Vijay Hazare Trophy : ಲೀಗ್‌ನಲ್ಲಿ ಕರ್ನಾಟಕ ಟೇಬಲ್ ಟಾಪರ್, ಕ್ವಾರ್ಟರ್ ಫೈನಲ್‌ನಲ್ಲಿ ಜಾರ್ಖಂಡ್ ಎದುರಾಳಿ

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ (Vijay Hazare Trophy Karnataka) ಏಕದಿನ ಟೂರ್ನಿಯಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ 6ನೇ ಗೆಲುವಿನೊಂದಿಗೆ ನಾಕೌಟ್ ಹಂತಕ್ಕೆ ಎಂಟ್ರಿ ಕೊಟ್ಟಿದೆ. ಅಹ್ಮದಾಬಾದ್’ನಲ್ಲಿ ಶನಿವಾರ (ನವೆಂಬರ್ 26) ನಡೆಯುವ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಜಾರ್ಖಂಡ್ ತಂಡವನ್ನು ಎದುರಿಸಲಿದೆ.

ಬುಧವಾರ ಕೋಲ್ಕತಾದಲ್ಲಿ ನಡೆದ ಎಲೈಟ್ ಗ್ರೂಪ್ ‘ಬಿ’ ಹಂತದ ತನ್ನ 7ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ರಾಜಸ್ಥಾನ ತಂಡವನ್ನು 60 ರನ್’ಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.ಕಲ್ಕತ್ತಾ ಕ್ರಿಕೆಟ್ ಮತ್ತು ಫುಟ್ಬಾಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ 48.4 ಓವರ್’ಗಳಲ್ಲಿ 208 ರನ್’ಗಳಿಗೆ ಆಲೌಟಾಯಿತು. ಯುವ ಬ್ಯಾಟ್ಸ್’ಮನ್ ನಿಕಿನ್ ಜೋಸ್ 67 ರನ್ ಗಳಿಸಿದ್ರೆ, ಕರ್ನಾಟಕ ತಂಡದ ಆಪದ್ಬಾಂಧವ ಶ್ರೇಯಸ್ ಗೋಪಾಲ್ 57 ರನ್’ಗಳ ಕಾಣಿಕೆಯಿತ್ತರು.

ನಂತರ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ ಕರ್ನಾಟಕದ ಬೌಲರ್’ಗಳ ಸಂಘಟಿತ ದಾಳಿಗೆ ತತ್ತರಿಸಿ 41.1 ಓವರ್’ಗಳಲ್ಲಿ ಕೇವಲ 148 ರನ್’ಗಳಿಗೆ ಆಲೌಟಾಯಿತು. ಕರ್ನಾಟಕ ಪರ ವೇಗಿ ರೋನಿತ್ ಮೋರೆ (3/35) ಮತ್ತು ಆಲ್ರೌಂಡರ್ ಕೃಷ್ಣಪ್ಪ ಗೌತಮ್ (3/36) ತಲಾ ಮೂರು ವಿಕೆಟ್ ಪಡೆದ್ರೆ, ಮಧ್ಯಮ ವೇಗಿಗಳಾದ ವಿದ್ವತ್ ಕಾವೇರಪ್ಪ(2/17) ಮತ್ತು ವಿ.ಕೌಶಿಕ್ (2/23) ತಲಾ 2 ವಿಕೆಟ್ ಕಬಳಿಸಿ ಕರ್ನಾಟಕಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

ವಿಜಯ್ ಹಜಾರೆ ಟ್ರೋಫಿ (Vijay Hazare Trophy Karnataka) : ಕರ್ನಾಟಕದ ನಾಕೌಟ್ ಹಾದಿ

ಮೊದಲ ಪಂದ್ಯ: ಮೇಘಾಲಯ ವಿರುದ್ಧ 115 ರನ್ ಗೆಲುವು
2ನೇ ಪಂದ್ಯ: ವಿರರ್ಭ ವಿರುದ್ಧ 66 ರನ್ ಗೆಲುವು
3ನೇ ಪಂದ್ಯ: ಜಾರ್ಖಂಡ್ ವಿರುದ್ಧ 6 ವಿಕೆಟ್ ಗೆಲುವು
4ನೇ ಪಂದ್ಯ: ದೆಹಲಿ ವಿರುದ್ಧ 4 ವಿಕೆಟ್ ಗೆಲುವು
5ನೇ ಪಂದ್ಯ: ಅಸ್ಸಾಂ ವಿರುದ್ಧ 6 ವಿಕೆಟ್ ಸೋಲು
6ನೇ ಪಂದ್ಯ: ಸಿಕ್ಕಿಂ ವಿರುದ್ಧ 6 ವಿಕೆಟ್ ಗೆಲುವು
7ನೇ ಪಂದ್ಯ: ರಾಜಸ್ಥಾನ ವಿರುದ್ಧ 60 ರನ್ ಗೆಲುವು

ಇದನ್ನೂ ಓದಿ : Rohit Sharma fitness: ಬೊಜ್ಜು ಕರಗಿಸಲು ಮುಂದಾದ್ರಾ ಹಿಟ್‌ಮ್ಯಾನ್..? ಜಿಮ್‌ನಲ್ಲಿ ರೋಹಿತ್ ಶರ್ಮಾ ಭರ್ಜರಿ ವರ್ಕೌಟ್

ಇದನ್ನೂ ಓದಿ : Ravindra Jadeja out : ರವೀಂದ್ರ ಜಡೇಜಾ ಅನ್’ಫಿಟ್, ಬಾಂಗ್ಲಾ ಪ್ರವಾಸದಿಂದ ಔಟ್

Vijay Hazare Trophy Karnataka table topper in league Jharkhand opponent in quarter finals

Comments are closed.