“ದರ್ಶನ್ 56” ಕುರಿತು ಹೊಸ ಅಪ್‌ಡೇಟ್ ಕೊಟ್ಟ ರಾಕ್‌ಲೈನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ತರುಣ್ ಸುಧೀರ್ (Darshan – Tarun Sudhir) ಕಾಂಬಿನೇಶನ್‌ನ ಎರಡನೇ ಸಿನಿಮಾ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಾಗುತ್ತಿದೆ. ಈ ಹಿಂದೆ ರಾಬರ್ಟ್ ಮೂಲಕ ದೊಡ್ಡ ಹಿಟ್ ನೀಡಿದ್ದ ಈ ಜೋಡಿ ಮತ್ತೊಮ್ಮೆ ಮೋಡಿ ಮಾಡಲಿದೆ ಎಂಬ ನಿರೀಕ್ಷೆ ಇದ್ದು, ವಿಶೇಷವಾಗಿ ದರ್ಶನ್ ಅಭಿಮಾನಿಗಳಿಗೆ ಈ ಸಿನಿಮಾದ ಮೇಲೆ ನಿರೀಕ್ಷೆ ಇದೆ. ಸದ್ಯ ಕ್ರಾಂತಿ ಸಿನಿಮಾದಲ್ಲಿ ನಿರತರಾಗಿದ್ದರೂ ಸಹ ದರ್ಶನ್ ಅಭಿಮಾನಿಗಳ ಕಣ್ಣು ತರುಣ್ ಸುಧೀರ್ ನಿರ್ದೇಶನದ ಮುಂದಿನ ಸಿನಿಮಾದ ಮೇಲೆಯೇ ಇತ್ತು. ಹಲವು ದಿನಗಳ ಹಿಂದಿನಿಂದಲೂ ನಮ್ಮ ಹೋಪ್ ಎಲ್ಲಾ ದರ್ಶನ್ 56 ಮೇಲೆ ಹೆಚ್ಚಿದೆ ಎಂದು ಹೇಳುತ್ತಿದ್ದ ದರ್ಶನ್ ಫ್ಯಾನ್ಸ್ ಸಿನಿತಂಡದ ಬಳಿ ಅಪ್‌ಡೇಟ್ ಯಾವಾಗ ಎಂದು ಪದೇ ಪದೇ ಕೇಳುತ್ತಿದ್ದರು. ಈ ಕುರಿತಂತೆ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅಪ್‌ಡೇಟ್‌ ಕೊಟ್ಟಿದ್ದಾರೆ.

ಇನ್ನು ಅಭಿಮಾನಿಗಳು ಎಷ್ಟೇ ಕೇಳಿದರೂ ಈ ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದ ಸಿನಿತಂಡ ಇಂದು ( ಫೆಬ್ರವರಿ 10 ) ಸಿನಿಮಾದ ಕುರಿತಾಗಿ ಅಪ್‌ಡೇಟ್ ಒಂದನ್ನು ನೀಡುವ ಮೂಲಕ ಹೈಪ್ ಎಂಬ ಬೆಂಕಿಗೆ ಪೆಟ್ರೋಲ್ ಸುರಿದಿದೆ. ಹೌದು, ತರುಣ್ ಸುಧೀರ್ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಂತೆಯೇ ಸಂಜೆ ಸರಿಯಾಗಿ 4.02ಕ್ಕೆ ದರ್ಶನ್ 56ನೇ ಸಿನಿಮಾದ ವಿಶೇಷ ಅಪ್‌ಡೇಟ್ ಒಂದು ಪೋಸ್ಟರ್ ಸಮೇತ ಹೊರಬಿದ್ದಿದೆ. ಹಲವು ಅಭಿಮಾನಿಗಳು ನಿರೀಕ್ಷಿಸಿದಂತೆ ದರ್ಶನ್ ಹುಟ್ಟುಹಬ್ಬದ ದಿನದಂದು ಸಿನಿಮಾದ ಟೈಟಲ್ ಬಿಡುಗಡೆಯಾಗಲಿದೆ ಎನ್ನುವುದು ಈ ಅಪ್‌ಡೇಟ್ ಆಗಿದೆ.

ಈ ಸಿನಿಮಾಕ್ಕೆ ಬಂಡವಾಳ ಹೂಡಲಿರುವ ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಅಪ್‌ಡೇಟ್ ಅನ್ನು ನೀಡಿದ್ದು, ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಅಂದರೆ ಇದೇ ಫೆಬ್ರವರಿ 16ಕ್ಕೆ ಸಿನಿಮಾದ ಟೈಟಲ್ ಏನೆಂಬುದು ರಿವೀಲ್ ಆಗಲಿದೆ ಎಂಬುದನ್ನು ಪ್ರಕಟಿಸಿದೆ. ಇನ್ನು ದರ್ಶನ್ ನಟನೆಯ ಹಿಂದಿನ ಸಿನಿಮಾಗಳ ಪೋಸ್ಟರ್ ಕುರಿತಾಗಿ ಅವರ ಅಭಿಮಾನಿಗಳಲ್ಲಿಯೇ ಬೇಸರ ಇದ್ದದ್ದು ಬಹುತೇಕರಿಗೆ ತಿಳಿದಿರುವ ವಿಷಯವೇ. ಪೋಸ್ಟರ್ ಕ್ವಾಲಿಟಿ ಚೆನ್ನಾಗಿಲ್ಲ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದೂ ಇದೆ.

ಇನ್ನು ಸ್ಟಾರ್ ನಟನೋರ್ವನ ಸಿನಿಮಾದ ಪೋಸ್ಟರ್ ಎಂದರೆ ಹೇಗಿರಬೇಕು ಗೊತ್ತಾ ಎಂದು ಅಂದು ಕಿಡಿಕಾರಿದ್ದ ಅಭಿಮಾನಿಗಳು ಈಗ ಈ ಅಪ್‌ಡೇಟ್ ಪೋಸ್ಟರ್ ನೋಡಿ ಪೋಸ್ಟರ್ ಎಂದರೆ ಹೀಗಿರಬೇಕು ಎಂದಿದ್ದಾರೆ. ಕೇವಲ ಅಪ್‌ಡೇಟ್ ನೀಡುವುದಕ್ಕಾಗಿ ಬಿಡುಗಡೆ ಮಾಡಲಿರುವ ಪೋಸ್ಟರ್ ಸಖತ್ ಕ್ಯಾಚಿಯಾಗಿದ್ದು, ಸಿನಿಮಾದ ಉಳಿದ ಪೋಸ್ಟರ್‌ಗಳು ನೆಕ್ಸ್ಟ್ ಲೆವೆಲ್‌ನಲ್ಲಿ ಇರುವುದಂತೂ ಖಚಿತ. ಈ ಪೋಸ್ಟರ್‌ನಲ್ಲಿ ಡಿ56 ಎಂದು ದೊಡ್ಡದಾಗಿ ಬರೆಯಲಾಗಿದ್ದು, ಪೋಸ್ಟರ್‌ನಲ್ಲಿ ಲಾಂಗ್ ಸೇರಿದಂತೆ ಹಲವು ಅಸ್ತ್ರಗಳು ಹಾಗೂ ಬೆಂಕಿ ಉರಿಯುತ್ತಿರುವುದು ಸಿನಿಮಾ ಹೋರಾಟವೊಂದರ ಕಥೆ ಹೊಂದಿರಲಿದೆ ಎಂಬುದನ್ನು ತಿಳಿಸುತ್ತಿದೆ.

ಇದನ್ನೂ ಓದಿ : ಸುಪ್ರೀಂ ಕೋರ್ಟ್ ಆದೇಶದಿಂದ ‘ಕಾಂತಾರ’ ಸಿನಿತಂಡ ನಿರಾಳ

ಇದನ್ನೂ ಓದಿ : ಬಹುಭಾಷಾ ನಟಿ ಶ್ರೀದೇವಿ ಜೀವನ ಚರಿತ್ರೆ : ಬಯಲಾಗುತ್ತಾ ಖ್ಯಾತ ನಟಿಯ ಸಾವಿನ ರಹಸ್ಯ

ಇದನ್ನೂ ಓದಿ : ವಾಲ್ಮೀಕಿ ಜಾತ್ರೆಗೆ ಸುದೀಪ್ ಗೈರು : “ಸುದೀಪ್ ಅಣ್ಣನದ್ದು ಎಳ್ಳೆ ಕಾಳಷ್ಟು ತಪ್ಪಿಲ್ಲ” ಎಂದ ರಾಜುಗೌಡ್ರು

ಸದ್ಯ ಈ ಸಿನಿಮಾದ ಟೈಟಲ್ ಏನಿರಬಹುದು ಎಂಬ ಕುತೂಹಲ ಹಾಗೂ ಊಹೆ ಹೆಚ್ಚಾಗಿದ್ದು, ಕಾಟೇರ ಎಂದ ಈ ಸಿನಿಮಾಕ್ಕೆ ಹೆಸರಿಡಲಾಗಿದೆ ಎಂದು ಕೆಲ ದಿನಗಳಿಂದ ಹಿಂದೆ ಸುದ್ದಿ ಹಬ್ಬಿತ್ತು ಹಾಗೂ ಇತ್ತೀಚೆಗಿನ ಕೆಲ ದಿನಗಳ ಹಿಂದೆ ಈ ಸಿನಿಮಾದ ಹೆಸರು ಚೌಡಯ್ಯ ಅಂತೆ ಎಂದೂ ಸಹ ಸುದ್ದಿ ಹರಿದಾಡಿತ್ತು. ಈ ಎರಡರಲ್ಲಿ ಯಾವುದು ಸಿನಿಮಾದ ಟೈಟಲ್ ಅಥವಾ ಈ ಎರಡನ್ನು ಹೊರತುಪಡಿಸಿ ಬೇರೆ ಶೀರ್ಷಿಕೆ ಏನಾದರೂ ಇರಬಹುದಾ ಎಂಬ ಪ್ರಶ್ನೆಯೂ ಸಹ ಮೂಡಿದೆ.

Darshan – Tarun Sudhir : Newly updated Rockline on “Darshan 56”.

Comments are closed.