Prabhas : ಭಾರತೀಯ ಸಿನಿಮಾರಂಗದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದ ನಟ ಪ್ರಭಾಸ್‌ : ‘ಸ್ಪಿರಿಟ್’ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ ?

ಭಾರತೀಯ ಚಿತ್ರರಂಗದಲ್ಲಿ ಇಲ್ಲಿವರೆಗೂ ಲೆಕ್ಕ ಇಲ್ಲದಷ್ಟು ನಾಯಕ ನಟರು ಬಂದಿದ್ದಾರೆ. ಹೋಗಿದ್ದಾರೆ. ಅವರವರ ಸಿನಿಮಾಕ್ಕೆ ತಕ್ಕಂತೆ ಸಂಭಾವನೆ ಎಲ್ಲಾ ನಟ ನಟಿಯರಿಗೂ ದೋರೆಯುತ್ತದೆ. ಆದರೆ ಇವರೆಲ್ಲಾರಿಗಿಂತ ಬಾಹುಬಲಿ ಪ್ರಭಾಸ್‌ ಹೆಚ್ಚು ಸಂಭಾವನೆ ತೆಗೆದುಕೊಂಡಿದ್ದಾರೆ. ಅದು ತಮ್ಮ ಮುಂದಿನ ಸಿನಿಮಾ ‘ಸ್ಪಿರಿಟ್’ ನಲ್ಲಿ. ಸೌತ್ ಇಂಡಿಯಾ ಹಾಗೂ ಹಿಂದಿ ಎಲ್ಲದರಲ್ಲೂ ಒಂದೇ ರೀತಿಯ ಬಿಜಿನೆಸ್ ಮಾಡುವ ಏಕೈಕ ನಟ ಪ್ರಭಾಸ್. ಭಾರತದಲ್ಲಿ ಮಾತ್ರವಲ್ಲದೇ ಹೊರ ದೇಶದಲ್ಲಿಯೂ ಪ್ರಭಾಸ್‌ ಚಿತ್ರಕ್ಕೆ ಭಾರಿ ಬೇಡಿಕೆ ಇದೆ ಎನ್ನಲಾಗುತ್ತದೆ.

ಸೂಪರ್‌ ಸ್ಟಾರ್‌ ಪ್ರಭಾಸ್‌ ಡೇಟ್‌ ಗಾಗಿ ಸಿನಿಮಾ ನಿರ್ಮಾಪಕರು ಸಾಲುಗಟ್ಟಿ ಕಾಯುತ್ತಾ ಇರುತ್ತಾರೆ. ಅಲ್ಲದೇ ಪ್ರಭಾಸ್‌ ಸಿನಿಮಾಕ್ಕೆ ಕಮ್ಮೀ ಅಂದ್ರೂ 300ರಿಂದ 500 ಕೋಟಿ ಬಂಡವಾಳ ಹೂಡಲು ನಿರ್ಮಾಪಕರು ರೆಡಿಯಾಗಿರುತ್ತಾರೆ. ‘ರಾಧೆಶ್ಯಾಮ್’ 300 ಕೋಟಿ, ‘ಸಲಾರ್’ 250 ಕೋಟಿ, ‘ಆದಿಪುರುಷ್’ 500 ಕೋಟಿ, ‘ಪ್ರಾಜೆಕ್ಟ್ K ‘ 600 ಕೋಟಿ ಬಂಡವಾಳವನ್ನು ನಿರ್ಮಾಪಕರು ಈಗಾಗಲೇ ಹೂಡಿದ್ದಾರೆ. ಬಾಲಿವುಡ್ ನ ಯಾವ ಸೂಪರ್ ಸ್ಟಾರ್ ಮೇಲು ಕೂಡ ನಿರ್ಮಾಪಕರು ಇಷ್ಟು ದೊಡ್ಡ ಮಟ್ಟದ ಬಂಡವಾಳ ಹೂಡುವ ಧೈರ್ಯ ಮಾಡುತ್ತಿಲ್ಲ.

ಇದನ್ನೂ ಓದಿ: Meghanaraj ಹೊಸ ಪೋಟೋ ಶೂಟ್‌ : ಮಹಾರಾಣಿಯಾಗಿ ಮಿಂಚಿದ ಮೇಘನಾ

ಆದರೆ ಪ್ರಭಾಸ್‌ ಸಂಭಾವನೇ ಎಷ್ಟು ಕೇಳಿದರು ಪರವಾಗಿಲ್ಲಾ ಪ್ರಭಾಸ್‌ ಡೇಟ್‌ ಸಿಕ್ಕಿದರೆ ಸಾಕು ಅಂತ ಕಾಯುತ್ತಿದ್ದಾರೆ. ಸದ್ಯಕ್ಕೆ 5 ಚಿತ್ರಗಳನ್ನು ಪ್ರಭಾಸ್ ಒಪ್ಪಿಕೊಂಡಿದ್ದಾರೆ. ಇದರ ಜೊತೆ ಮತ್ತೆ 5 ಚಿತ್ರಗಳ ನಿರ್ಮಾಣಕ್ಕೆ 500 ಕೋಟಿ ಬಂಡವಾಳದೊಂದಿಗೆ ನಿರ್ಮಾಪಕರು ಮತ್ತು ನಿರ್ದೇಶಕರು ಕಾಯುತ್ತಾ ಇದ್ದಾರೆ. ಅತ್ಯದಿಕ ಬಂಡವಾಳ ಹೂಡುವ ನಿರ್ಮಾಪಕರು ಸಿಗುವುದೇ ಕಷ್ಟ. ಆದರೆ ಅಧಿಕ ಬಂಡಬಾಳ ಹೂಡುವ ನಿರ್ಮಾಪಕರೆಲ್ಲಾ ಪ್ರಾಭಾಸ್‌ ಬೇಕು ಎನ್ನುವಾಗ ಸಹಜವಾಗಿಯೇ ಪ್ರಭಾಸ್ ಅವರ ಸಂಭಾವನೆ ಕೂಡ ಭಾರಿ ಮಟ್ಟದಲ್ಲೇ ಇರುವುದು ಸಹಜ. ಪ್ರಭಾಸ್ ಸಿನಿಮಾಗಳಿಗೆ ಮಾರುಕಟ್ಟೆ ಸಹ ಕಡಿಮೆ ಏನಿಲ್ಲ. ಬಿಡುಗಡೆಗೆ ಮುನ್ನವೇ ಸಿನಿಮಾದ ಒಟ್ಟು ಬಂಡವಾಳದ ಅರ್ಧದಷ್ಟು ವಾಪಸ್ಸಾಗಿರುತ್ತದೆ.

ಪ್ರಭಾಸ್‌ ಸಿನಿಮಾ ಜೀವನದ 25ನೇ ಚಿತ್ರ ‘ಸ್ಪಿರಿಟ್’ ಈ ಚಿತ್ರವನ್ನು ‘t-series’ಮತ್ತು ‘ಭದ್ರಕಾಳಿ ಮೂವೀಸ್’ ಒಟ್ಟಿಗೆ ನಿರ್ಮಿಸುತ್ತಿದ್ದು ಈ ಚಿತ್ರವನ್ನು ತೆಲುಗು, ಹಿಂದಿ, ಕನ್ನಡ, ತಮಿಳು, ಮಲಯಾಳಂ ಜೊತೆಗೆ ಚೈನೀಸ್ ಕೊರಿಯನ್ ಮತ್ತು ಜಪಾನೀಸ್ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಆಕ್ಷನ್ ಡ್ರಾಮಾ ಹೊಂದಿರುವ ಈ ಚಿತ್ರದಲ್ಲಿ ಪ್ರಭಾಸ್ ಪವರ್ಫುಲ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರವನ್ನು ‘ಅರ್ಜುನ್ ರೆಡ್ಡಿ’ ಅದರ ರಿಮೇಕ್ ‘ಕಬೀರ್ ಸಿಂಗ್’ ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ ಚಿತ್ರಗಳ ಮೂಲಕ ಸ್ಟಾರ್ ನಿರ್ದೇಶಕನಾಗಿ ತೆಲುಗು ಮತ್ತು ಬಾಲಿವುಡ್ ನಲ್ಲಿ ಗುರುತಿಸಿಕೊಂಡಿರುವ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿದ್ದಾರೆ.

ಇದನ್ನೂ ಓದಿ : KOTIGOBBA 3 : ಸಿನಿಮಾ ರಿಲೀಸ್‌ ಬೆನ್ನಲ್ಲೇ ಕಿಚ್ಚನ ಆ ಒಂದು ಟ್ವೀಟ್‌ಗೆ ಅಭಿಮಾನಿಗಳು ಫಿದಾ

ಪ್ರಭಾಸ್ ‘ಸ್ಪಿರಿಟ್’ ಚಿತ್ರಕ್ಕೆ ಬರೋಬ್ಬರಿ 150 ಕೋಟಿ ಸಂಭಾವನೆ ಪಡೆದಿದ್ದಾರೆ ಅಂತ ಬಾಲಿವುಡ್ ಟಾಕ್. ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ನಡೆಯುವ ನಾಯಕ ನಟನಾಗಿ ಪ್ರಭಾಸ್ ಹೊಸ ದಾಖಲೆಯನ್ನು ಬರೆದಿದ್ದಾರೆ. ಬಹುಶಃ ಪ್ರಸ್ತುತ ಸಂದರ್ಭದಲ್ಲಿ ಪ್ರಭಾಸ್ ಹತ್ತಿರಕ್ಕೆ ಸಂಭಾವನೆಯ ವಿಷಯದಲ್ಲಿ ಮತ್ತೊಬ್ಬ ನಟ ಹತ್ತಿರವಿದ್ದಂತೆ ಕಾಣುತ್ತಿಲ್ಲ. ಮುಂಬರುವ ದಿನಗಳಲ್ಲಿ ಪ್ರಭಾಸ್ ಸಂಭಾವನೆ ಮತ್ತಷ್ಟು ಹೆಚ್ಚಾಗುವ ಸಂಭಾವನೆಗಳಿವೆ. ಒಟ್ಟಾರೆ 150 ಕೋಟಿ ಸಂಭಾವನೆ ಪಡೆದ ಮೊಟ್ಟ ಮೊದಲ ಭಾರತೀಯ ಸಿನಿಮಾ ನಟನೆಂಬ ಹೆಗ್ಗಳಿಕೆ ಪ್ರಭಾಸ್ ಅವರ ಪಾಲಾಗಿದೆ.

(Prabhas, the highest paid actor in Indian cinema: Do you know how much he was paid for ‘Spirit’?)

Comments are closed.