FactCheck : 10 ನೇ ಕ್ಲಾಸ್ ಉತ್ತೀರ್ಣರಾದವರಿಗೆ ಸಿಗುತ್ತೆ ಮಾಸಿಕ 3,500 ರೂ. ! ವೈರಲ್‌ ಸುದ್ದಿಯ ಅಸಲಿತ್ತೇನು ?

ನವದೆಹಲಿ : ಕೇಂದ್ರ ಸರಕಾರ ಜನರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದೀಗ ನಿರುದ್ಯೋಗಿಗಳಿಗೆ ಸರಕಾರ ಪ್ರಧಾನ ಮಂತ್ರಿ ಬೆರೋಜ್‌ಗಾರ್‌ ಭಟ್ಟ ಯೋಜನೆಯ ಮೂಲಕ ಮಾಸಿಕ ಮೂರು ಸಾವಿರ ರೂಪಾಯಿಯನ್ನು ನೀಡಲಾಗುತ್ತಿದೆ. 10 ನೇ ತರಗತಿ ಉತ್ತೀರ್ಣರಾದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಪ್ರಧಾನ ಮಂತ್ರಿ ಬೆರೋಜ್‌ಗರ್ ಭಟ್ಟ ಯೋಜನೆಗಾಗಿ ಪೂರ್ವ ನೋಂದಣಿ ಆರಂಭವಾಗಿದೆ. ಈ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 3,500 ರೂ. ನೀಡಲಾಗುತ್ತಿದೆ. ಈ ಯೋಜನೆಯ ಅಡಿಯಲ್ಲಿ ಹಣವನ್ನು ಪಡೆಯಲು ಬಯಸುತ್ತಿರುವ ಫಲಾನುಭವಿಗಳು 18 ರಿಂದ 49 ವರ್ಷದೊಳಗಿನವರು ಆಗಿರಬೇಕು. ಅಲ್ಲದೇ 10 ನೇ ಉತ್ತೀರ್ಣರಾಗಿರಬೇಕು. ಆಸಕ್ತರು 31 ಅಕ್ಟೋಬರ್ 2021ರ ಒಳಗಾಗಿ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಯೋಜನೆಗೆ ಆನ್ಲೈನ್ ​​ನೋಂದಣಿಗೆ ಲಿಂಕ್ ಅನ್ನು ಒತ್ತಿ ಅನ್ನೋ ಸಂದೇಶ ಎಲ್ಲೆಡೆ ಯಲ್ಲಿಯೂ ವೈರಲ್‌ ಆಗಿದೆ.

ನಾನಾ ಕಾರಣಗಳಿಂದಾಗಿ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ಮಾಸಿಕ ಸಹಾಯಧನ ನೀಡಲಾಗುತ್ತಿದೆ ಅನ್ನೋ ಸಂದೇಶ ಎಲ್ಲೆಡೆಯಲ್ಲಿ ಯೂ ವೈರಲ್‌ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್‌ ಆಗುತ್ತಿದ್ದಂತೆಯೇ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಬೆರೊಜ್ಗರ್ ಭಟ್ಟ ಯೋಜನೆ’ ಅಡಿಯಲ್ಲಿ ಎಲ್ಲಾ ನಿರುದ್ಯೋಗಿಗಳಿಗೆ ತಿಂಗಳಿಗೆ 3,500 ರೂ. ನೀಡುವ ಯಾವುದೇ ಯೋಜನೆಯನ್ನೂ ಜಾರಿಗೆ ತಂದಿಲ್ಲ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ (ಪಿಐಬಿ) ಫ್ಯಾಕ್ಟ್ ಚೆಕಿಂಗ್ ಆರ್ಮ್ ‘ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್ ಮಾಡಿದೆ,

ಪ್ರಧಾನ ಮಂತ್ರಿ ಬೆರೊಜ್ಗರ್ ಭಟ್ಟ ಯೋಜನೆ ‘ಅಡಿಯಲ್ಲಿ ಭಾರತ ಸರಕಾರ ನಿರುದ್ಯೋಗಿಗಳಿಗೆ ತಿಂಗಳಿಗೆ 3,500 ರೂ. ನೀಡುವ ಯಾವುದೇ ಯೋಜನೆಯನ್ನು ನೀಡುತ್ತಿಲ್ಲ. ಹೀಗಾಗಿ ಅಂತಹ ಯಾವುದೇ ಅನುಮಾನಾಸ್ಪದ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ, ಇದು ವಂಚನೆಯ ಪ್ರಯತ್ನ ಆಗಿರಬಹುದು. ಸರಕಾರಿ ಯೋಜನೆಯ ಹೆಸರಲ್ಲಿ ಮೋಸದ ಜಾಲವು ಸಕ್ರೀಯ ವಾಗಿದೆ. ಹೀಗಾಗಿ ಸರಕಾರ ಜನರಿಗೆ ಪದೇ ಪದೇ ಎಚ್ಚರಿಕೆಯನ್ನು ನೀಡುತ್ತಿದೆ. ಇಂತಹ ಮೋಸದ ಜಾಲಕ್ಕೆ ಬಲಿಯಾಗ ಬೇಡಿ ಎಂದು ಕೇಂದ್ರ ಸರಕಾರ ಹೇಳಿದೆ.

( 10th Class Pass holder gets Rs 3,500 per month all Unemployed Under Pradhan Mantri Berojgar Bhatta Yojana ! What’s viral news )

Comments are closed.