CISF Recruitment 2022 : CISF ನಲ್ಲಿ ಉದ್ಯೋಗಾವಕಾಶ : ಎಎಸ್‌ಐ (ಸ್ಟೆನೊಗ್ರಾಫ್ರ್‌ರ್‌) ಮತ್ತು ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರಿ ನೌಕರಿಗೆ ಎದುರು ನೋಡುತ್ತಿರವವರಿಗೆ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ನಲ್ಲಿ ಸುವರ್ಣಾಕಾಶ. CISF ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಸ್ಟೆನೋಗ್ರಾಫರ್)/ ಹೆಡ್ ಕಾನ್ಸ್‌ಟೇಬಲ್ (ಸಚಿವಾಲಯ) ಹುದ್ದೆಗಳ ನೇಮಕಾತಿಗಾಗಿ (CISF Recruitment 2022) ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರಗಳು :
ಸಹಾಯಕ ಸಬ್ ಇನ್ಸ್‌ಪೆಕ್ಟರ್ ಎಎಸ್‌ಐ ಸ್ಟೆನೋಗ್ರಾಫರ್ –ಒಟ್ಟು 122 ಹುದ್ದೆಗಳು
ಹೆಡ್ ಕಾನ್‌ಸ್ಟೆಬಲ್ (ಸಚಿವ) – ಒಟ್ಟು 418 ಹುದ್ದೆಗಳು

ವಯೋಮಿತಿ :
CSIF ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳಾಗಿರಬೇಕು ಮತ್ತು ಗರಿಷ್ಠ ವಯಸ್ಸು 25 ವರ್ಷಗಳು.
CISF ASI ಸ್ಟೆನೋಗ್ರಾಫರ್ ಮತ್ತು HC ಮಿನಿಸ್ಟ್ರಿಯಲ್ 2022 ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಇರುತ್ತದೆ.

ಅರ್ಹತೆ :
ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಸ್ಟೆನೋಗ್ರಾಫರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದಲ್ಲಿ ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿ ಅಥವಾ ತತ್ಸಮಾನ ಪಾಸಾಗಿರಬೇಕು.
ಡಿಕ್ಟೇಶನ್: 10 ನಿಮಿಷಗಳಲ್ಲಿ 80 ​​WPM ಇರಬೇಕು.
ಟ್ರಾನ್ಸ್‌ಕ್ರಿಪ್ಷನ್‌ : ನಿಮಿಷಕ್ಕೆ ಇಂಗ್ಲಿಷ್‌ನಲ್ಲಿ 50 ಅಥವಾ ಹಿಂದಿಯಲ್ಲಿ 65 ಶಬ್ದಗಳನ್ನು ಟ್ರಾನ್ಸ್‌ಕ್ರಿಪ್ಷನ್‌ ಮಾಡಬೇಕು.
ಎತ್ತರ: ಪುರುಷ – 165 CMS, ಸ್ತ್ರೀ – 155 CMS
ಎದೆ: 77-82 CMS

ಹೆಡ್ ಕಾನ್‌ಸ್ಟೆಬಲ್ (ಮಿನಿಸ್ಟರಿಯಲ್‌) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದಲ್ಲಿ ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿ ಅಥವಾ ತತ್ಸಮಾನ ಪಾಸಾಗಿರಬೇಕು.
ಕಂಪ್ಯೂಟರ್ ಟೈಪಿಂಗ್: ಇಂಗ್ಲೀಷ್ 35 WPM ಅಥವಾ ಹಿಂದಿ 30 WPM
ಎತ್ತರ: ಪುರುಷ – 165 CMS, ಸ್ತ್ರೀ – 155 CMS
ಎದೆ: 77-82 CMS

ಅರ್ಜಿ ಶುಲ್ಕ :
UR/EWS/OBC: 100/-
SC / ST / ESM ಹಾಗೂ ಎಲ್ಲಾ ವರ್ಗದ ಮಹಿಳೆಯರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಪರೀಕ್ಷಾ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದಾಗಿದೆ.

ಸಂಬಳದ ವಿವರಗಳು :
ಸಹಾಯಕ ಸಬ್-ಇನ್‌ಸ್ಪೆಕ್ಟರ್ (ಸ್ಟೆನೋಗ್ರಾಫರ್) – ಪೇ ಲೆವೆಲ್-5 (29,200-92,300 ರೂ.)
ಹೆಡ್ ಕಾನ್‌ಸ್ಟೆಬಲ್ (ಸಚಿವಾಲಯ) – ಹಂತ-4 ವೇತನ (25,500-81,100 ರೂ.)
ಹೆಚ್ಚಿನ ಮಾಹಿತಿಗೆ CISF ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ.

ಪ್ರಮುಖ ದಿನಾಂಕಗಳು :
ಅಪ್ಲಿಕೇಶನ್ ಪ್ರಾರಂಭವಾಗುವ ದಿನಾಂಕ : 26 ಸೆಪ್ಟೆಂಬರ್ 2022
ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ : 25 ಅಕ್ಟೋಬರ್ 2022

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲಿಗೆ CISFನ ಅಧಿಕೃತ ವೆಬ್‌ಸೈಟ್ cisfrectt.in ಗೆ ಭೇಟಿ ನೀಡಿ.
  • ಮುಖಪುಟದಲ್ಲಿ, ಲಾಗಿನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ನಂತರ ‘ನ್ಯೂ ರೆಜಿಸ್ಟ್ರೇಷನ್‌’ ಆಯ್ಕೆಯನ್ನು ಕ್ಲಿಕ್ಕಿಸಿ.
  • OTR ಆಯ್ಕೆಯ ಮೂಲಕ ನೋಂದಾಯಿಸಿಕೊಂಡ ನಂತರ CISF ನೇಮಕಾತಿ 2022 ಕ್ಕೆ ಅರ್ಜಿ ಸಲ್ಲಿಸಿ.
  • ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ನಿಗದಿತ ನಮೂನೆಯಲ್ಲಿಯೇ ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ.
  • ಮುಂದಿನ ಸಂವಹನಕ್ಕಾಗಿ ಅಪ್ಲಿಕೇಶನ್‌ ಸೇವ್‌ ಮಾಡಿಕೊಳ್ಳಿ.

ಇದನ್ನೂ ಓದಿ : Tata Tiago EV : ಇಂದು ಬಿಡುಗಡೆಯಾದ ಟಾಟಾ ಟಿಯಾಗೊ ಎಲೆಕ್ಟ್ರಿಕಲ್‌ ಕಾರ್‌; ಇದು ಜನಸಾಮಾನ್ಯರ ಕಾರ್‌ ಆಗಬಹುದೇ…

ಇದನ್ನೂ ಓದಿ : India Post Recruitment 2022 : ಪೋಸ್ಟ್‌ ಆಫೀಸ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ : ಒಟ್ಟೂ 98,000 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ

(CISF Recruitment 2022 apply online for ASI Steno and Constable posts)

Comments are closed.