ಸೋಮವಾರ, ಏಪ್ರಿಲ್ 28, 2025
HomeBreakingಆಸ್ಪತ್ರೆಗಳ ಕಾರ್ಯವೈಖರಿಗೆ ನಟ ಜಗ್ಗೇಶ್ ಅಸಮಧಾನ…! ವ್ಯವಸ್ಥೆ ಪಾರದರ್ಶಕಗೊಳಿಸುವಂತೆ ಸಿಎಂಗೆ ಮನವಿ…!!

ಆಸ್ಪತ್ರೆಗಳ ಕಾರ್ಯವೈಖರಿಗೆ ನಟ ಜಗ್ಗೇಶ್ ಅಸಮಧಾನ…! ವ್ಯವಸ್ಥೆ ಪಾರದರ್ಶಕಗೊಳಿಸುವಂತೆ ಸಿಎಂಗೆ ಮನವಿ…!!

- Advertisement -

ಕೋವಿಡ್-19 ಸೋಂಕಿತರ ಕುಟುಂಬದವರ ಸಂಕಷ್ಟದ ಕುರಿತು ಸರಣಿ ಟ್ವೀಟ್ ಮೂಲಕ ಅಸಮಧಾನ ವ್ಯಕ್ತಪಡಿಸಿದ್ದ ನಟ ಹಾಗೂ ಬಿಜೆಪಿ ನಾಯಕ ಜಗ್ಗೇಶ್, ಇದೀಗ ಖಾಸಗಿ ಆಸ್ಪತ್ರೆಗಳ ಕಾರ್ಯವೈಖರಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಇದರಿಂದಲೇ ಸರ್ಕಾರಕ್ಕೆ ಕೆಟ್ಟ ಹೆಸರು ಎಂದಿರುವ  ಜಗ್ಗೇಶ್ ಪಾರದರ್ಶಕ ವ್ಯವಸ್ಥೆಗೆ ಆಗ್ರಹಿಸಿದ್ದಾರೆ.

https://kannada.newsnext.live/breaking/sandalwood-shivrajkumar-mangli-telugu-singer-movie-acting/ಮುಖ್ಯಮಂತ್ರಿಗಳಿಂಗ ಕ್ರಮಬಯಸಿ ಟ್ವೀಟ್ ಮಾಡಿರುವ ನಟ ಜಗ್ಗೇಶ್, ಕೊವೀಡ್ ರೋಗಿಗಳು ಆಸ್ಪತ್ರೆಗೆ ದಾಖಲಾದ ಎರಡು ಮೂರು ದಿನದಲ್ಲಿ ಸಾವು ಸಂಭವಿಸುತ್ತಿದೆ. ಇದು ನನ್ನ ಗಮನಕ್ಕೂ ಬಂದಿದೆ. ಆದರೆ ಆಸ್ಪತ್ರೆಗಳು ರೋಗಿಗಳ ಸಂಬಂಧಿಕರಿಗೆ ಸೂಕ್ತ ಮಾಹಿತಿ ನೀಡುತ್ತಿಲ್ಲ. ಇದರಿಂದ ರೋಗಿಗೆ ಏನು ಚಿಕಿತ್ಸೆ ನೀಡಿದರೂ, ಯಾವುದರಿಂದ ಸಾವಾಯಿತು ಎಂಬ ಮಾಹಿತಿ ಸಿಗೋದಿಲ್ಲ.

ತಾಯ್ನಾಡಿನ ಸಂಕಷ್ಟಕ್ಕೆ ಮಿಡಿದ ಬಾಲಿವುಡ್ ನಟಿ…! ಭಾರತಕ್ಕೆ ಸಹಾಯ ನೀಡುವಂತೆ ಅಮೇರಿಕಾಕ್ಕೆ ಮನವಿ ಮಾಡಿದ ಪ್ರಿಯಾಂಕಾ…!!

ಅಲ್ಲದೇ ಸತ್ತ ಮೇಲೂ ಹೆಣವನ್ನು ಕುಟುಂಬಸ್ಥರಿಗೆ ನೋಡಲು ಬಿಡುತ್ತಿಲ್ಲ. ಹೀಗಾಗಿ ಕುಟುಂಬಸ್ಥರಿಗೆ ಏನಾಗುತ್ತಿದೆ ಎಂಬುದೇ ಅರಿವಾಗುತ್ತಿಲ್ಲ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿದೆ. ಕೆಲವರು ಇದೇ ಮಾಹಿತಿಯನ್ನೇ ತಿರುಚಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.

ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ  ವ್ಯವಸ್ಥೆ ಪಾರದರ್ಶಕವಾಗಿರಬೇಕು. ಇದರಿಂದ ರೋಗಿಗಳ ಕುಟುಂಬಸ್ಥರಿಗೆ ಸೋಂಕಿತರ ಆರೋಗ್ಯದ ಬಗ್ಗೆ ಸೂಕ್ತ ಮಾಹಿತಿ ದೊರೆಯುವಂತಾಗುತ್ತದೆ ಎಂದು ಆಗ್ರಹಿಸಿದ್ದು, ಟ್ವೀಟ್ ನಲ್ಲಿ ಸಿಎಂ ಹಾಗೂ ಆರೋಗ್ಯ ಸಚಿವರನ್ನು ಟ್ಯಾಗ್ ಮಾಡಿದ್ದಾರೆ.

https://kannada.newsnext.live/breaking/corona-covid-19-bollywood-maldives-india-ban-celebrities/ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ  ವ್ಯವಸ್ಥೆ ಪಾರದರ್ಶಕವಾಗಿರಬೇಕು. ಇದರಿಂದ ರೋಗಿಗಳ ಕುಟುಂಬಸ್ಥರಿಗೆ ಸೋಂಕಿತರ ಆರೋಗ್ಯದ ಬಗ್ಗೆ ಸೂಕ್ತ ಮಾಹಿತಿ ದೊರೆಯುವಂತಾಗುತ್ತದೆ ಎಂದು ಆಗ್ರಹಿಸಿದ್ದು, ಟ್ವೀಟ್ ನಲ್ಲಿ ಸಿಎಂ ಹಾಗೂ ಆರೋಗ್ಯ ಸಚಿವರನ್ನು ಟ್ಯಾಗ್ ಮಾಡಿದ್ದಾರೆ.

ರುಂಡ ಮುಂಡ ತುಂಡರಿಸಿ ಸಹೋದರನ ಹತ್ಯೆ : ಸ್ಯಾಂಡಲ್‌ವುಡ್ ನಟಿ ಅರೆಸ್ಟ್

ಇತ್ತೀಚಿಗಷ್ಟೇ ಕೊರೋನಾ ಸೋಂಕಿತ ಶವಗಳ ಸಾಗಾಟ ಹಾಗೂ ಅಂತ್ಯಸಂಸ್ಕಾರಕ್ಕಾಗಿ  ದುಡ್ಡು ಪೀಕುವ ಪ್ರವೃತ್ತಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಜಗ್ಗೇಶ್, ನಾಯಿಗಳಂತೆ ಕಿತ್ತುತಿನ್ನಬೇಡಿ. ಮುಂದೊಂದು ದಿನ ಅನ್ನವಿಲ್ಲದೇ ಸಾಯುತ್ತಿರಾ ಎಂದು ಶಾಪ ಹಾಕಿದ್ದರು.

RELATED ARTICLES

Most Popular