Comedian Raju Srivastava Passes Away :ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್​ ವಿಧಿವಶ

ದೆಹಲಿ : Comedian Raju Srivastava Passes Away : ಬಾಲಿವುಡ್​ನ ಖ್ಯಾತ ಹಾಸ್ಯ ನಟ ರಾಜು ಶ್ರೀವಾತ್ಸವ್​ ಇಂದು ನಿಧನರಾಗಿದ್ದಾರೆ.ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ನಟ ರಾಜು ಶ್ರೀವಾತ್ಸವ್​ರಿಗೆ 58 ವರ್ಷ ವಯಸ್ಸಾಗಿತ್ತು. ಆಗಸ್ಟ್​ 10ರಂದು ಹೃದಯಾಘಾತಕ್ಕೆ ಒಳಗಾಗಿದ್ದ ರಾಜುರನ್ನು ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದಾದ ಬಳಿಕ ಅವರಿಗೆ ಮೆದುಳು ನಿಷ್ಕ್ರಿಯಗೊಂಡಿತ್ತು.


ಸ್ಟ್ಯಾಂಡ್​ ಅಪ್​ ಕಾಮಿಡಿ ಮೂಲಕ ಪ್ರಸಿದ್ಧಿ ಪಡೆದಿದ್ದ ರಾಜು ಶ್ರೀವಾತ್ಸವ್​​ ವ್ಯಾಯಾಮ ಮಾಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಈ ಬಗ್ಗೆ ರಾಜು ಶ್ರೀವಾತ್ಸವ್​ರ ಸೋದರ ಸಂಬಂಧಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು, ದಿನನಿತ್ಯದ ವ್ಯಾಯಾಮವನ್ನು ಮಾಡುತ್ತಿದ್ದ ವೇಳೆಯಲ್ಲಿ ಟ್ರೆಡ್​ಮಿಲ್​ನಲ್ಲಿದ್ದಾಗ ಇದ್ದಕ್ಕಿದ್ದಂತೆ ರಾಜು ಕುಸಿದು ಬಿದ್ದಿದ್ದರು. ಹೃದಯಾಘಾತಕ್ಕೆ ಒಳಗಾಗಿದ್ದ ರಾಜುರನ್ನು ಕೂಡಲೇ ದೆಹಲಿಯ ಏಮ್ಸ್​ಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ರಾಜು ಶ್ರೀವಾತ್ಸವ್​ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಮಾಹಿತಿ ನೀಡಿದ್ದರು. ರಾಜು ಶ್ರೀವಾತ್ಸವ್​ ನಿಧನದ ಬಗ್ಗೆ ಅವರ ಕುಟುಂಬಸ್ಥರು ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ. ಖ್ಯಾತ ಸ್ಟ್ಯಾಂಡ್​​ ಅಪ್​ ಕಾಮಿಡಿಯನ್​ ನಿಧನಕ್ಕೆ ಬಾಲಿವುಡ್​ ಚಿತ್ರರಂಗ ಹಾಗೂ ಅಪಾರ ಅಭಿಮಾನಿ ಬಳಗ ಕಂಬನಿ ಮಿಡಿದಿದೆ.

ರಾಜು ಶ್ರೀವಾಸ್ತವ್ ತಮ್ಮ ಸಮಯೋಚಿತ ಹಾಸ್ಯ ಮತ್ತು ಕಾಮಿಕ್ ಟೇಕ್‌ಗಳ ಮೂಲಕ ಸ್ಟ್ಯಾಂಡ್-ಅಪ್ ಕಾಮಿಡಿ ಜಗತ್ತಿನಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದ್ದರು. 2005 ರಲ್ಲಿ ಅದರ ಮೊದಲ ಸೀಸನ್ ಪ್ರಥಮ ಪ್ರದರ್ಶನದೊಂದಿಗೆ ‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್’ ಎಂಬ ಮೊದಲ-ರೀತಿಯ ಸ್ಟ್ಯಾಂಡ್-ಅಪ್ ಕಾಮಿಡಿ ಟ್ಯಾಲೆಂಟ್ ಹಂಟ್ ಶೋನೊಂದಿಗೆ ಅವರು ಖ್ಯಾತಿಯನ್ನು ಪಡೆದರು.


ಬಾಲಿವುಡ್​​ನ ಮೈನೆ ಪ್ಯಾರ್​ ಕಿಯಾ, ಬಾಜಿಗರ್​, ಬಾಂಬೆ ಟು ಗೋವಾ ಹಾಗೂ ಆಮ್ದಾನಿ ಅಥಾನಿ ಖರ್ಚಾ ರುಪೈಯ್ಯಾ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ರಾಜು ಶ್ರೀವಾತ್ಸವ್​ ನಟಿಸಿದ್ದರು. ಬಿಗ್​ಬಾಸ್​ ಸೀಸನ್​ 3ಯಲ್ಲಿ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದರು. ಉತ್ತರ ಪ್ರದೇಶ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ರಾಜು ಶ್ರೀವಾತ್ಸವ್​ ಸೇವೆ ಸಲ್ಲಿಸುತ್ತಿದ್ದರು.

ಇದನ್ನು ಓದಿ : India vs Australia: ಬೌಲರ್ ಗಳೇ ಇರಲಿಲ್ಲ ಬಿಡಿ- ಹೀಗಿತ್ತು ಸೋಲಿನ ಬಳಿಕ ರೋಹಿತ್ ರಿಯಾಕ್ಷನ್

ಇದನ್ನೂ ಓದಿ : Billava Samaj :ಮುಖ್ಯಮಂತ್ರಿ ಹಾಗೂ ಸಚಿವ ಸುನಿಲ್​ ಕುಮಾರ್​ರಿಂದ ಬಿಲ್ಲವ ಸಮಾಜದ ವಿರುದ್ಧ ಷಡ್ಯಂತ್ರ : ಪ್ರಣವಾನಂದ ಸ್ವಾಮೀಜಿ

Comedian Raju Srivastava Passes Away At The Age Of 58

Comments are closed.