Diwali Tour Plan : ದೀಪಾವಳಿಯ ವಾರಾಂತ್ಯದ ರಜೆಯಲ್ಲಿ ಬೆಂಗಳೂರಿನಿಂದ ಪ್ರವಾಸ ಹೋಗಲು ಪ್ಲಾನ್‌ ಮಾಡ್ತಿದ್ರೆ ಇಲ್ಲಿ ಹೇಳಿರುವ ಸ್ಥಳಗಳನ್ನೊಮ್ಮೆ ಗಮನಿಸಿ…

ಈ ವರ್ಷ ದೀಪಾವಳಿ (Diwali 2022) ವಾರಾಂತ್ಯದ ಜೊತೆಗೆ ಬಂದಿರುವುದರಿಂದ ಪ್ರವಾಸಕ್ಕೆ ಹೋಗಲು (Diwali Tour Plan) ಸೂಕ್ತವಾಗಿದೆ. ಇದು ಕೆಲಸದಿಂದ ಸ್ವಲ್ಪ ವಿರಾಮ ಪಡೆದಂತಾಗುತ್ತದೆ. ಕುಟುಂಬದ ಅಥವಾ ಸ್ನೇಹಿತ ಜೊತೆ ಉತ್ತಮ ಸಮಯವನ್ನು ಕಳೆಯಬಹುದಾಗಿದೆ. ಬೆಂಗಳೂರಿನಲ್ಲಿರುವವರು ವಾರಾಂತ್ಯದ ರಜೆಯಲ್ಲಿ ಹತ್ತಿರ ಸ್ಥಳಗಳಿಗೆ ಬೇಟಿ ಕೊಡಲು ಪ್ಲಾನ್‌ ಮಾಡಬಹುದು. ಪ್ರಶಾಂತವಾದ ಸ್ಥಳಗಳು, ವೈಲ್ಡ್‌ಲೈಫ್‌ ಅಡ್ವೆಂಚೆರ್‌ ಸ್ಥಳಗಳು, ಗಿರಿಧಾಮಗಳು ಅಥವಾ ದೇವಸ್ಥಾನಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಯಾವ ಸ್ಥಳಗಳಿಗೆ ಭೇಟಿ ಕೊಡುವುದು ಎಂಬ ಗೊಂದಲವಿದ್ದರೆ ನಾವು ಹೇಳಿರುವ ಸ್ಥಳಗಳಲ್ಲಿ ಯಾವುದಾದರನ್ನು ಆಯ್ದುಕೊಳ್ಳಿ. ವಾರಾಂತ್ಯದ ಮತ್ತು ದೀಪಾವಳಿಯ ರಜೆಯನ್ನು ಸಂತೋಷದಿಂದ ಕಳೆಯಿರಿ.

ದೀಪಾವಳಿ ರಜೆಯಲ್ಲಿ(Diwali Tour Plan) ಬೆಂಗಳೂರಿನಿಂದ ಭೇಟಿ ಕೊಡಬಹುದಾದ ಸ್ಥಳಗಳು :

ಕೊಡಗು (ಕೂರ್ಗ್‌) :
ದಟ್ಟ ಹಸುರಿನಿಂದ ಕೂಡಿರುವ ಕಾಫಿ ತೋಟಗಳು ಮತ್ತು ಆಹ್ಲಾದಕರ ವಾತಾವರಣಕ್ಕೆ ಹೆಸರುವಾಸಿಯಾಗಿರುವ ಕೊಡಗಿಗೆ ಹೋಗಬಹುದು. ಅಲ್ಲಿನ ಹೋಂಸ್ಟೇ ಗಳು, ಕಾಫಿಯ ಘಮಲು, ತಂಪಾದ ವಾತಾವರಣ ವಾರಾಂತ್ಯದ ರಜೆಗೆ ಉತ್ತಮವಾಗಿದೆ.

ಚಿಕ್ಕಮಗಳೂರು :
ಬೆಂಗಳೂರಿನ ಪಕ್ಕದಲ್ಲಿರುವ ಚಿಕ್ಕಮಗಳೂರು ಗಿರಿಧಾಮಗಳಿಗೆ ತುಂಬಾ ಜನಪ್ರಿಯವಾಗಿದೆ. ಕಾಫಿ, ಐತಿಹಾಸಿಕ ಸ್ಥಳಗಳು, ವನ್ಯಜೀವಿಗಳು, ಸೊಂಪಾಗಿ ಬೆಳೆದ ಮಗಿಲೆತ್ತರದ ಮರಗಳು, ಅಪರೂಪದ ಸಸ್ಯರಾಶಿ ನಿಮ್ಮ ಮನಸ್ಸಿಗೆ ಆಹ್ಲಾದಕರ ಅನುಭವ ನೀಡುತ್ತದೆ.

ಕಬಿನಿ:
ನೀವು ಟ್ರಕ್ಕಿಂಗ್‌ ಪ್ರಿಯರೇ? ಹಾಗದರೆ ಬೆಂಗಳೂರಿನಿಂದ ಕೇವಲ 220 ಕಿಲೋಮೀಟರ್ ದೂರದಲ್ಲಿರುವ ಕಬಿನಿಯನ್ನು ಆಯ್ದುಕೊಳ್ಳಬಹುದು. ಸಫಾರಿ ಮತ್ತು ಟ್ರೆಕ್ಕಿಂಗ್‌ ಇಷ್ಟಪಡುವವರಿಗೆ ಇದು ವಾರಾಂತ್ಯದ ಪರಿಪೂರ್ಣ ಪ್ರವಾಸವಾಗಬಲ್ಲದು. ವನ್ಯಜೀವಿಗಳು ಮತ್ತು ಅಡ್ವೆಂಚರ್‌ನ ಮಿಶ್ರಣವು ನಿಮ್ಮಲ್ಲಿ ನವ ಚೈತನ್ಯವನ್ನು ತುಂಬುವುದು.

ಗೋಕರ್ಣ :
ಕರ್ನಾಟಕದ ಅತ್ಯಂತ ಜನಪ್ರಿಯ ಯಾತ್ರಾಸ್ಥಳಗಳಲ್ಲಿ ಗೋಕರ್ಣವೂ ಒಂದು. ದೇವಸ್ಥಾನಗಳು, ಕಡಲತೀರಗಳು ಮತ್ತು ಗುಹೆಗಳನ್ನು ಇಲ್ಲಿ ಕಾಣಬಹುದು. ಅಷ್ಟೇ ಅಲ್ಲದೇ ಆ ಭಾಗದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ನೋಡಬಹುದು.

ಹಂಪಿ :
ಕರ್ನಾಟಕದ ಹೆಮ್ಮೆ ಎನಿಸಿರುವ ಹಂಪಿ ದೀಪಾವಳಿಯ ವಾರಾಂತ್ಯದ ರಜೆಗೆ ಉತ್ತಮ ಸ್ಥಳ. ಗತಕಾಲದ ಇತಿಹಾಸದ ಜೊತೆಗೆ ಯುನೆಸ್ಕೋ ಮಾನ್ಯತೆ ಪಡೆದ ಹಂಪಿ ವೈಭವವನ್ನು ನೋಡಿ ಆನಂದಿಸಬಹುದು. ಇದಲ್ಲದೇ ನೀವು ಇಲ್ಲಿ ಬಂಡೆಯ ಜಂಪಿಂಗ್, ಕೊರಾಕಲ್ ರೈಡ್‌ಗಳು, ಮೀನುಗಾರಿಕೆ,
ದೋಣಿ ಸವಾರಿ ಮತ್ತು ರಾಕ್ ಕ್ಲೈಂಬಿಂಗ್‌ನಂತಹ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬಹುದು.

ಇದನ್ನೂ ಓದಿ : top 5 houseboat : ಹೌಸ್‌ಬೋಟ್‌ ಪ್ರವಾಸ ನಿಮಗೆ ಇಷ್ಟಾನಾ; ಭಾರತದ ಟಾಪ್‌ 5 ಹೌಸ್‌ಬೋಟ್‌ ತಾಣಗಳು

ಇದನ್ನೂ ಓದಿ : Beautiful Train Journeys : ಜೀವನದಲ್ಲಿ ಒಮ್ಮೆಯಾದರೂ ಈ 5 ಸುಂದರ ರೈಲು ಪ್ರಯಾಣಗಳನ್ನು ಮಾಡಿ

(Diwali Tour Plan 5 perfect weekend getaways from Bangalore)

Comments are closed.