Fact Check : ಫ್ಯಾಕ್ಟ್​ ಚೆಕ್​​ನಲ್ಲಿ ಬಯಲಾಯ್ತು ಆರ್ಯನ್​ ಖಾನ್​​ರದ್ದು ಎನ್ನಲಾದ ವಿಡಿಯೋದ ಅಸಲಿಯತ್ತು

Fact Check :ಬಾಲಿವುಡ್​ ನಟ ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​​ರನ್ನು ವಿವಾದಗಳು ಯಾಕೋ ಬೆನ್ನು ಬಿಡುವಂತೆ ಕಾಣುತ್ತಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಯುವಕನೊಬ್ಬ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್​ ಆಗಿತ್ತು. ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರೋದು ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​ ಎಂದು ಆರೋಪಿಸಿದ ನೆಟ್ಟಿಗರು ಆರ್ಯನ್​ ಖಾನ್​ ವಿರುದ್ಧ ಆಕ್ರೋಶ ಹೊರಹಾಕಿದ್ದರು.


24 ವರ್ಷದ ಆರ್ಯನ್​​ ಖಾನ್​​ರನ್ನು ಡ್ರಗ್​​ ಸೇವನೆ ಪ್ರಕರಣದ ಅಡಿಯಲ್ಲಿ ಮುಂಬೈ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಅಕ್ಟೋಬರ್​ ಮೂರರಂದು ಬಂಧಿಸಿದ್ದರು. ಆರ್ಯನ್​ ಖಾನ್​ ಬಂಧನವಾಗಿ ಮೂರು ವಾರಗಳ ಬಳಿಕ ಅವರನ್ನು ಜಾಮೀನಿನ ಮೇಲೆ ಹೊರಬಿಡಲಾಗಿದೆ.


ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ಯುವಕನನ್ನು ಇನ್ನೊಬ್ಬ ವ್ಯಕ್ತಿ ತಡೆಯಲು ಯತ್ನಿಸಿದರೂ ಸಹ ಆತ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದನ್ನು ನೋಡಿ ದಿಗ್ಬ್ರಮೆಗೊಂಡ ನೆಟ್ಟಿಗರು ಶಾರೂಕ್​ ಖಾನ್​ ಪುತ್ರ ಈ ರೀತಿ ಮಾಡುತ್ತಾನಾ..? ಎಂದು ಆಡಿಕೊಳ್ಳಲು ಆರಂಭಿಸಿದ್ದಾರೆ.


ಈ ವಿಡಿಯೋ ಪೋಸ್ಟ್​ ಮಾಡಿದ ವ್ಯಕ್ತಿಯೊಬ್ಬರು ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​ ಟೊರೊಂಟೋ ವಿಮಾನ ನಿಲ್ದಾಣದಲ್ಲಿ ಕಂಡು ಬಂದರು ಎಂದು ಶೀರ್ಷಿಕೆ ನೀಡಿದ್ದಾರೆ.


ಆದರೆ ಫ್ಯಾಕ್ಟ್​ ಚೆಕ್​​ನಲ್ಲಿ ನಿಜ ವಿಚಾರ ಬಟಾ ಬಯಲಾಗಿದೆ. ಈ ವಿಡಿಯೋದಲ್ಲಿರುವ ವ್ಯಕ್ತಿ ಆರ್ಯನ್​ ಖಾನ್​ ಅಲ್ಲ. ಈತ ಟ್ವಿಲೈಟ್​ ಖ್ಯಾತಿಯ ಕೆನಡಾದ ನಟ ಬ್ರಾನ್ಸನ್​​ ಪೆಲ್ಲೆಟಿಯರ್​​ ಎಂದು ತಿಳಿದುಬಂದಿದೆ. ಇದು 2012ರಲ್ಲಿ ಚಿತ್ರೀಕರಿಸಲಾಗಿದ್ದು ಈ ಕೃತ್ಯಕ್ಕಾಗಿ ಪೆಲ್ಲೆಟಿಯರ್​​ನ್ನು ಪೊಲೀಸರು ಬಂಧಿಸಿದ್ದಾರೆ.


ಡಿಸೆಂಬರ್​ 2012ರಲ್ಲಿ ಲಾಸ್​ ಏಂಜಲೀಸ್​​ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಪೆಲ್ಲೆಟಿಯರ್​​ ಅಮಲೇರಿದ ಸ್ಥಿತಿಯಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

Fact Check : This is not Aryan Khan urinating in public at an airport

ಇದನ್ನು ಓದಿ : corona 3rd wave : ರಾಜ್ಯಕ್ಕೆ ಮೂರನೆ ಅಲೆಯ ಎಂಟ್ರಿಯಾಗಿದೆ: ಆತಂಕಕಾರಿ ಮಾಹಿತಿ ನೀಡಿದ ಸಚಿವ ಡಾ.ಸುಧಾಕರ್

ಇದನ್ನೂ ಓದಿ : Anchor Anushree: ಮತ್ತೆ ಹಿರಿತೆರೆಗೆ ಜಿಗಿದ ಆ್ಯಂಕರ್ ಅನುಶ್ರೀ; ಹಾರರ್ ಚಿತ್ರಕ್ಕೆ ಗೋವಾದಲ್ಲಿ ಶೂಟಿಂಗ್

Comments are closed.