ಡಬಲ್ ಎಲಿಮಿನೇಷ್, ಮನೆಯಿಂದ ಔಟ್ ಆದ ಧ್ರುವಂತ್-ರಕ್ಷಿತಾ!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಬಿಗ್ ಟ್ವಿಸ್ಟ್ ನಡೆದಿದೆ. ಯಾರೂ ಊಹಿಸದ ಸ್ಪರ್ಧಿಗಳು ಮನೆಯಿಂದ ಔಟ್ ಆಗಿದ್ದಾರೆ. ಹೌದು ಪ್ರೋಮೋ ಪ್ರಕಾರ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಈ ವಾರ ಎಲಿಮಿನೇಷನ್ ಆಗಿದ್ದಾರೆ. ಇದು ನಿಜನಾ ಅಥವಾ ಸುಳ್ಳ ಎಂದು ಪ್ರೇಕ್ಷಕರು ಗೊಂದಲದಲ್ಲಿದ್ದಾರೆ.
ಡಬಲ್ ಎಲಿಮಿನೇಷನ್
ಈ ವಾರ ಬಿಗ್ ಬಾಸ್ ಮನೆಯಿಂದ ಇಬ್ಬರು ಸ್ಪರ್ಧಿಗಳು ಹೋಗ್ತಾರೆ. ಡಬಲ್ ಎಲಿಮಿನೇಷನ್ ಇದೆ ಎಂದು ಕಿಚ್ಚ ಸುದೀಪ್ ಅವರು ಇವತ್ತಿನ ಸಂಚಿಕೆಯಲ್ಲಿ ಹೇಳಿದ್ದಾರೆ.
ರಜತ್ ಸೇಫ್
ಈ ವಾರ ಹಲವು ಸ್ಪರ್ಧಿಗಳು ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಕೊನೆಯಲ್ಲಿ ರಕ್ಷಿತಾ ಶೆಟ್ಟಿ, ಧ್ರುವಂತ್, ರಜತ್ ಉಳಿದಿರುತ್ತಾರೆ. ಆಗ ಸುದೀಪ್ ಅವರು ಒಬ್ಬರು ಸೇಫ್ ಆಗ್ತಾರೆ ಎಂದು ರಜತ್ ಕಿಶನ್ ಹೆಸರು ಹೇಳಿದ್ದಾರೆ.
ಧ್ರುವಂತ್ ಮತ್ತು ರಕ್ಷಿತಾ ಔಟ್
ಇನ್ನು ರಜತ್ ಸೇಫ್ ಆಗ್ತಿದ್ದಂತೆ ಧ್ರುವಂತ್ ಮತ್ತು ರಕ್ಷಿತಾ ಮನೆಯಿಂದ ಹೊರ ಹೋಗ್ತಾರೆ ಎಂದು ಹೇಳಿದ್ದಾರೆ. ಅಂತೆಯೇ ಇಬ್ಬರಿಗೂ 5 ನಿಮಿಷ ಕಾಲ ಕೊಟ್ಟಿದ್ರು. ಬಿಗ್ ಬಾಸ್ ಹೌಸ್ ಡೋರ್ ಕೂಡ ಓಪೆನ್ ಆಗಿ ಇಬ್ಬರು ಮನೆಯಿಂದ ಆಚೆ ಬಂದಿದ್ದಾರೆ.
ವೀಕ್ಷಕರಿಗೆ ಗೊಂದಲ
ಈ ಪ್ರೋಮೋ ನೋಡಿದ ವೀಕ್ಷಕರು ಪೂರ ಗೊಂದಲದಲ್ಲಿದ್ದಾರೆ. ಇಬ್ಬರು ಒಳ್ಳೆಯ ಸ್ಪರ್ಧಿಗಳು. ಇವರನ್ನು ಏಕೆ ಮನೆಯಿಂದ ಕಳಿಸಿದ್ರು? ಇದು ನಿಜನಾ? ಅಥವಾ ಸುಳ್ಳಾ ಎಂದು ಸಾಮಾಜಿಕ ಜಾಲ ತಾಣದಲ್ಲಿ ಪ್ರಶ್ನೆ ಮಾಡ್ತಾ ಇದ್ದಾರೆ.
ಇದನ್ನೂ ಓದಿ: https://kannada.newsnext.live/cinema/this-challenge-is-between-gilli-and-rajat-in-bigg-boss-house/
ಚೈತ್ರಾ ಮತ್ತು ರಜತ್ ಬೇಕಿತ್ತಾ?
ಇನ್ನು 2ನೇ ಬಾರಿ ವೈಲ್ಡ್ ಕಾರ್ಡ್ ಆಘಿ ಎಂಟ್ರಿ ಕೊಟ್ಟಿರುವ ರಜತ್ ಕಿಶನ್ ಮತ್ತು ಚೈತ್ರಾ ಕುಂದಾಪುರ ಅವರು ಈ ಸೀಸನ್ ಬೇಕಿತ್ತಾ? ಇವರನ್ನು ಉಳಿಸಿಕೊಳ್ಳಲು ಅವರನ್ನು ಕಳಿಸಿದ್ರು ಎನ್ನುವ ಮಾತುಗಳು ಕೇಳಿ ಬರ್ತಿವೆ.
ಏನೇ ಆಗಲಿ ಧ್ರುವಂತ್ ಮತ್ತು ರಕ್ಷಿತಾ ಇಬ್ಬರು ಸೀಕ್ರೇಟ್ ರೂಮ್ ಗೆ ಹೋಗ್ತಾ ಇದ್ದಾರಾ ಎನ್ನುವ ಗಾಳಿ ಮಾತು ಸಹ ಹರಿದಾಡ್ತಾ ಇದೆ. ಏನಾಗುತ್ತೆ ಎಂದು ಕಾದು ನೋಡಬೇಕಿದೆ.



