Aishwarya : ಮಕ್ಕಳಿಗಾಗಿ ಭಾವನಾತ್ಮಕ ಪತ್ರ : ಮತ್ತೆ ಸದ್ದು ಮಾಡಿದ ರಜನಿಕಾಂತ್ ಪುತ್ರಿ

ಕಳೆದ ಕೆಲತಿಂಗಳ ಹಿಂದೆ ವಿವಾಹ ವಿಚ್ಛೇಧನವೇ ಸಿನಿಮಾ ರಂಗದ ಹಾಟ್ ಹಾಟ್ ಸುದ್ದಿಯಾಗಿತ್ತು. ಅತ್ತ ಅಕ್ಕಿನೇನಿ ಕುಟುಂಬದ ಮುದ್ದಿನ ಸೊಸೆ ಸಮಂತಾ ಅಕ್ಕಿನೇನಿ ಮದುವೆಯನ್ನು ಮುರಿದುಕೊಂಡು ಹೊರಬಂದಿದ್ದರೇ, ಇತ್ತ ತಲೈವಾ ರಜನಿಕಾಂತ್ (Rajinikanth) ಪುತ್ರಿ ಐಶ್ವರ್ಯಾ (Aishwarya ) ಕೂಡ ಬಹುಕಾಲದ ದಾಂಪತ್ಯ ಕ್ಕೆ ಅಂತ್ಯ ಹಾಡಿದ್ದರು. ಆದರೆ ಈಗ ದಾಂಪತ್ಯಕ್ಕೆ ಕೊನೆ ಹಾಡಿದ್ದರೂ ಮಕ್ಕಳ ಜೊತೆಗಿನ ಬಾಂಧವ್ಯವನ್ನು ಸ್ಮರಿಸಿರುವ ಐಶ್ವರ್ಯಾ ಮಕ್ಕಳಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ ‌

ನಿರ್ದೇಶಕಿ,ನಿರ್ಮಾಪಕಿಯಾಗಿ ಗುರುತಿಸಿಕೊಂಡಿರೋ ಐಶ್ವರ್ಯಾ ಇತ್ತೀಚಿಗಷ್ಟೇ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಚೇತರಿಸಿಕೊಂಡು ಆಸ್ಪತ್ರೆಯಿಂದ ಹೊರಬಂದ ಐಶ್ವರ್ಯಾ ಮತ್ತೊಮ್ಮೆ ಡೈರೈಕ್ಟರ್ ಕ್ಯಾಪ್ ತೊಟ್ಟಿದ್ದರು. ಮಾತ್ರವಲ್ಲ ತಮಿಳಿನ ನಟ ಸಿಂಬಾ ಗೆ ಆಕ್ಷ್ಯನ್ ಕಟ್ ಹೇಳೋದಾಗಿಯೂ ಘೋಷಿಸಿದ್ದರು. ಇದೀಗ ಐಶ್ವರ್ಯಾ ತಮ್ಮ ಮಕ್ಕಳಿಬ್ಬರಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ನನ್ನ ಗರ್ಭದಲ್ಲಿದ್ದಾಗ ನೀವು ನನ್ನನ್ನು ಒದ್ದಿದ್ದಿರಿ. ಈಗ ನೀವು ಬೆಳೆದಿದ್ದೀರಿ. ನೀವು ನನ್ನನ್ನು ಚುಂಬಿಸುವುದನ್ನು ನಾನು ಆನಂದಿಸುತ್ತೇನೆ.

ನಿಮ್ಮನ್ನು ನನಗೆ ನೀಡಿದ್ದಕ್ಕೆ ನಾನು ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ. ನನ್ನ ಪ್ರೀತಿ ಹಾಗೂ ಪ್ರಾರ್ಥನೆ ನಿಮಗಾಗಿ ಎಂದೂ ಇರಲಿದೆ. ನಿಮ್ಮ ಪ್ರೀತಿಯನ್ನು ಯಾವುದರಿಂದಲೂ ಅಳೆಯಲು ಸಾಧ್ಯವಿಲ್ಲ. ಆದರೆ ನಿಮ್ಮನ್ನು ಜವಾಬ್ದಾರಿಯಿಂದ ಬೆಳೆಸುವ ಹೊಣೆಗಾರಿಕೆ ನನ್ನ ಮೇಲಿದೆ. ನಿಮ್ಮನ್ನು ಜವಾಬ್ದಾರಿಯಿಂದ ಬೆಳೆಸುವುದು ನನ್ನ ಕರ್ತವ್ಯ. ನೀವು ಹೂವುಗಳಾಗಿ ಅರಳುವುದನ್ನು ನೋಡಿ ನಾನು ಧನ್ಯನಾಗುತ್ತಿದ್ದೇನೆ ಎಂದಿದ್ದಾರೆ.

2004 ರಲ್ಲಿ ನಟ ಧನುಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಶ್ವರ್ಯಾಗೆ ಲಿಂಗ್ ಹಾಗೂ ಯಾತ್ರ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. ಸದ್ಯ ಐಶ್ವರ್ಯಾ ಬಾಲಿವುಡ್ ಹಾಗೂ ಕಾಲಿವುಡ್ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೇ ಐಶ್ವರ್ಯಾ ರಜನಿಕಾಂತ್ ಬಗೆಗಿನ ವಿಡಿಯೋ ಸಾಂಗ್ ವೊಂದನ್ನು ರಿಲೀಸ್ ಮಾಡಿದ್ದರು. ಈ ವೇಳೆ ಐಶ್ವರ್ಯಾರನ್ನು ಅಭಿನಂದಿಸಿದ್ದ ನಟ ಧನುಶ್ ಶುಭಾಶಯಗಳು ನನ್ನ ಪ್ರೆಂಡ್ ಎಂದಿದ್ಧರು.

ಅಷ್ಟೇ ಅಲ್ಲ ವಿಚ್ಚೇಧನದ ಬಳಿಕ ಮೊನ್ನೆಯಷ್ಟೇ ನಟ ಧನುಶ್ ಇಬ್ಬರೂ ಮಕ್ಕಳೊಂದಿಗೆ ಸಂಗೀತ ಕಾರ್ಯಕ್ರಮವೊಂದಕ್ಕೆ ಹಾಜರಾಗಿದ್ದರು. ಇದಾದ ಮೇಲೆ ಐಶ್ವರ್ಯಾ ಮಕ್ಕಳಿ ಗಾಗಿ ಇನ್ ಸ್ಟಾಗ್ರಾಂನಲ್ಲಿ ಎಮೋಶನಲ್ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ನೋಡಿದ ಹಲವರು ಇಷ್ಟು ಮುದ್ದಾಗಿರುವ ಕುಟುಂಬ ದೂರವಾಗೋದ್ಯಾಕೆ ಒಂದಾಗಿ‌ ಚೆಂದಾಗಿ ಇರಬಾರದೇ‌ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : RRR ಸಿನಿಮಾ ಟಿಕೇಟ್ ಗೆ 500 ರೂಪಾಯಿ : ವಿತರಕರ ವಿರುದ್ಧ ಸಾರಾ ಗೋವಿಂದ್ ಗರಂ

ಇದನ್ನೂ ಓದಿ : ಡೇಂಜರ್ ಸಿನಿಮಾದ ಮೂಲಕ ಲೆಸ್ಬಿಯನ್ಸ್ ಕತೆ ಹೇಳೋಕೆ ಬರ್ತಿದ್ದಾರೆ ವರ್ಮಾ

emotional letter to the children Aishwarya daughter of Rajinikanth

Comments are closed.