ಮಗನ ಪುಟಾಣಿ ಪಾದಗಳನ್ನು ಎದೆಗೊತ್ತಿದ ಡಾಲಿ ಧನಂಜಯ್; ಫೋಟೋ ನೋಡಿ ಫಿದಾ ಆದ ಫ್ಯಾನ್ಸ್
ಸ್ಯಾಂಡಲ್‌ವುಡ್‌ನ ಜನಪ್ರಿಯ ನಟರ, ನಮ್ಮ ಹೆಮ್ಮೆಯ 'ಡಾಲಿ' ಧನಂಜಯ್ ಅವರ ಮನೆಯಲ್ಲಿ ಈಗ ಸಂಭ್ರಮವೋ ಸಂಭ್ರಮ. ಇತ್ತೀಚೆಗಷ್ಟೇ ತಂದೆಯಾಗಿ ಬಡ್ತಿ ಪಡೆದಿದ್ದ ನಟ ಧನಂಜಯ್, ಇದೀಗ ತಮ್ಮ ಮುದ್ದು ಮಗನ ಮೊದಲ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ.

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟರ, ನಮ್ಮ ಹೆಮ್ಮೆಯ ‘ಡಾಲಿ’ ಧನಂಜಯ್ ಅವರ ಮನೆಯಲ್ಲಿ ಈಗ ಸಂಭ್ರಮವೋ ಸಂಭ್ರಮ. ಇತ್ತೀಚೆಗಷ್ಟೇ ತಂದೆಯಾಗಿ ಬಡ್ತಿ ಪಡೆದಿದ್ದ ನಟ ಧನಂಜಯ್, ಇದೀಗ ತಮ್ಮ ಮುದ್ದು ಮಗನ ಮೊದಲ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ.
ಕಳೆದ ಎರಡು ತಿಂಗಳ ಹಿಂದಷ್ಟೇ ಧನಂಜಯ್ ಪತ್ನಿ, ಡಾಕ್ಟರ್ ಧನ್ಯತಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸಿದ ವಿಷಯವನ್ನಷ್ಟೇ ಆಗ ಹಂಚಿಕೊಂಡಿದ್ದ ಡಾಲಿ, ಮಗನ ಮುಖ ನೋಡಲು ಕಾಯುತ್ತಿದ್ದ ಫ್ಯಾನ್ಸ್‌ಗೆ ಈಗ ಕ್ಯೂಟ್ ಗಿಫ್ಟ್ ಕೊಟ್ಟಿದ್ದಾರೆ. ಸದ್ಯ ಮಗುವಿಗೆ ಕೇವಲ ಎರಡು ತಿಂಗಳು ತುಂಬಿರುವುದರಿಂದ, ಹಸುಗೂಸಿನ ಮುಖವನ್ನು ನೇರವಾಗಿ ತೋರಿಸದೆ ಅತ್ಯಂತ ಕಲಾತ್ಮಕವಾಗಿ ಫೋಟೋ ಕ್ಲಿಕ್ಕಿಸಲಾಗಿದೆ. ಮುದ್ದು ಮಗನ ಪುಟಾಣಿ ಪಾದಗಳು ತಮ್ಮ ಎದೆಗೆ ತಾಗುವಂತೆ, ಕಂದನನ್ನ ಕೈಯಲ್ಲಿ ಜೋಪಾನವಾಗಿ ಎತ್ತಿಕೊಂಡಿರುವ ಅದ್ಭುತ ಫೋಟೋ ಇದಾಗಿದೆ.
ವಿಶೇಷ ಏನೆಂದರೆ, ಧನಂಜಯ್ ನಟನೆಯ ಮುಂಬರುವ ಬಹುನಿರೀಕ್ಷಿತ ಸಿನಿಮಾ ‘ಮದರ್ ಪ್ರಾಮಿಸ್’ನ ‘ಓ ಬೆಳಕೇ…’ ಹಾಡು ಸದ್ಯ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದೆ. ತಾಯಿಯ ಮಮತೆಯನ್ನು ಸಾರುವ ಇದೇ ಸೂಪರ್ ಹಿಟ್ ಹಾಡನ್ನು ಬ್ಯಾಕ್‌ಗ್ರೌಂಡ್‌ನಲ್ಲಿ ಹಾಕಿ ಧನಂಜಯ್ ಈ ಪೋಸ್ಟ್ ಶೇರ್ ಮಾಡಿದ್ದಾರೆ.
ಈ ಭಾವನಾತ್ಮಕ ಪೋಸ್ಟ್ ಸದ್ಯ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದ್ದು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು “ಜೂನಿಯರ್ ಡಾಲಿಗೆ ದೃಷ್ಟಿಯಾಗದಿರಲಿ” ಎಂದು ಪ್ರೀತಿಯಿಂದ ಹರಸುತ್ತಿದ್ದಾರೆ. ಲೈಕ್ಸ್ ಮತ್ತು ಕಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ.

