KGF 2 : 7 ಸಾವಿರ ಥಿಯೇಟರ್ ನಲ್ಲಿ ತೆರೆಗೆ ಬರಲಿದೆ ಕೆಜಿಎಫ್-2 : ಟ್ರೇಲರ್ ಲಾಂಚ್ ನಲ್ಲಿ ಸಿಗಲಿದೆ ಅಪ್ಡೇಟ್ ಮಾಹಿತಿ

ಸದ್ಯ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನೀರಿಕ್ಷಿತ ಸಿನಿಮಾ ಕೆಜಿಎಫ್-2 (KGF-2) ರಿಲೀಸ್ ಗೆ ಸಿದ್ಧವಾಗಿದೆ. ಏಪ್ರಿಲ್ 14 ರಂದು ತೆರೆಗೆ ಬರ್ತಿರೋ ಸಿನಿಮಾದ ಬಗ್ಗೆ ಈಗಾಗಲೇ ಅಭಿಮಾನಿಗಳ ಕುತೂಹಲ‌ ಇಮ್ಮಡಿಗೊಂಡಿದೆ. ಈ ಮಧ್ಯೆ ಈಗಾಗಲೇ ಸಿನಿಮಾದ ತೂಫಾನ್ ಹಾಡು ರಿಲೀಸ್ ಮಾಡಿ ಅಕ್ಷರಷಃ ಸಿನಿಮಾ ರಂಗದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಮಧ್ಯೆ ಮಾರ್ಚ್೨೭ ರಂದು ನಗರದಲ್ಲಿ ಕೆಜಿಎಫ್-2 (KGF 2) ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಲಿದ್ದು, ಇದರಲ್ಲಿ ಸಿನಿಮಾ ರಿಲೀಸ್ ನ ಅಪ್ಡೇಟ್ ಮಾಹಿತಿ ನೀಡೋ ನೀರಿಕ್ಷೆ ಮೂಡಿಸಿದೆ.

KGF-2 to be released in 7,000 theaters update trailer available

ಏಪ್ರಿಲ್ 14 ರಂದು ಬಹುನೀರಿಕ್ಷಿತ ಕೆಜಿಎಫ್-2 (KGF 2) ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಈ ಮಧ್ಯೆ ಸಿನಿಮಾ ಬಗ್ಗೆ ಮಾಹಿತಿ ನೀಡೋದಿಕ್ಕೆ ಚಿತ್ರತಂಡ ಮಾರ್ಚ್ 27 ರಂದು ಸುದ್ದಿಗೋಷ್ಟಿ ನಡೆಸಲಿದ್ದು, ದೇಶದ 150 ಕ್ಕೂ ಹೆಚ್ಚು ವಿವಿಧ ಭಾಷೆಯ ಪತ್ರಕರ್ತರು ಪಾಲ್ಗೊಳ್ಳಲಿದ್ದಾರಂತೆ. ಮಾರ್ಚ್ 27 ರಂದು ಟ್ರೇಲರ್ ರಿಲೀಸ್ ಆಗಲಿದ್ದು, ಸಿನಿಮಾ ತಂಡ ಟ್ರೇಲರ್ ರಿಲೀಸ್ ನ್ನೇ ಫ್ರೀ ರಿಲೀವ್ ಇವೆಂಟ್ ಮಾದರಿಯಲ್ಲಿ ನಡೆಸಲಿದ್ದು, ಇದಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್ ಹಾಗೂ ನಟ ಶಿವರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

KGF-2 to be released in 7,000 theaters update trailer available

ಇದಲ್ಲದೇ ಚಿತ್ರತಂಡದ ಸಂಜಯ್ ದತ್, ರವೀನಾ ಟಂಡನ್, ಪ್ರಥ್ವಿರಾಜ್ ಸೇರಿದಂತೆ ಯಶ್, ಪ್ರಶಾಂತ್ ನೀಲ್, ವಿಜಯ್ ಕಿರಂಗದೂರು ಸೇರಿದಂತೆ ಎಲ್ಲರೂ ಪಾಲ್ಗೊಳ್ಳಲಿದ್ದಾರೆ. ಕೆಜಿಎಫ್-2 (KGF 2) ಸಿನಿಮಾ ಐದು ಭಾಷೆಯಲ್ಲಿ ಏಪ್ರಿಲ್ 14 ರಂದು ದೇಶದ 7ಸಾವಿರ ಥಿಯೇಟರ್ ಗಳಲ್ಲಿ ತೆರೆಗೆ ಬರಲಿದೆ. ಕನ್ನಡದ 450 ಕ್ಕೂ ಹೆಚ್ಚು ಥಿಯೇಟರ್ ಗಳು ಹಾಗೂ ತಮಿಳಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಪ್ರದರ್ಶನ ಕಾಣಲಿದೆ.

KGF-2 to be released in 7,000 theaters update trailer available

ಇನ್ನೂ ಎಲ್ಲಾ ಭಾಷೆಯ ಸಿನಿಮಾಗೂ ಇಂಗ್ಲೀಷ್ ನಲ್ಲಿ ಸನ್ ಟೈಟಲ್ ಇರಲಿದ್ದು ದುಬೈನಲ್ಲಿ ರಿಲೀಸ್ ಆಗಲಿರೋ ಸಿನಿಮಾಗಳಿಗೆ ಮಾತ್ರ ಇಂಗ್ಲೀಷ್ ಜೊತೆ ಅರೇಬಿಕ್ ಭಾಷೆಯಲ್ಲೂ ಸಬ್ ಟೈಟಲ್ ನೀಡಲಾಗುತ್ತಿದೆಯಂತೇ. ಜಪಾನ್, ಅಮೇರಿಕಾ, ಇಂಗ್ಲೇಂಡ್, ಬ್ರಿಟನ್, ದುಬೈ, ಸ್ವೀಡನ್, ಸ್ವಿಡ್ಜರ್ ಲ್ಯಾಂಡ್ ಸೇರಿದಂತೆ ಒಟ್ಟು ವಿಶ್ವದ 70 ರಾಷ್ಟ್ರಗಳಲ್ಲಿ ಕೆಜಿಎಫ್-2 ಸಿನಿಮಾ ರಿಲೀಸ್ ಆಗಲಿದೆ.

KGF-2 to be released in 7,000 theaters update trailer available

ಇನ್ನೂ ಕೆಜಿಎಫ್-2 (KGF 2) ಸಿನಿಮಾ ರಿಲೀಸ್ ಗೆ ಫ್ರೀ ರಿಲೀಸ್ ಇವೆಂಟ್ ಮಾಡದಿರಲು ಚಿತ್ರತಂಡ ನಿರ್ಧರಿಸಿದೆಯಂತೆ. ಅಪ್ಪು ನಿಧನ ಹಾಗೂ ಕೊರೋನಾ ಕೇಸ್ ಗಳ ಹಿನ್ನೆಲೆಯಲ್ಲಿ ಇವೆಂಟ್ ರದ್ದುಗೊಳಿಸಿದ್ದೇವೆ ಎಂದು ನಿರ್ಮಾಪಕ ವಿಜಯ್ ಕಿರಂಗದೂರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : Radhika Pandit : ಎದೆ ಹಾಲನ್ನು ದಾನ ಮಾಡಿ : ನಟಿ ರಾಧಿಕಾ ಪಂಡಿತ್ ಮನವಿ

ಇದನ್ನೂ ಓದಿ : ಡೇಂಜರ್ ಸಿನಿಮಾದ ಮೂಲಕ ಲೆಸ್ಬಿಯನ್ಸ್ ಕತೆ ಹೇಳೋಕೆ ಬರ್ತಿದ್ದಾರೆ ವರ್ಮಾ

KGF-2 to be released in 7,000 theaters update trailer available

Comments are closed.