Ranji Trophy semifinal : ಚಿನ್ನಸ್ವಾಮಿಯಲ್ಲಿ ಸೌರಾಷ್ಟ್ರ ಸವಾರಿ, ಕರ್ನಾಟಕದ ಫೈನಲ್ ಕನಸು ಬಹುತೇಕ ಭಗ್ನ

ಬೆಂಗಳೂರು: ರಣಜಿ ಚಾಂಪಿಯನ್ ಆಗುವ ಕರ್ನಾಟಕ ತಂಡದ ಕನಸು ಈ ಬಾರಿಯೂ ಬಹುತೇಕ ಭಗ್ನಗೊಂಡಿದೆ. ಕರ್ನಾಟಕ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್ (Ranji Trophy semifinal) ಪಂದ್ಯದಲ್ಲಿ ಪ್ರವಾಸಿ ಸೌರಾಷ್ಟ್ರ ತಂಡ ಇನ್ನಿಂಗ್ಸ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಸೆಮಿಫೈನಲ್ ಪಂದ್ಯದಲ್ಲಿ (Karnataka Vs Saurashtra Ranji Trophy Semi final) ಕರ್ನಾಟಕದ 407 ರನ್’ಗಳಿಗೆ ದಿಟ್ಟ ಉತ್ತರ ನೀಡುತ್ತಿರುವ ಸೌರಾಷ್ಟ್ರ 3ನೇ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 364 ರನ್ ಕಲೆ ಹಾಕಿದೆ. ಅತ್ಯಮೂಲ್ಯ ಇನ್ನಿಂಗ್ಸ್ ಮುನ್ನಡೆ ಪಡೆಯಲು ಸೌರಾಷ್ಟ್ರಕ್ಕೆ ಬೇಕಿರುವುದಿನ್ನು ಕೇವಲ 43 ರನ್. ಐದು ದಿನಗಳ ಪಂದ್ಯ ಒಂದು ವೇಳೆ ಡ್ರಾಗೊಂಡರೂ ಇನ್ನಿಂಗ್ಸ್ ಮುನ್ನಡೆ ಪಡೆದ ತಂಡ ಫೈನಲ್ ಪ್ರವೇಶಿಸಲಿದೆ.

2ನೇ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದ್ದ ಸೌರಾಷ್ಟ್ರ 3ನೇ ದಿನ ಆರಂಭದಲ್ಲೇ 92ರ ಮೊತ್ತದಲ್ಲಿ ಹಾರ್ವಿಕ್ ದೇಸಾಯಿ (33) ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕರ್ನಾಟಕ ಸ್ಪಷ್ಟ ಮೇಲುಗೈ ಸಾಧಿಸಿತ್ತು. ಆದರೆ 4ನೇ ವಿಕೆಟ್’ಗೆ ಜೊತೆಯಾದ ಅನುಭವಿ ಬ್ಯಾಟ್ಸ್’ಮನ್ ಶೆಲ್ಡನ್ ಜಾಕ್ಸನ್ ಮತ್ತು ನಾಯಕ ಅರ್ಪಿಸ್ ವಸವಾಡ ಕರ್ನಾಟಕದ ಮೇಲುಗೈಗೆ ತಡೆಯಾಗಿ ನಿಂತರು. ಈ ಜೋಡಿ 4ನೇ ವಿಕೆಟ್’ಗೆ ಭರ್ಜರಿ 232 ರನ್’ಗಳ ಜೊತೆಯಾಟವಾಡಿ ಕರ್ನಾಟಕದ ಇನ್ನಿಂಗ್ಸ್ ಮುನ್ನಡೆಯ ಕನಸಿಗೆ ಬಹುತೇಕ ಕೊಳ್ಳಿ ಇಟ್ಟಿದೆ.

2ನೇ ದಿನ ಕರ್ನಾಟಕ ತಂಡದ ಉಪನಾಯಕ ಆರ್.ಸಮರ್ಥ್ ಸ್ಲಿಪ್’ನಲ್ಲಿ ನೀಡಿದ ಜೀವದಾನವನ್ನು ಬಳಸಿಕೊಂಡ ಶೆಲ್ಡನ್ ಜಾಕ್ಸನ್ ಅಮೋಘ 160 ರನ್ ಗಳಿಸಿ ಔಟಾದ್ರೆ, ನಾಯಕ ಅರ್ಪಿತ್ ವಸವಾಡ 112 ರನ್’ಗಳೊಂದಿಗೆ 4ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ನಾಯಕನ ಜೊತೆ ಅಜೇಯ 19 ರನ್ ಗಳಿಸಿರುವ ಚಿರಾಗ್ ಜಾನಿ ಕ್ರೀಸ್’ನಲ್ಲಿದ್ದಾರೆ. ಇದಕ್ಕೂ ಮೊದಲು ಕರ್ನಾಟಕ ತಂಡ ನಾಯಕ ಮಯಾಂಕ್ ಅಗರ್ವಾಲ್ ಅವರ ಭರ್ಜರಿ ದ್ವಿಶತಕದ (249) ನೆರವಿನಿಂದ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 407 ರನ್ ಕಲೆ ಹಾಕುವಲ್ಲಿ ಯಶಸ್ವಿಯಾಗಿತ್ತು.

ಇದನ್ನೂ ಓದಿ : Ball Tampering : ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್: ರವೀಂದ್ರ ಜಡೇಜಾ ಮಾಡಿದ್ದೇನು ? ಇಲ್ಲಿದೆ ಸಂಪೂರ್ಣ ವಿವರ

ಇದನ್ನೂ ಓದಿ : Ravindra Jadeja : ಕಂಬ್ಯಾಕ್ ಪಂದ್ಯದಲ್ಲೇ ಜಡೇಜಾ ಭರ್ಜರಿ ಬೌಲಿಂಗ್, ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ಕಾಂಗರೂಗಳು

Karnataka Vs Saurashtra Ranji Trophy semifinal May defeat Karnataka

Comments are closed.