Galipata 2 : ದಸರಾ ಧಮಾಕ..ಜೀ5 ಒಟಿಟಿಗೆ ಬರ್ತಿದೆ ಭಟ್ರು-ಗಣೇಶ್ ಕಾಂಬಿನೇಶನ್‌ ಚಿತ್ರ “ಗಾಳಿಪಟ 2”

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ರು ಸಮಾಗಮಾದ ಗಾಳಿಪಟ 2 (Galipata 2)ಸಿನಿಮಾ ತೆರೆಮೇಲೆ ಮತ್ತೆ ಮೋಡಿ ಮಾಡಿದೆ. ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿದ್ದ ಈ ಚಿತ್ರಕ್ಕೆ ಸಿನಿಮಾ ಪ್ರೇಮಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಆಗಸ್ಟ್ 12ರಂದು ರಾಜ್ಯ ಸೇರಿದಂತೆ ಹೊರ ರಾಜ್ಯ ಹಾಗೂ ವಿದೇಶಗಳಲ್ಲಿಯೂ ಹಾರಿದ್ದ ಗಾಳಿಪಟ 2 ಸಿನಿಮಾ ಹೊಸ ದಾಖಲೆ ಸೃಷ್ಟಿಸಿದೆ. ಸ್ನೇಹ, ಪ್ರೇಮ, ವಿರಹ, ತ್ಯಾಗ, ಭಾವನೆಯ ಜೊತೆಗೆ ಒಂದಿಷ್ಟು ಮಸಾಲೆ ಸೇರಿಸಿ ಭಟ್ರು ತಯಾರಿಸಿದ್ದ ಸಿನಿಮಾ ಈಗ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ.

ದಸರಾ ಹಬ್ಬಕ್ಕೆ ಗಾಳಿಪಟ 2 ಜೀ 5 ಒಟಿಟಿಗೆ ಲಗ್ಗೆ:

ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿ ನಟಿಸಿದ್ದ ಈ ಚಿತ್ರದಲ್ಲಿ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಗಣೇಶ್‌ ಅವರ ಪುತ್ರ ವಿಹಾನ್‌ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಒಂದೊಳ್ಳೆ ಫ್ಯಾಮಿಲಿ ಎಂಟರ್ ಟೈನರ್ ಆಗಿರುವ ಗಾಳಿಪಟ 2(Galipata 2) ಸಿನಿಮಾ ಅಕ್ಟೋಬರ್ 5ರಂದು ದಸರಾ ಹಬ್ಬದ ಸ್ಪೆಷಲ್ ಆಗಿ ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಹಿರಿಯ ನಟ ಅನಂತ್ ನಾಗ್ ಕನ್ನಡದ ಮೇಷ್ಟ್ರು ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಅವರ ಜೊತೆಯಾಗಿ ಪದ್ಮಜಾ ರಾವ್‌ ಪಾತ್ರವನ್ನು ಹಂಚಿಕೊಂಡಿದ್ದಾರೆ. ಈ ಬಾರಿ ಕೂಡ ಗಣೇಶ್‌ರವರ ತಂದೆ ತಾಯಿ ಪಾತ್ರದಲ್ಲಿ ಸುಧಾ ಬೆಳವಾಡಿ ಹಾಗೂ ರಂಗಾಯಣ ರಘು ನಟಿಸಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ತಾರಾಗಣ ಸೇರಿದಂತೆ ಮುಂತಾದವರು ನಟಿಸುತ್ತಿದ್ದಾರೆ. ಇನ್ನೂ ಈ ಸಿನಿಮಾಕ್ಕೆ ಸಂತೋಷ್‌ ರೈ ಪಾತಾಜೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಗಾಳಿಪಟ 2ನಲ್ಲಿ ಅರ್ಜುನ್ ಜನ್ಯರವರು ಅತ್ಯುತ್ತಮ ಸಂಗೀತವನ್ನು ನೀಡಿದ್ದಾರೆ. ರಮೇಶ್‌ ರೆಡ್ಡಿಯವರ ನಿರ್ಮಾಣದಲ್ಲಿ ಮೂಡಿಬಂದಿದ್ದ ಗಾಳಿಪಟ 2 ಸಿನಿಮಾವನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಈಗ ಮನೆಯಲ್ಲಿಯೇ ಕುಳಿತು ನೋಡಬಹುದಾಗಿದೆ.

ಇದನ್ನೂ ಓದಿ : ಕಿರೀಟಿ ಸಿನಿಮಾ ಟೈಟಲ್ ಲಾಂಚ್ ಗೆ ಮುಹೂರ್ತ ಫಿಕ್ಸ್- ಸೆಪ್ಟೆಂಬರ್ 29ಕ್ಕೆ ಟೈಟಲ್ ಅನಾವರಣ

ಇದನ್ನೂ ಓದಿ : ಮತ್ತೆ ನಿರ್ಮಾಣ ಸಾಹಸಕ್ಕಿಳಿದ ಅಜಯ್ ರಾವ್ – ‘ಕಟಿಂಗ್ ಶಾಪ್’ ನಿರ್ದೇಶಕನ ಚಿತ್ರಕ್ಕೆ ಗ್ರೀನ್ ಸಿಗ್ನಲ್

ಇದನ್ನೂ ಓದಿ : ರಾಯನ್ ಸರ್ಜಾನೇ ನಮ್ಮ ಮನೆ ಮಗ : ನನಗೆ ಮಗ ಬೇಡ ಎಂದ ಧ್ರುವಸರ್ಜಾ

ಇದನ್ನೂ ಓದಿ : ನಟಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಈಗಾಗಲೇ ಜೀ5 ಒಟಿಟಿಯಲ್ಲಿ ಕಿಚ್ಚನ ವಿಕ್ರಾಂತ್ ರೋಣ ಸಿನಿಮಾ ಹಂಗಾಮ ಸೃಷ್ಟಿಸಿದ್ದು, ಟಾಪ್ ಟ್ರೇಡಿಂಗ್ ಮೂರನೇ ಸ್ಥಾನ ಪಡೆದುಕೊಂಡಿದೆ. ಕೋಟಿ ಗಟ್ಟಲೆ ಮಿಲಿಯನ್ ವೀವ್ಸ್ ಪಡೆದಿರುವ ವಿಕ್ರಾಂತ್ ರೋಣ ಚಿತ್ರವನ್ನು ಥಿಯೇಟರ್ ನಲ್ಲಿ‌‌ ಮಿಸ್ ಮಾಡಿದವರು ಮನೆಯಲ್ಲಿ ನೋಡಬಹುದಾಗಿದೆ. ಹಾಗಿದ್ರೆ ಮತ್ಯಾಕೆ ತಡ ಜೀ5ಒಟಿಟಿಗೆ ಲಾಗಿನ್ ಆಗಿ. ಎರಡು ಬಹುನಿರೀಕ್ಷಿತ ಕನ್ನಡ ಸಿನಿಮಾವನ್ನು ಮಿಸ್‌ ಮಾಡದೇ ನೋಡಿ.

Dussehra Dhamaka..Zee 5 has come to OTT Bhatru Ganesh combination movie “Galipata 2”

Comments are closed.