ಫೆ.20 ರಂದು ಕಣ್ಣು ಹೊಡೆಯೋಕೆ ಬರ್ತಿದ್ದಾರೆ ದರ್ಶನ್….! ಹೆಚ್ಚಿದೆ ಅಭಿಮಾನಿಗಳ ಕಾತರ…!!

ಶಿವರಾತ್ರಿಯಂದು ಕನ್ನಡ ಹಾಗೂ ತೆಲುಗಿನಲ್ಲಿ ಅಬ್ಬರಿಸಲು ರಾಬರ್ಟ್ ಸಜ್ಜಾಗಿದ್ದು ಎರಡು ಹಿಟ್ ಹಾಡುಗಳ ಬಳಿಕ ಫೆ.20 ರಂದು ಮೂರನೇ ಹಾಡಿನ ಜೊತೆ ದಚ್ಚು ಎಂಟ್ರಿ ಕೊಡಲಿದ್ದಾರೆ.

ಫೆ.16 ರಂದು ದರ್ಶನ್ ಹುಟ್ಟುಹಬ್ಬದ ಅಂಗವಾಗಿ ದಚ್ಚು ಬಹುನೀರಿಕ್ಷಿತ ಚಿತ್ರ ರಾಬರ್ಟ್ ನ ಟ್ರೇಲರ್ ಬಿಡುಗಡೆಯಾಗಿದ್ದು ಇದುವರೆಗೂ 7 ಮಿಲಿಯನ್ ವೀಕ್ಷಣೆ ಪಡೆದಿದೆ. ಇದೀಗ ರಾಬರ್ಟ್ ಚಿತ್ರದ ಮೂರನೇ ಹಾಡನ್ನು ಫೆ.20 ರಂದು ಸಂಜೆ ಬಿಡುಗಡೆ ಮಾಡೋದಾಗಿ ನಿರ್ದೇಶಕ ತರುಣ್ ಸುಧೀರ್ ಮಾಹಿತಿ ನೀಡಿದ್ದಾರೆ.

ಪೆ.20 ರಂದು ಸಂಜೆ 4.05 ನಿಮಿಷಕ್ಕೆ ಕಣ್ಣು ಹೊಡೆಯೋಕಾ ಎಂಬ ಆಶಾ ಭಟ್ ಹಾಗೂ ದರ್ಶನ್ ಡ್ಯುಯೆಟ್ ಸಾಂಗ್ ರಿಲೀಸ್ ಆಗಲಿದ್ದು ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಆಗಲಿದೆ.

ಈಗಾಗಲೇ ಬಾ ಬಾ ನಾನು ರೆಡಿ ಹಾಗೂ ಜೈಶ್ರೀರಾಮ ಹಾಡುಗಳು ರೀಲಿಸ್ ಆಗಿದ್ದು ಸಖತ್ ಹಿಟ್ ಆಗಿದೆ. ಇದರ ಬೆನ್ನಲ್ಲೇ ಚಿತ್ರ ಬಿಡುಗಡೆಗೆ ಮುನ್ನವೇ ಮತ್ತೊಂದು ಡ್ಯುಯೆಟ್ ಸಾಂಗ್ ರಿಲೀಸ್ ಮಾಡೋಕೆ ಚಿತ್ರತಂಡ ಸಜ್ಜಾಗಿದೆ.

ರಾಬರ್ಟ್ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದರೇ, ತರುಣ ಸುಧೀರ್ ಚಿತ್ರ ನಿರ್ದೇಶಿಸಿದ್ದು ಉಮಾಪತಿ ನಿರ್ಮಿಸಿದ್ದಾರೆ. ತೆಲುಗಿನ ಜಗಪತಿಬಾಬು, ವಿನೋದ್ ಪ್ರಭಾಕರ್ ಸೇರಿದಂತೆ ಹಲವರು ನಟಿಸಿರುವ ಚಿತ್ರ ಶಿವರಾತ್ರಿಯಂದು ದಚ್ಚು ಅಭಿಮಾನಿಗಳಿಗೆ ರಸದೌತಣ ನೀಡಲಿದೆ.

Comments are closed.