Billava Samaj :ಮುಖ್ಯಮಂತ್ರಿ ಹಾಗೂ ಸಚಿವ ಸುನಿಲ್​ ಕುಮಾರ್​ರಿಂದ ಬಿಲ್ಲವ ಸಮಾಜದ ವಿರುದ್ಧ ಷಡ್ಯಂತ್ರ : ಪ್ರಣವಾನಂದ ಸ್ವಾಮೀಜಿ

ಮಂಗಳೂರು : Billava Samaj : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವ ಸುನೀಲ್ ಕುಮಾರ್ ಈಡೀಗ ಬಿಲ್ಲವ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಲಬುರ್ಗಿಯ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು ನಿಗಮ‌ ಮಂಡಳಿ ಘೋಷಣೆ ಮಾಡಿ ಎಂದು ನಾವು ಬೇಡಿಕೆ ಇಟ್ಟಿದ್ದೆವು. ಆದ್ರೆ ಮುಖ್ಯಮಂತ್ರಿ ಹಾಗೂ ಸಚಿವ ಸುನಿಲ್ ಕುಮಾರ್ ಷಡ್ಯಂತ್ರ ಮಾಡಿದ್ದಾರೆ. ಬೆಂಗಳೂರಿನಲ್ಲಿ ಈಡೀಗ ಸಮುದಾಯದ ಕಾರ್ಯಕ್ರಮದಲ್ಲಿ 5 ಕೋಟಿ ಸಮುದಾಯ ಭವನ ನಿರ್ಮಾಣಕ್ಕೆ‌ ಕೊಡುತ್ತೇವೆ ಎಂದು ಹೇಳಿದ್ದಾರೆ. ಪುನೀತ್ ರಾಜ್ ಕುಮಾರ್ ಸ್ಪೂರ್ತಿ ದಿನ‌ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದ್ರೆ ನಿಗಮ ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ಸಿ.ಎಂ ಹೇಳಿದ್ದಾರೆ. ಈ ಮೂಲಕ ಬಿಲ್ಲವ ಈಡೀಗ ಸಮುದಾಯಕ್ಕೆ ಅನ್ಯಾಯ ವಂಚನೆ ಮಾಡಿದ್ದಾರೆ ಎಂದು ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

14 ಜಾತಿಗಳಿಗೆ ಈಗಾಗಲೇ ನಿಗಮ‌ ಮಂಡಳಿ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ತಾಕತ್ತು ದಮ್ಮು ಇದ್ದರೆ ನಿಗಮ ಮಂಡಳಿ ಬಗ್ಗೆ ಸ್ಪಷ್ಟನೆ ಕೊಡಿ ಎಂದು ಸ್ವಾಮೀಜಿ ಸವಾಲು ಹಾಕಿದರು. ಸಚಿವ ಸುನೀಲ್ ಕುಮಾರ್ ಸ್ವಾರ್ಥ, ರಾಜಕೀಯ ಲಾಭಕ್ಕಾಗಿ ಬಿಲ್ಲವ ಸಮುದಾಯವನ್ನು ಬಲಿ ಕೊಡುತ್ತಿದ್ದಾರೆ ಎಂದು ಆರೋಪಿಸಿದ ಸ್ವಾಮೀಜಿ ಮುಂದಿನ‌ ವಿಧಾನಸಭಾ ಚುನಾವಣೆಯಲ್ಲಿ ಈ ರಾಜಕೀಯ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದರು.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎರಡು ಪಕ್ಷಗಳು ಬಿಲ್ಲವ ಸಮುದಾಯಕ್ಕೆ ತಲಾ ಮೂರು ಸೀಟು ಕೊಡಬೇಕು ಎಂದು ಒತ್ತಾಯಿಸಿರುವ ಅವರು ಜಿಲ್ಲೆಯಲ್ಲಿ 5 ಲಕ್ಷದ 35 ಸಾವಿರ ಬಿಲ್ಲವ ಮತಗಳು ಎಂ.ಪಿ ಕ್ಷೇತ್ರದಲ್ಲಿ ಇದೆ ಎಂದರು. ಇನ್ನು ಪ್ರವೀಣ್ ಧರ್ಮಪತ್ನಿಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಕೊಡುವುದಾಗಿ ಸಿ.ಎಂ‌‌ ಹೇಳಿರುವ ಬಗ್ಗೆಯೂ ಮಾತನಾಡಿದ ಸ್ವಾಮೀಜಿ ಇದು ತಾತ್ಕಾಲಿಕ ಕೆಲಸ. ಮುಖ್ಯಮಂತ್ರಿ ಮನೆಗೆ ಹೋದ್ರೆ ನಾಳೆ ಕೆಲಸ ಇರೋದಿಲ್ಲ. ಹೀಗಾಗಿ ಮುಖ್ಯಮಂತ್ರಿ ಗೆ ತಾಕತ್ತು ಶಕ್ತಿ ಇದ್ದರೆ ಖಾಯಂ ಕೆಲಸ ನೀಡಿ ಎಂದು ಆಗ್ರಹಿಸಿದರು.

ಇನ್ನು ಬಸ್ ಸ್ಟ್ಯಾಂಡ್, ಮೆಟ್ರೋ, ಬಿಲ್ಡಿಂಗ್ ಗೆ ನಾರಾಯಣ ಗುರುಗಳ ಹೆಸರು ಬೇಡ ಎಂದು ಹೇಳಿರುವ ಪ್ರಣವಾನಂದ ಸ್ವಾಮೀಜಿ ನಿಜವಾಗಿ ಗುರುಗಳ ಮೇಲೆ ಭಕ್ತಿ ಇದ್ದರೆ ವಿಧಾನಸಭೆಯ ಹೊರಗಡೆ ಗುರುಗಳ ಮೂರ್ತಿ ಪ್ರತಿಷ್ಠಾಪಿಸಿ ಎಂದರು. ಬಿ.ಜೆ.ಪಿ ಸರ್ಕಾರದಲ್ಲಿರುವ ಬ್ರಾಹ್ಮಣ ಶಾಹಿ ನೇತಾರರ ದಾಸರಾಗಿ ನಮ್ಮ‌ ಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ ಎಂದ ಅವರು ಇವರಿಗೆ ಬಿಲ್ಲವ ಸಮುದಾಯದ ವೋಟು ಬೇಕು ಬಿಲ್ಲವರು ಬೇಡ ಎಂದರು. ಇದಕ್ಕೆ ಅಂತ್ಯ ಹಾಡದಿದ್ದರೆ ವಿಧಾನಸಭೆಗೆ ಪಾದಯಾತ್ರೆ ನಡೆಸುತ್ತೇವೆ ಎಂದು ಎಚ್ಚರಿಸಿದ ಸ್ವಾಮೀಜಿ 2023 ರ ಚುನಾವಣೆಯಲ್ಲಿ ಬಿಲ್ಲವ ಈಡೀಗ ಸಮುದಾಯದ ಮುಖ್ಯಮಂತ್ರಿ ಆಡಳಿತಕ್ಕೆ ಬರುತ್ತಾರೆ ಎಂದು ಭವಿಷ್ಯ ನುಡಿದರು. ಸದ್ಯ ಡಾ ಪ್ರಣವಾನಂದ ಸ್ವಾಮೀಜಿಯವರ ಈ ಎಲ್ಲಾ ಹೇಳಿಕೆಗಳು ಭಾರಿ ಚರ್ಚೆಗೆ ಕಾರಣವಾಗಿದ್ದು ರಾಜಕೀಯವಾಗಿ‌ ಏನೆಲ್ಲಾ ಬದಲಾವಣೆಗೆ ಕಾರಣವಾಗಲಿದೆ ಎಂದು ಕಾದು ನೋಡಬೇಕಿದೆ.

ಇದನ್ನು ಓದಿ : Fire and Accident: ಅಗ್ನಿ ಅನಾಹುತ ಮೂವರು ಸಾವು..ಲಾರಿ ಹರಿದು ನಾಲ್ವರು ಬಲಿ

ಇದನ್ನೂ ಓದಿ : India vs Australia: ಬೌಲರ್ ಗಳೇ ಇರಲಿಲ್ಲ ಬಿಡಿ- ಹೀಗಿತ್ತು ಸೋಲಿನ ಬಳಿಕ ರೋಹಿತ್ ರಿಯಾಕ್ಷನ್

Conspiracy against Billava Samaj by Chief Minister and Minister Sunil Kumar: Pranavananda Swamiji

Comments are closed.