ಕಬ್ಜದಲ್ಲಿ ಶಿವಣ್ಣ ಇದ್ದಾರೆಂದು ನಟಿ ಪ್ರಿಯಾಂಕಾ ಉಪೇಂದ್ರ ಮಾತಿಗೆ ಕುತೂಹಲಕಾರಿ ಉತ್ತರ ಕೊಟ್ಟ ಆರ್.ಚಂದ್ರು

ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆಯಾಗಿ ಬೃಹತ್ ಯಶಸ್ಸು ಸಾಧಿಸಿದ ಬಳಿಕ ಸ್ಯಾಂಡಲ್‌ವುಡ್‌ನಿಂದ ಮತ್ತಷ್ಟು ಹೆಚ್ಚಿನ ಪ್ಯಾನ್ ಇಂಡಿಯಾ ಸಿನಿಮಾಗಳು ತೆರೆಕಂಡು ಗೆದ್ದಿವೆ. ಹೀಗಾಗಿ ನಿರ್ದೇಶಕರಲ್ಲಿ ಹಾಗೂ ನಿರ್ಮಾಪಕರಲ್ಲಿ ನಾವೂ ಸಹ ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ಸಿನಿಮಾ ಮಾಡಬೇಕು ಎಂಬ ಆಸಕ್ತಿ ಹಾಗೂ ತುಡಿತ ಹೆಚ್ಚಾಗಿದೆ. ಈ ಮಹಾದಾಸೆಯನ್ನು ಹೊತ್ತು ಸಿನಿಮಾವನ್ನು ಘೋಷಿಸಿದ ಹಲವು ನಿರ್ದೇಶಕರ ಪೈಕಿ ಕಬ್ಜ ಸಿನಿಮಾದ ನಿರ್ದೇಶಕ ಆರ್ ಚಂದ್ರು (Director R Chandru) ಸಹ ಒಬ್ಬಾರಿದ್ದಾರೆ. ಈಗಾಗಲೇ ಹಲವಾರು ಬಾರಿ ತಾನು ಕಬ್ಜ ಸಿನಿಮಾವನ್ನು ಕೈಗೆತ್ತಿಕೊಳ್ಳಲು ಕಾರಣವೇ ಕೆಜಿಎಫ್ ಸಿನಿಮಾ ಎಂದು ಹೇಳಿರುವ ಚಂದ್ರು ಕೆಜಿಎಫ್ ಫ್ಲೇವರ್‌ನಲ್ಲಿಯೇ ಸಿನಿಮಾವನ್ನು ಅದ್ದೂರಿಯಾಗಿ ಕಟ್ಟಿಕೊಟ್ಟಿದ್ದಾರೆ ಎಂಬುದನ್ನು ಸಿನಿಮಾದ ಪೋಸ್ಟರ್, ಟೀಸರ್ ಹಾಗೂ ಹಾಡಿನಲ್ಲಿಯೇ ಕಾಣಬಹುದಾಗಿದೆ.

ಇನ್ನು ಕಬ್ಜ ಸಿನಿಮಾದಲ್ಲಿ ನಾಯಕನಾಗಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಾಯಕಿಯಾಗಿ ಶ್ರೇಯಾ ಶರಣ್ ನಟಿಸಿದ್ದು, ಸ್ಟಾರ್ ನಟ ಕಿಚ್ಚ ಸುದೀಪ್ ಸಹ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಸದ್ಯ ಈ ಸಿನಿಮಾದ ಕುರಿತು ಹಲವು ಕುತೂಹಲ ಹಾಗೂ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಸಿನಿಮಾದಲ್ಲಿ ಉಪೇಂದ್ರ, ಕಿಚ್ಚ ಸುದೀಪ್ ಜತೆಗೆ ನಟ ಶಿವ ರಾಜ್‌ಕುಮಾರ್ ಸಹ ಇರಲಿದ್ದಾರಾ ಎಂಬ ಅನುಮಾನ ಮೂಡಿದೆ. ಹೌದು, ನಟ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ನೀಡಿದ್ದ ಹೇಳಿಕೆ ಹಾಗೂ ಟೀಸರ್‌ನಲ್ಲಿನ ದೃಶ್ಯವೊಂದು ಸಿನಿಮಾದಲ್ಲಿ ಶಿವ ರಾಜ್‌ಕುಮಾರ್ ಸಹನ ನಟಿಸಿದ್ದಾರೆ ಎಂಬ ಅನುಮಾನವನ್ನು ಹುಟ್ಟುಹಾಕಿತ್ತು. ಇನ್ನು ಈ ಕುರಿತಾದ ಪ್ರಶ್ನೆ ನಿರ್ದೇಶಕ ಆರ್ ಚಂದ್ರು ಅವರಿಗೂ ಸಹ ಎದುರಾಗಿದ್ದು, ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ನಿನ್ನೆ ( ಫೆಬ್ರವರಿ 7 ) ನಿರ್ದೇಶಕ ಆರ್ ಚಂದ್ರು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಧ್ಯಮಗಳ ಮುಂದೆ ಬಂದಿದ್ದರು. ಈ ಸಂದರ್ಭದಲ್ಲಿ ತಮ್ಮ ಕಬ್ಜ ಸಿನಿಮಾದ ಕುರಿತು ವಿಶೇಷವಾಗಿ ಮಾತನಾಡಿದ ಚಂದ್ರು ಅವರಿಗೆ ಸಿನಿಮಾದಲ್ಲಿ ಶಿವ ರಾಜ್‌ಕುಮಾರ್ ಸಹ ನಟಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಟೀಸರ್‌ನಲ್ಲೂ ಒಂದು ದೃಶ್ಯದಲ್ಲಿ ಶಿವ ರಾಜ್‌ಕುಮಾರ್ ಇದ್ದಂತೆ ಭಾಸವಾಗಿದೆ ಇದಕ್ಕೆ ಏನು ಹೇಳುತ್ತೀರ ಎಂಬ ಪ್ರಶ್ನೆಗಳು ಎದುರಾದವು. ಈ ಪ್ರಶ್ನೆಗೆ ಉತ್ತರಿಸಿದ ಚಂದ್ರು ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿರುವುದರಿಂದ ಸಿನಿಮಾದಲ್ಲಿ ಸಾಕಷ್ಟು ಕುತೂಹಲಗಳಿದೆ. ಅದನ್ನು ನಾನು ಈಗಲೇ ಬಿಚ್ಚಿಟ್ರೆ ನಿಮಗೆಲ್ಲಾ ಏನೂ ಗೊತ್ತಾಗಲ್ಲ, ಇನ್ನೂ ಯಾರಾರೆಲ್ಲಾ ಇದ್ದಾರೆ ಎಂಬುದನ್ನು ನೋಡಿದ್ರೆ ನೀವೇ ಓಹ್ ಇವರೆಲ್ಲಾ ಇದ್ದಾರಾ ಎಂದುಕೊಳ್ಳುತ್ತೀರಿ, ಯಾರು ಇದ್ದಾರೆ ಎಂಬುದನ್ನು ನಾನು ಈಗಲೇ ಬಿಟ್ಟುಕೊಡಲು ಇಚ್ಛಿಸುವುದಿಲ್ಲ. ಸಿನಿಮಾ ನೋಡಿ, ಸರಿಯಾದ ಸಮಯದಲ್ಲಿ ಯಾರೆಲ್ಲಾ ಇದ್ದಾರೆ ಎಂಬ ಪಟ್ಟಿ ಬಿಡುಗಡೆ ಮಾಡ್ತೇನೆ ಎಂದು ಹೇಳಿಕೆ ನೀಡಿದರು.

ಇದನ್ನೂ ಓದಿ : Rashmika Mandanna : ನೆಗೆಟಿವಿಟಿಗೆ ತಲೆಕೆಡಿಸಿಕೊಳ್ಳಬೇಡಿ: ಟ್ರೋಲರ್ ಗಳಿಗೆ ಟಾಂಟ್ ಕೊಟ್ಟ ರಶ್ಮಿಕಾ ಮಂದಣ್ಣ

ಇದನ್ನೂ ಓದಿ : ಪ್ರಶಾಂತ್‌ ನೀಲ್‌, ನಟ ಪ್ರಭಾಸ್‌ ಕಾಂಬಿನೇಷನ್‌ “ಸಲಾರ್‌” ಸಿನಿಮಾದ ಟೀಸರ್‌ ರಿಲೀಸ್‌ ಡೇಟ್‌ ಫಿಕ್ಸ್‌

ಇದನ್ನೂ ಓದಿ : 12 ಕಿ.ಮೀ ರಸ್ತೆಗೆ ಅಪ್ಪು ಹೆಸರು : ಟ್ವೀಟ್ ಮಾಡಿ ಪ್ರಶಂಸಿದ ಸಂಸದೆ ಸುಮಲತಾ

ಕಬ್ಜ ಸಿನಿಮಾದಲ್ಲಿ ಶಿವ ರಾಜ್‌ಕುಮಾರ್ ಇದ್ದಾರೆ ಎಂಬುದನ್ನು ಮೊದಲು ತಿಳಿಸಿದ್ದೇ ನಟಿ ಪ್ರಿಯಾಂಕಾ ಉಪೇಂದ್ರ. ಜೀ ಕನ್ನಡ ವಾಹಿನಿ ಜತೆ ಮಾತನಾಡುವಾಗ ಸಿನಿಮಾದ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕಾ ಉಪೇಂದ್ರ ಕಬ್ಜ ಸಿನಿಮಾದಲ್ಲಿ ಎಲ್ಲರೂ ವಿಭಿನ್ನವಾಗಿ ಚೆನ್ನಾಗಿ ಕಾಣಿಸುತ್ತಾರೆ ಎನ್ನುತ್ತಾ ಸಿನಿಮಾದಲ್ಲಿ ಶಿವ ರಾಜ್‌ಕುಮಾರ್ ಸಹ ಇದ್ದಾರೆ ಎಂಬ ಅಂಶವನ್ನು ತಿಳಿಸಿಬಿಟ್ಟಿದ್ದರು. ಇನ್ನು ಕಬ್ಜ ಸಿನಿಮಾದಲ್ಲಿ ಶಿವಣ್ಣ ಸಹ ಇರಲಿದ್ದಾರೆ ಎಂಬ ವಿಷಯವನ್ನು ನಟಿ ಪ್ರಿಯಾಂಕಾ ಉಪೇಂದ್ರ ತಿಳಿಸಿದ ಬೆನ್ನಲ್ಲೇ ಸಿನಿತಂಡ ಬಿಡುಗಡೆ ಮಾಡಿದ್ದ ಟೀಸರ್ ದೃಶ್ಯವೊಂದರಲ್ಲಿ ಉಪೇಂದ್ರ ಅಕ್ಕಪಕ್ಕ ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ಸಹ ಇರುವಂತಿತ್ತು‌. ಈ ದೃಶ್ಯ ಹಿಂಬದಿಯ ದೃಶ್ಯವಾದ ಕಾರಣ ಈ ರೀತಿಯ ಅನುಮಾನ ಹಾಗೂ ಕುತೂಹಲ ಮೂಡಿದ್ದು, ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

Director R Chandru gave an interesting answer to actress Priyanka Upendra saying that Shivanna is in the movie Kabja

Comments are closed.