India beat Australia in Warm-up game: ಲಾಸ್ಟ್ ಓವರ್‌ನಲ್ಲಿ ಶಮಿ ಬೆಂಕಿ ಬೌಲಿಂಗ್, ಆಸೀಸ್ ವಿರುದ್ಧ ಅಭ್ಯಾಸ ಪಂದ್ಯ ಗೆದ್ದ ಭಾರತ

ಬ್ರಿಸ್ಬೇನ್: (IND vs AUS) ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿದ ಮೊದಲ ಪಂದ್ಯದಲ್ಲೇ ಮಿಂಚಿದ ವೇಗಿ ಮೊಹಮ್ಮದ್ ಶಮಿ, ಟಿ20 ವಿಶ್ವಕಪ್ (T20 World Cup 2022) ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 6 ರನ್’ಗಳ ರೋಚಕ ಗೆಲುವು (India beat Australia ) ತಂದು ಕೊಟ್ಟಿದ್ದಾರೆ. ಬ್ರಿಸ್ಬೇನ್’ನ ಗಾಬಾ ಮೈದಾನದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಕೊನೆಯ ಓವರ್’ನಲ್ಲಿ ಗೆಲ್ಲಲು 11 ರನ್ ಗಳಿಸಬೇಕಿತ್ತು. 2021ರ ಐಸಿಸಿ ಟಿ20 ವಿಶ್ವಕಪ್ ನಂತರ ಇದೇ ಮೊದಲ ಬಾರಿ ಭಾರತ ಟಿ20 ತಂಡದಲ್ಲಿ ಕಾಣಿಸಿಕೊಂಡ ಮೊಹಮ್ಮದ್ ಶಮಿ, ತಮ್ಮ ಮೊದಲ ಹಾಗೂ ಭಾರತ ಪರ ಕೊನೆಯ ಓವರ್ ಎಸೆಯಲು ಕಣಕ್ಕಿಳಿದರು.

ಕಂಬ್ಯಾಕ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಶಮಿ ಆರು ಎಸೆತಗಳಲ್ಲಿ ಕೇವಲ 4 ರನ್ ಬಿಟ್ಟು ಕೊಟ್ಟು 3 ವಿಕೆಟ್ ಉರುಳಿಸಿದರು. ಜೊತೆಗೆ ಒಂದು ರನೌಟ್ ಕೂಡ ಮಾಡಿ ಭಾರತವನ್ನು ಗೆಲ್ಲಿಸಿದರು.

ಮೊಹಮ್ಮದ್ ಶಮಿ ಎಸೆತದ ಅಂತಿಮ ಓವರ್
ಎಸೆತ ನಂ.1: 2 ರನ್
ಎಸೆತ ನಂ.2: 2 ರನ್
ಎಸೆತ ನಂ.3: ಕ್ಯಾಚ್ ಔಟ್ (ಪ್ಯಾಟ್ ಕಮಿನ್ಸ್)
ಎಸೆತ ನಂ.4: ರನ್ ಔಟ್ (ಆಸ್ಟನ್ ಏಗರ್)
ಎಸೆತ ನಂ.5: ಬೌಲ್ಡ್ (ಜೋಶ್ ಇಂಗ್ಲಿಷ್)
ಎಸೆತ ನಂ.6: ಬೌಲ್ಡ್ (ಕೇನ್ ರಿಚರ್ಡ್ಸನ್)

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್’ಗಳ ಉತ್ತಮ ಮೊತ್ತ ಕಲೆ ಹಾಕಿತು. ಆರಂಭಿಕ ಆಟಗಾರ, ಉಪನಾಯಕ ಕೆ.ಎಲ್ ರಾಹುಲ್ ಕೇವಲ 33 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಒಳಗೊಂಡ ಸ್ಫೋಟಕ 57 ರನ್ ಬಾರಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 33 ಎಸೆತಗಳಲ್ಲಿ 50 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.

ನಂತರ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 20 ಓವರ್’ಗಳಲ್ಲಿ 180 ರನ್ನಿಗೆ ಆಲೌಟಾಗಿ ಭಾರತಕ್ಕೆ ಶರಣಾಯಿತು. ನಾಯಕ ಆ್ಯರೋನ್ ಫಿಂಚ್ 54 ಎಸೆತಗಳಲ್ಲಿ 76 ರನ್ ಗಳಿಸಿ ಆಸೀಸ್’ಗೆ ಆಸರೆಯಾದರೂ, ಸ್ಲಾಗ್ ಓವರ್’ಗಳಲ್ಲಿ ಭಾರತದ ಬೌಲರ್’ಗಳ ಬಿಗು ದಾಳಿಗೆ ತತ್ತರಿಸಿ ಸೋಲೊಪ್ಪಿಕೊಂಡಿತು. ಪಂದ್ಯದಲ್ಲಿ ಒಂದು ಓವರ್ ಬೌಲಿಂಗ್ ಮಾಡಿದ ಮೊಹಮ್ಮದ್ ಶಮಿ 4 ರನ್ನಿತ್ತು 3 ವಿಕೆಟ್ ಉರುಳಿಸಿದರು.

ಇದನ್ನೂ ಓದಿ : India Women Cricket Team : 5 ವರ್ಷ 3 ಫೈನಲ್ 3 ಸೋಲು… ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಕಾಡುತ್ತಿದೆ “ಫೈನಲ್ ಫೋಬಿಯಾ”

ಇದನ್ನೂ ಓದಿ : India Vs Australia warm-up Match : ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ: ರಾಹುಲ್ ಅಬ್ಬರದ ಅರ್ಧಶತಕ, ಕ್ಟಾಪ್ಟನ್ ರೋಹಿತ್ ಫೇಲ್

t20 world cup 2022 IND vs AUS India beat Australia in Warm-up game

Comments are closed.