತಿಕ ಬಾಕ್ಸಾಫೀಸಿನಲ್ಲಿ 750 ಕೋಟಿ ರೂಪಾಯಿಗಳನ್ನು ಗಳಿಸಿದೆ ಹಾಗೂ 800 ಕೋಟಿ ರೂಪಾಯಿಗಳನ್ನು ಸಂಪಾದಿಸುವತ್ತ ದಾಪುಗಾಲು ಹಾಕುತ್ತಿದೆ.


ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಶುಕ್ರವಾರ ಅದರ ಹಿಂದಿ ಆವೃತ್ತಿಯ ಕಾರ್ಯಕ್ಷಮತೆಯನ್ನು ‘ರೆಕಾರ್ಡ್-ಸ್ಮಾಶಿಂಗ್’ ಎಂದು ಟ್ವೀಟ್ ಮಾಡಿದ್ದಾರೆ, ಕೆಜಿಎಫ್​ 2 ಸಿನಿಮಾವು ಕೊರೊನಾ ಸಾಂಕ್ರಾಮಿಕದ ಬಳಿಕ ಕೇವಲ 8 ದಿನಗಳಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿದೆ. ಈ ಬ್ಲಾಕ್​ ಬಸ್ಟರ್​ ಸಿನಿಮಾವು ಗುರುವಾರ 53.95 ಕೋಟಿ, ಶುಕ್ರವಾರ 46.79 ಕೋಟಿ, ಶನಿವಾರ 42.50 ಕೋಟಿ, ಭಾನುವಾರ 42.50 ಕೋಟಿ. 25.57 ಕೋಟಿ, ಮಂಗಳವಾರ 19.14 ಕೋಟಿ, ಬುಧವಾರ 16.35 ಕೋಟಿ, ಗುರು 13.58 ಕೋಟಿ ಒಟ್ಟು: ₹ 268.63 ಕೋಟಿ ಸಂಪಾದಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಶಾಹೀದ್​ ಕಪೂರ್​​​ ನಟನೆಯ ಜೆರ್ಸಿ ಸಿನಿಮಾವು ನಿನ್ನೆ ತೆರೆ ಕಂಡಿದೆ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದ ಈ ಸಿನಿಮಾವನ್ನು ಹಿಂದಿಗೆ ರಿಮೇಕ್​ ಮಾಡಲಾಗಿದ್ದು ತೆಲುಗು ಸಿನಿಮಾದ ಹೆಸರನ್ನೇ ಇಡಲಾಗಿದೆ. ತೆಲುಗು ಭಾಷೆಯಲ್ಲಿ ನಾಣಿ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


ಬಾಕ್ಸ್​ ಆಫೀಸ್​ ಇಂಡಿಯಾ ರಿಪೋರ್ಟ್​ನ ಪ್ರಕಾರ, ಜೆರ್ಸಿ ಸಿನಿಮಾ ತೆರೆ ಕಂಡ ಮೊದಲ ದಿನವೇ ಕಡಿಮೆ ಕಲೆಕ್ಷನ್​ ಮಾಡಿದೆ. ವಾರಾಂತ್ಯದಲ್ಲಾದರೂ ಈ ಸಿನಿಮಾಗೆ ಜನರ ಸಂಖ್ಯೆ ಹೆಚ್ಚಬಹುದು ಎಂದು ಚಿತ್ರತಂಡ ನಿರೀಕ್ಷೆ ಇಟ್ಟುಕೊಂಡಿದೆ. ಆದರೆ ಕೆಜಿಎಫ್​ 2 ಹವಾದ ಮುಂದೆ ಈ ಸಿನಿಮಾವು ಮೊದಲ ದಿನದ ಕಲೆಕ್ಷನ್​ನಲ್ಲಿ ನೆಲ ಕಚ್ಚಿದೆ.

ಇದನ್ನು ಓದಿ : puneeth rajkumar :ಅಪ್ಪು ಧ್ವನಿಯಲ್ಲೇ ತೆರೆಗೆ ಬಂದ ‘ಜೇಮ್ಸ್​’ ಸಿನಿಮಾ :ಮುಗಿಲುಮುಟ್ಟಿದ ಅಭಿಮಾನಿಗಳ ಸಂತಸ

ಇದನ್ನೂ ಓದಿ : Yash : ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಕೃತಜ್ಞತೆ : ಪುಟ್ಟ ಕತೆ ಜೊತೆ ಥ್ಯಾಂಕ್ಸ್ ಎಂದ ಯಶ್

Box Office Report: Yash’s KGF Chapter 2 continues its magic, Shahid Kapoor’s Jersey opens low

Comments are closed.