Reliance – Forbes : ಜಗತ್ತಿನ ಉದ್ಯೋಗದಾತ’ ಶ್ರೇಯಾಂಕ 2021 ಫೋರ್ಬ್ಸ್ ಪಟ್ಟಿ, ಭಾರತದಲ್ಲಿ “ರಿಲಯನ್ಸ್ʼʼ ಪ್ರಥಮ

ನವದೆಹಲಿ : ಭಾರತೀಯ ಮಾರುಕಟ್ಟೆಯಲ್ಲಿ ಅತೀ ದೊಡ್ಡ ಕಂಪೆನಿ ʼರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ʼ. ಫೋರ್ಬ್ಸ್ ಪ್ರಕಟಿಸಿರುವ ‘ಜಗತ್ತಿನ ಅತ್ಯುತ್ತಮ ಉದ್ಯೋಗದಾತ’ ಶ್ರೇಯಾಂಕ 2021ರ ಪಟ್ಟಿಯಲ್ಲಿ ಭಾರತದಲ್ಲಿ ರಿಲಯನ್ಸ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಸೊನಾಫಿ, ಫಿಲಿಪ್ಸ್, ಫೈಜರ್, ಇಂಟೆಲ್ ಮುಂತಾದ 750 ಕಾರ್ಪೊರೇಟ್ಗಳ ನಡುವೆ  ರಿಲಯನ್ಸ್ 52ನೇ ಸ್ಥಾನ ಪಡೆದುಕೊಂಡಿದೆ. ಈ ಶ್ರೇಯಾಂಕವು ಬೃಹತ್ ಪ್ರಮಾಣದ ಸಮೀಕ್ಷೆಯ ಆಧಾರದಲ್ಲಿ ನಿರ್ಧಾರಿತವಾಗುತ್ತದೆ. ಆದ್ದರಿಂದ ಉದ್ಯೋಗಿಗಳು ತಮ್ಮ ಉದ್ಯೋಗದಾತರಿಗೆ ವಿವಿಧ ವಿಭಾಗಗಳಲ್ಲಿ ರೇಟಿಂಗ್ ನೀಡಿರುತ್ತಾರೆ. ಅವುಗಳನ್ನು ಪರಿಗಣಿಸಿ ಶ್ರೇಯಾಂಕ ನಿಗದಿ ಮಾಡಲಾಗುತ್ತದೆ.

ತೈಲದಿಂದ ಹಿಡಿದು ರೀಟೈಲ್‌ವರೆಗೂ ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವ ರಿಲಯನ್ಸ್, 2020-21ರ ಸಾಂಕ್ರಾಮಿಕ ವರ್ಷದಲ್ಲಿಯೂ 75,000 ಹೊಸ ಉದ್ಯೋಗಗಳಿಗೆ ನೇಮಕಾತಿ ಮಾಡಿಕೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಗ್ರೂಪ್‌ನ ಅಂಗಸಂಸ್ಥೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ಆರ್‌ವಿಎಲ್ )ಯಾಗಿದೆ. ರಿಲಯನ್ಸ್ ರೀಟೇಲ್ ಭಾರತದ ಅತಿದೊಡ್ಡ ಮತ್ತು ಹೆಚ್ಚು ಲಾಭದಾಯಕ ರೀಟೇಲ್ ಕಂಪನಿ. ಡೆಲೋಯಿಟ್ ಗ್ಲೋಬಲ್ ಪವರ್ಸ್ ವಿಶ್ವದ ವೇಗವಾಗಿ ಬೆಳೆಯುತ್ತಿರುವ ರೀಟೇಲ್ ವ್ಯಾಪಾರಿಗಳಲ್ಲಿ ಒಂದಾಗಿದೆ. ರೀಟೇಲ್ ಮಾರಾಟ 2021 ಸೂಚ್ಯಂಕದಲ್ಲಿ 53 ನೇ ಸ್ಥಾನದಲ್ಲಿರುವ ಏಕೈಕ ಭಾರತೀಯ ಕಂಪನಿ ಇದಾಗಿದೆ.

ಇದನ್ನೂ ಓದಿ: ಪಾಕ್, ಬಾಂಗ್ಲಾದೇಶಕ್ಕಿಂತ ಜಾಗತಿಕ ಹಸಿವಿನ ಪಟ್ಟಿಯಲ್ಲಿ ಹಿಂದುಳಿದ ಭಾರತ : ‘ಆತಂಕಕಾರಿʼ ವರದಿ

ಭಾರತದ ಇತರೆ ಕಂಪೆನಿಗಳೂ ಕೂಡ ಫೋರ್ಬ್ಸ್ ಶ್ರೇಯಾಂಕದಲ್ಲಿ ಸ್ಥಾನವನ್ನು ಪಡೆದಿವೆ. ಟಾಪ್ 100ರ ಒಳಗೆ ಸ್ಥಾನ ಪಡೆದ ಭಾರತದ ಇತರೆ ಕಂಪೆನಿಗಳೆಂದರೆ, ಐಸಿಐಸಿಐ ಬ್ಯಾಂಕ್ 65ನೇ ಸ್ಥಾನದಲ್ಲಿ, ಎಚ್ಡಿಎಫ್ಸಿ ಬ್ಯಾಂಕ್ 77ನೇ ಸ್ಥಾನದಲ್ಲಿ ಮತ್ತು ಎಚ್ಸಿಎಲ್ ಟೆಕ್ನಾಲಜೀಸ್ 90ನೇ ಸ್ಥಾನ. ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) 119 ಮತ್ತು ಲಾರ್ಸೆನ್ ಆಂಡ್ ಟೌಬ್ರೊ 127ನೇ ಸ್ಥಾನದಲ್ಲಿವೆ. ಹಾಗೆಯೇ ಇನ್ಫೋಸಿಸ್ 588, ಟಾಟಾ ಗ್ರೂಪ್ 746 ಮತ್ತು ಜೀವ ವಿಮಾ ನಿಗಮ (ಎಲ್‌ಐಸಿ) 504ನೇ ಸ್ಥಾನ ಪಡೆದಿವೆ. ಜಾಗತಿಕ ಶ್ರೇಯಾಂಕದಲ್ಲಿ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ದಕ್ಷಿಣ ಕೊರಿಯಾದ ದಿಗ್ಗಜ ಸಂಸ್ಥೆ ಸ್ಯಾಮ್ಸಂಗ್ ಮುಡಿಗೇರಿಸಿಕೊಂಡಿದೆ. ಬಳಿಕ ಅಮೆರಿಕದ ಐಬಿಎಂ, ಮೈಕ್ರೋಸಾಫ್ಟ್, ಅಮೇಜಾನ್, ಆಪಲ್, ಆಲ್ಫಾಬೆಟ್ ಮತ್ತು ಡೆಲ್ ಟೆಕ್ನಾಲಜೀಸ್ ಇವೆ. ಚೀನಾದ ಹುವೈ ಜಗತ್ತಿನ 8ನೇ ಅತ್ಯುತ್ತಮ ಉದ್ಯೋಗದಾತ ಎನಿಸಿಕೊಂಡಿದೆ.

ಇದನ್ನೂ ಓದಿ:Children- Covaxin : 2 -18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ : ಕೊವಾಕ್ಸಿನ್‌ ತುರ್ತು ಬಳಕೆಗೆ ಗ್ರೀನ್‌ ಸಿಗ್ನಲ್‌

(“Relianceʼʼ first in India in Forbes List of ‘Employers of the World’ 2021)

Comments are closed.