ಹೆತ್ತಮ್ಮ-ಮುದ್ದಿನ ಮಡದಿ, ಆಯ್ಕೆ ಮಾಡಲಾಗದೇ ಕಣ್ಣೀರಿಟ್ಟ ಧನುಷ್!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ಇಂದು ಎಮೋಷನಲ್ ತುಂಬಿದೆ. ಹೌದು ಸ್ಪರ್ಧಿಗಳು ಇಷ್ಟು ದಿನ ಕಾಯ್ತಾ ಇದ್ದ ಫ್ಯಾಮಿಲಿ ರೌಂಡ್ ಬಂದಿದೆ. ಅದೇ ರೀತಿ ಧನುಷ್ ಅವರ ಕುಟುಂಬ ಬಂದಿದೆ. ಅವರ ಅಮ್ಮ ಮತ್ತು ಪತ್ನಿ ಬಂದಿದ್ದಾರೆ. ಇಬ್ಬರಲ್ಲಿ ಧನುಷ್ ಯಾರನ್ನು ಆಯ್ಕೆ ಮಾಡಿಕೊಳ್ತಾರೆ ಎಂಬ ಕುತೂಹಲ ಮೂಡಿದೆ.
ಅಮ್ಮನ ನೋಡಿ ಭಾವುಕ
ಧನುಷ್ ಅವರ ಕುಟುಂಬದಿಂದ ತಾಯಿ ಮತ್ತು ಮಡದಿ ಬಂದಿದ್ದಾರೆ. ತಾಯಿಯನ್ನು ನೋಡಿದ ತಕ್ಷಣ ಧನುಷ್ ಅವರು ಭಾವುಕರಾಗಿದ್ದಾರೆ. ಕಣ್ಣೀರು ಇಟ್ಟಿದ್ದಾರೆ.
ಮಡದಿ ನೋಡಿ ಖುಷಿ
ಇನ್ನು ಧನುಷ್ ಅವರ ಪತ್ನಿ ಸಹ ಬಿಗ್ ಬಾಸ್‍ಗೆ ಬಂದಿದ್ದಾರೆ. ಅವರನ್ನು ನೋಡಿ ಧನುಷ್ ಅವರು ಖುಷಿಯಾಗಿದ್ದಾರೆ. 12 ವಾರಗಳ ಬಳಿಕ ಮನೆಯವರನ್ನು ನೋಡಿ ಸಂತೋಷಗೊಂಡಿದ್ದಾರೆ.
ಅಮ್ಮನಾ? ಪತ್ನಿನಾ?
ಬಿಗ್ ಬಾಸ್ ಮನೆಗೆ ಧನುಷ್ ಅವರ ಅಮ್ಮ ಮತ್ತು ಪತ್ನಿ ಬಂದಿದ್ದಾರೆ. ಆದ್ರೆ ಬಿಗ್ ಬಾಸ್ ಇಲ್ಲಿ ಟ್ವಿಸ್ಟ್ ಇಟ್ಟಿದ್ದಾರೆ. ಇಬ್ಬರಲ್ಲಿ ಒಬ್ಬರ ಜೊತೆ ಮಾತ್ರ ನೀವು ಮಾತನಾಡಲು ಆಗುತ್ತೆ. ಯಾರು ಬೇಕೆಂದು ಆಯ್ಕೆ ಮಾಡಿಕೊಳ್ಳಿ ಎಂದು ಬಿಗ್ ಬಾಸ್ ಹೇಳಿದ್ದಾರೆ.
ಧನುಷ್ ಆಯ್ಕೆ ಯಾರು?
ಧನುಷ್‍ಗೆ ಇಬ್ಬರು 2 ಕಣ್ಣಿನ ರೀತಿ. ಇಬ್ಬರಲ್ಲಿ ಧನುಷ್ ಯಾರನ್ನು ಆಯ್ಕೆ ಮಾಡಿಕೊಳ್ಳಲಿ ಎಂಬ ಗೊಂದಲದಲ್ಲಿದ್ದಾರೆ. ಯಾರನ್ನು ಆಯ್ಕೆ ಮಾಡಿಕೊಳ್ತಾರೆ ಅಂತ ನೋಡೋಕೆ ಇವತ್ತಿನ ಸಂಚಿಕೆ ನೋಡಬೇಕು.
ಇದನ್ನೂ ಓದಿ: https://kannada.newsnext.live/cinema/the-contestants-family-came-to-the-bigg-boss-house/
ಮಿನಿ ಸೀಸನ್ ನಲ್ಲಿ ಇದ್ದ ಧನು
ಧನುಷ್ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿದ್ದಾರೆ. ಅವರು ಒಂಟಿ ತಂಡದಲ್ಲಿದ್ದು, 78% ವೋಟ್ಸ್ ಪಡೆದು ಮನೆ ಪ್ರವೇಶಿಸಿದ್ದರು. ಧನುಷ್ ಉದ್ಯಮಿಯಾಗಿದ್ದು, ಹಿಂದೆ ಬಿಗ್ ಬಾಸ್ ಮಿನಿ ಸೀಸನ್‍ನಲ್ಲಿ ಭಾಗವಹಿಸಿದ್ದರು. ಅವರು ಗೀತಾ, ನೂರು ಜನ್ಮಕೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಧನುಷ್ ಈ ಸೀಸನ್‍ನ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಟಾಸ್ಕ್ ಮಾಸ್ಟರ್ ಆಗಿ ಗುರುತಿಸಿಕೊಂಡಿದ್ದಾರೆ ಮತ್ತು ಎರಡನೇ ಬಾರಿ ಕ್ಯಾಪ್ಟನ್ ಪಟ್ಟವನ್ನು ಅಲಂಕರಿಸಿದ್ದಾರೆ.



