Rohini Sindhuri : ರೋಹಿಣಿ ಸಿಂಧೂರಿಗೆ ಮುಳುವಾದ ಬಟ್ಟೆ ಬ್ಯಾಗ್ ಹಗರಣ : ತನಿಖೆ ಸರ್ಕಾರದ ಆದೇಶ

ಬೆಂಗಳೂರು : ಹಲವು ವಿವಾದಗಳಿಗೆ ಗುರಿಯಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಕೇಳಿಬಂದಿದ್ದ ಬಟ್ಟೆ ಬ್ಯಾಗ್ ಖರೀದಿ ಹಗರಣ ಇದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಶಾಸಕ ಸಾ.ರಾ.ಮಹೇಶ್ ಮತ್ತು ರೋಹಿಣಿ ಸಿಂಧೂರಿ ನಡುವೆ ದೊಡ್ಡ ವಿವಾದ, ವಾಕ್ಸಮರವನ್ನೇ ಸೃಷ್ಟಿಸಿದ್ದ ಈ ಪ್ರಕರಣ ಈಗ ಮತ್ತೊಮ್ಮೆ ಮರುಜೀವ ಪಡೆದುಕೊಂಡಿದೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಅವರು ಹಾಗೂ ಮೈಸೂರು ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ನಡುವೆ ಒಂದಿಲ್ಲೊಂದು ವಿಷಯಕ್ಕೆ ಜಟಾಪಟಿ ನಡೆಯುತ್ತಲೇ ಇತ್ತು. ಕೊನೆಗೂ ರೋಹಿಣಿ ಸಿಂಧೂರಿ ವಿರುದ್ಧ ಪ್ರಮುಖ ಅಸ್ತ್ರ ಕಂಡುಕೊಂಡ ಶಾಸಕ ಸಾ.ರಾ.ಮಹೇಶ್, ಮೈಸೂರನ್ನು ಪ್ಲ್ಯಾಸ್ಟಿಕ್ ಮುಕ್ತ ಮಾಡುವ ನೆಪದಲ್ಲಿ ಬಟ್ಟೆ ಬ್ಯಾಗ್ ಖರೀದಿಸುವ ಯೋಜನೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದರು.‌ ಮಾತ್ರವಲ್ಲದೇ ಅಗತ್ಯ ದಾಖಲೆಗಳನ್ನು ರಿಲೀಸ್ ಮಾಡಿದ್ದರು.

ಚಿಲ್ಲರೇ ಮಾರುಕಟ್ಟೆಯಲ್ಲಿ 9 ರಿಂದ 10 ರೂಪಾಯಿಗೆ ಸಿಗೋ ಬ್ಯಾಗ್ ನ್ನು ರೋಹಿಣಿ ಸಿಂಧೂರಿ 25 ರೂಪಾಯಿಗೆ ಖರೀದಿಸಿ ಅನುದಾನವನ್ನು ಹಾಳು ಮಾಡಿದ್ದಾರೆ. ಅನಗತ್ಯವಾಗಿ ಸರ್ಕಾರಕ್ಕೆ ನಷ್ಟವುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದರು. ರೋಹಿಣಿ ಸಿಂಧೂರಿ ವಿರುದ್ಧ ಆರೋಪಗಳ ಸುರಿಮಳೆಗೈಯ್ದಿದ್ದ ಸಾರಾಮಹೇಶ್, ಬಟ್ಟೆ ಬ್ಯಾಗ್ ಹಗರಣದ ವಿವರ ನೀಡಿದ್ದರು. 14,71,458 ಬ್ಯಾಗ್ ಖರೀಸದಿಸಲಾಗಿದೆ. ಇದಕ್ಕಾಗಿ 1,47,15,000 ತಗುಲುತ್ತದೆ. ಆದರೆ 7 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು ಇದರಿಂದ ಸರ್ಕಾರಕ್ಕೆ ಅನಗತ್ಯವಾಗಿ ನಷ್ಟವಾಗಿದೆ ಎಂದು ಶಾಸಕರು ಆರೋಪಿಸಿದ್ದರು.

ಇದನ್ನೂ ಓದಿ : ಬೆಳ್ಳಿತೆರೆಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಹಾನಿ….! ಭಾರತ ಸಿಂಧೂರಿ ಸಿನಿಮಾ ಸೆಟ್ಟೇರಲು ಸಿದ್ಧ

ಇದನ್ನೂ ಓದಿ : Rohini Sindhuri : 8 ರೂ. ಬೆಲೆಯ ಬಟ್ಟೆ ಬ್ಯಾಗ್ 52 ರೂ.ಗೆ ಖರೀದಿ : ರೋಹಿಣಿ ಸಿಂಧೂರಿ ವಿರುದ್ದ ಸಾ.ರಾ.ಮಹೇಶ್‌ 6 ಕೋಟಿ ಕಿಕ್‌ಬ್ಯಾಕ್‌ ಆರೋಪ

ಅಲ್ಲದೇ ಈ ಪ್ರಕರಣದಲ್ಲಿ 6.18 ಕೋಟಿ ಅವ್ಯವಹಾರ ನಡೆಸಿದ್ದಾರೆ. ಅಲ್ಲದೇ ಪ್ರಕರಣದಲ್ಲಿ 6.18 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಸಾರಾ ಮಹೇಶ್ ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ ನೀಡಿದೆ. ಈ ಆರೋಪದ ಬಗ್ಗೆ ಈ ಹಿಂದೆ ಸ್ಪಷ್ಟನೆ ನೀಡಿದ್ದ ರೋಹಿಣಿ ಸಿಂಧೂರಿ ಯಾವುದೇ ಅವ್ಯವಹಾರ ನಡೆದಿಲ್ಲ. ಬಟ್ಟೆ ಬ್ಯಾಗ್ ನ ಟೆಂಡರ್ ನ್ನು ನಿಯಮಾನುಸಾರ ಕೈಮಗ್ಗಕ್ಕೆ‌ನೀಡಲಾಗಿದೆ ಎಂದು ಹೇಳಿದ್ದರು. ಅದರೂ ಪಟ್ಟು ಬಿಡದ ಸಾರಾಮಹೇಶ್, ಒಂದೊಮ್ಮೆ ಪ್ರಕರಣದ ವಿರುದ್ಧ ತನಿಖೆ ನಡೆಸದೇ ಹೋದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ‌ ನೀಡಿದ್ದರು. ಈಗ ತನಿಖೆಗೆ ಆದೇಶವಾಗಿದ್ದು ಸತ್ಯ ಹೊರಗೆ ಬರುತ್ತಾ ಅನ್ನೋದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : Amit Shah : ಮತ್ತೆ ಜೀವ ಪಡೆದುಕೊಂಡ ಸಂಪುಟ ಸರ್ಕಸ್ : ಎಪ್ರಿಲ್‌ 1ರಂದು ಕರ್ನಾಟಕಕ್ಕೆ ಅಮಿತ್ ಶಾ

ಇದನ್ನೂ ಓದಿ : Deltacron : ದೇಶದಲ್ಲೇ ಡೆಲ್ಟಾಕ್ರಾನ್ ಹಾಟ್ ಸ್ಪಾಟ್ ಆದ ಕರ್ನಾಟಕ : 221 ಪ್ರಕರಣ ದಾಖಲು

Rohini Sindhuri sacked cloth bag scam, government order to probe

Comments are closed.