role of Aryavardhan : ಜೊತೆ ಜೊತೆಯಲಿ ಆರ್ಯವರ್ಧನ್​ ಪಾತ್ರಕ್ಕೆ ಕೇಳಿ ಬರ್ತಿದೆ ಸಿ.ಟಿ ರವಿ ಹೆಸರು

role of Aryavardhan : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಎಲ್ಲರ ಮನೆ ಮಾತಾಗಿರುವ ಧಾರಾವಾಹಿ ಜೊತೆ ಜೊತೆಯಲಿ ಸಧ್ಯ ತನ್ನ ನಾಯಕನ ಹುಡುಕಾಟದಲ್ಲಿದೆ. ಆರ್ಯವರ್ಧನ್​ ಪಾತ್ರದಲ್ಲಿ ನಟಿಸುತ್ತಿದ್ದ ಅನಿರುದ್ಧ ಸೀರಿಯಲ್​ ತಂಡದ ಜೊತೆಯಲ್ಲಿ ಕಿರಿಕ್​ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಕಳುಹಿಸಲಾಗಿದೆ. ಮಾತ್ರವಲ್ಲದೇ 2 ವರ್ಷಗಳ ಕಾಲ ಯಾವುದೇ ಚಾನೆಲ್​ಗಳಲ್ಲಿ ಅವರಿಗೆ ಧಾರವಾಹಿ ಅಥವಾ ರಿಯಾಲಿಟಿ ಶೋಗಳಲ್ಲಿ ಅವಕಾಶ ನೀಡಬಾರದು ಎಂದೂ ತೀರ್ಮಾನವಾಗಿದೆ.


ನಾನು ಮತ್ತೆ ಧಾರವಾಹಿಗೆ ಬರ್ತೇನೆ ಎಂದು ಅನಿರುದ್ಧ ಹೇಳಿದ್ದರೂ ಸಹ ಆರೂರು ಜಗದೀಶ್​ ಮಾತ್ರ ತಮ್ಮ ನಿರ್ಧಾರದಲ್ಲಿ ಎಳ್ಳಷ್ಟು ಬದಲಾವಣೆ ಮಾಡಿಲ್ಲ. ಅಲ್ಲದೇ ಹೇಗಾದರೂ ಮಾಡಿ ಅನಿರುದ್ಧ ಇಲ್ಲದೆಯೂ ಈ ಧಾರವಾಹಿ ಟಾಪ್​ ಸ್ಥಾನದಲ್ಲಿ ಇರುತ್ತೆ ಎಂಬುದನ್ನು ಸಾಬೀತುಪಡಿಸುವ ಪ್ರಯತ್ನದಲ್ಲಿದ್ದಾರೆ. ಹೀಗಾಗಿ ಅನಿರುದ್ಧಗೆ ಹೋಲಿಕೆಯಾಗುವಂತಹ ವ್ಯಕ್ತಿಯನ್ನೇ ಆರ್ಯವರ್ಧನ್​ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಬೇಕೆಂದು ಧಾರವಾಹಿ ತಂಡ ಯೋಚಿಸುತ್ತಿದೆ.


ಈಗಾಗಲೇ ನಿರ್ದೇಶಕ ಅನೂಪ್​ ಭಂಡಾರಿಗೆ ಜೊತೆ ಜೊತೆಯಲಿ ಧಾರವಾಹಿ ತಂಡ ಕರೆ ಮಾಡಿತ್ತು. ಆದರೆ ತಮ್ಮ ಮುಂದಿನ ಸಿನಿಮಾದ ತಯಾರಿಯಲ್ಲಿ ನಿರತರಾಗಿರುವ ಅನೂಪ್​ ಭಂಡಾರಿ ಧಾರವಾಹಿಯಲ್ಲಿ ನಟಿಸಲು ತಮಗೆ ಸಮಯಾವಕಾಶವಿಲ್ಲ ಎಂದು ಹೇಳಿ ಈ ಆಫರ್​ ತಿರಸ್ಕರಿಸಿದ್ದರು. ಸ್ವತಃ ಅನೂಪ್​ ಭಂಡಾರಿ ಈ ಬಗ್ಗೆ ಮಾಹಿತಿ ಕೂಡ ಹಂಚಿಕೊಂಡಿದ್ದರು.

ಈ ಎಲ್ಲದರ ನಡುವೆ ಇದೀಗ ಜೊತೆ ಜೊತೆಯಲಿ ಧಾರವಾಹಿ ಮುಖ್ಯ ಪಾತ್ರಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೆಸರು ಕೇಳಿ ಬರ್ತಿದೆ. ಧಾರವಾಹಿ ತಂಡ ಮುಖ್ಯ ಪಾತ್ರಧಾರಿಯ ಹುಡುಕಾಟದಲ್ಲಿ ಇರುವುದು ನೆಟ್ಟಿಗರ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ನೆಟ್ಟಿಗರೇ ಈ ಹೆಸರನ್ನು ಹೇಳ್ತಿದ್ದಾರೆ. ಅಲ್ಲದೇ ಸಿ.ಟಿ ರವಿ ಆರ್ಯವರ್ಧನ್​ರಂತೆಯೇ ತಯಾರಾಗಿರುವ ಹಳೆಯ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಸಿ.ಟಿ ರವಿ ಆರ್ಯವರ್ಧನ್​ರಂತೆಯೇ ಗಡ್ಡ,ಮೀಸೆ ಹೊಂದಿರೋದ್ರಿಂದ ಅವರನ್ನೇಕೆ ನೀವು ಸಂಪರ್ಕಿಸಬಾರದು ಅಂತಾ ಧಾರಾವಾಹಿ ತಂಡಕ್ಕೆ ನೆಟ್ಟಿಗರು ಸಲಹೆ ನೀಡಿದ್ದಾರೆ.

ಇದನ್ನು ಓದಿ : iPhone 14 launch date : ಬಿಡುಗಡೆಯಾಗಲಿದೆ ಐಫೋನ್ 14, ಬೆಲೆ ಎಷ್ಟು ಏನಿದರ ವೈಶಿಷ್ಟ್ಯತೆ

ಇದನ್ನೂ ಓದಿ : Music Therapy : ಸಂಗೀತದಿಂದ ಸ್ವಾಸ್ಥ್ಯ : ಸಾಮಾನ್ಯ ಮಾನಸಿಕ ಆರೋಗ್ಯ ಸುಧಾರಣೆಗೆ ಇದು ಬಹಳ ಮುಖ್ಯ

CT Ravi’s name has been heard for the role of Aryavardhan

Comments are closed.