ಜೈಲಿನಲ್ಲಿ ನಟ ದರ್ಶನ್ ಹೊಸ ಕಿರಿಕ್ : ಸಹಕೈದಿಗಳಿಗೆ ರೇಣುಕಾಸ್ವಾಮಿ ಹಂತಕನಿಂದ ಕಿರುಕುಳ

ಜೈಲಿನಲ್ಲಿ ನನ್ನಿಂದ ಬದುಕಲು ಸಾಧ್ಯವಾಗುತ್ತಿಲ್ಲ. ನನಗೆ ವಿಷವುಣಿಸಿ ಅಂತಾ ನ್ಯಾಯಾಧೀಶರ ಎದುರು ನಾಟಕವಾಡಿದ್ದ ನಟ ದರ್ಶನ್ (Darshan thoogudeepa) ಇದೀಗ ಸಹಕೈದಿಗಳ ಪಾಲಿಗೆ ತಾನೇ ವಿಷವಾಗಿ ಪರಿಣಮಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜಾಮೀನು ಪಡೆದು ಟೆಂಪಲ್ ರನ್ ಮಾಡುತ್ತಿದ್ದ ದರ್ಶನ್ ಜೈಲಿಗೆ ಸೇರಿದ ಬಳಿಕ ಪರಪ್ಪನ ಅಗ್ರಹಾರದ ಕಠಿಣ ನಿಯಮಾವಳಿಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಇತರೆ ಕೈದಿಗಳಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ನಟ ಹಾಗೂ ಆರೋಪಿ ದರ್ಶನ್ ಇರುವ ಸೆಲ್ನಲ್ಲಿಯೇ ಈ ಪ್ರಕರಣದ ಇನ್ನಿತರ ಆರೋಪಿಗಳಾದ ನಾಗರಾಜು, ಪ್ರದೋಶ್, ಲಕ್ಷ್ಮಣ್ ,ಅನುಕುಮಾರ್ ಜಗ್ಗ ಇದ್ದಾರೆ. ಇದರಲ್ಲಿ ನಾಗರಾಜು ಒಬ್ಬಾತನನ್ನು ಬಿಟ್ಟು ಉಳಿದವರಿಗೆ ದರ್ಶನ್ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿದೆ.
ನಾಗರಾಜು ಒಬ್ಬರನ್ನು ಬಿಟ್ಟು ಉಳಿದವರಿಗೆ ತೀರಾ ಅವಾಚ್ಯ ಶಬ್ದಗಳಿಂದ ದರ್ಶನ್ ನಿಂದಿಸುತ್ತಿದ್ದಾರೆ ಎನ್ನಲಾಗಿದೆ. ಇದೇ ವಿಚಾರವಾಗಿ ದೊಡ್ಡ ಮಟ್ಟದ ಜಗಳವೇ ನಡೆದು ಹೋಗಿದ್ದು ಜೈಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಿದ್ದಾರೆ.
ಮಲಗಿಕೊಂಡಿರುವ ಆರೋಪಿಗಳನ್ನು ಕಾಲಿನಲ್ಲಿ ತುಳಿದು ದರ್ಶನ್ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿದೆ. ಇದೇ ಪ್ರಕರಣದ ಆರೋಪಿಗಳಾಗಿರುವ ಅನುಕುಮಾರ್ ಹಾಗೂ ಜಗದೀಶ್ ದರ್ಶನ್ ಕಾಟ ತಡೆಯಲು ಸಾಧ್ಯವಾಗದೇ ತಮ್ಮನ್ನು ಚಿತ್ರದುರ್ಗ ಜೈಲಿಗೆ ವರ್ಗಾಯಿಸಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇತ್ತ ಜಾಮೀನು ಸಿಗುತ್ತಿಲ್ಲ, ಅತ್ತ ದರ್ಶನ್ ಜೊತೆ ಒಂದೇ ಸೆಲ್ನಲ್ಲಿ ಇರಲಾಗುತ್ತಿಲ್ಲ. ದರ್ಶನ್ ಜೊತೆ ಇನ್ನು ಸ್ವಲ್ಪ ದಿನ ಇದ್ದರೂ ನಾವು ಸತ್ತೇ ಹೋಗುತ್ತೇವೆ ಎಂದು ಅನುಕುಮಾರ್ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ದರ್ಶನ್ ಇರುವ ಸೆಲ್ ಮೇಲೆ ಪೊಲೀಸರು ವಿಶೇಷ ನಿಗಾ ಇಟ್ಟಿದ್ದಾರೆ.
Darshan thoogudeepa new scandal in prison: Renukaswamy killer harassed fellow inmates



