ಬಿಗ್ ಬಾಸ್ ಮನೆಗೆ ಬಂದ್ರು ಮಾಜಿ ಸ್ಪರ್ಧಿಗಳು, ಗಿಲ್ಲಿ-ರಜತ್-ಉಗ್ರಂ ಮಂಜು ಮಾತಿನ ಚಕಮಕಿ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋಗೆ ಇಂದು ಮಾಜಿ ಸ್ಪರ್ಧಿಗಳು ಬಂದಿದ್ದಾರೆ. ಬಿಬಿ ಹೌಸ್ ರೆಸಾರ್ಟ್ ಆಗಿ ಬದಲಾಗಿದ್ದು, ರಜತ್, ಉಗ್ರಂ ಮಂಜು, ವಿಕ್ರಮ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ ಅಥಿತಿಗಳಾಗಿ ಬಂದಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳು ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಿದೆ. ಆದ್ರೆ ಇಲ್ಲೂ ಸಹ ಗಿಲ್ಲಿ ನಟ ತನ್ನ ತಮಾಷೆ ಮೂಲಕ ಅವರ ಬಳಿ ಸಿಕ್ಕಿಹಾಕಿಕೊಂಡಿದ್ದಾನೆ. ಹಾಗಾದ್ರೆ ಏನಾಯ್ತು ಅಂತ ನೋಡಿ.

ಕಾವು ಎಂದ ರಜತ್
ಇನ್ನು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಮಾಜಿ ಸ್ಪರ್ಧಿಗಳು ಈಗ ಇರುವ ಸ್ಪರ್ಧಿಗಳಿಗೆ ಕಾಲೆಳೆಯುತ್ತಿದ್ದಾರೆ. ರಜತ್ ಅವರು ಕಾವ್ಯ ಅವರಿಗೆ ಕಾವು ಎಂದಿದ್ದಾರೆ. ಅದಕ್ಕೆ ಗಿಲ್ಲಿ ಆ ರೀತಿ ಅನ್ನಬೇಡಿ ನೋವಾಗುತ್ತೆ ಎಂದರು. ಅದಕ್ಕೆ ರಜತ್ ನಿನಗೆ ನೋವಾಗಲಿ ಎಂದೇ ಹೇಳಿದೆ ಎಂದಿದ್ದಾರೆ. ಗಿಲ್ಲಿ ಸೈಲೆಂಟ್ ಆಗಿದ್ದಾರೆ.

ಉಗ್ರಂ ಮಂಜುಗೆ ಎಷ್ಟನೇ ಮದುವೆ?
ಇನ್ನು ಉಗ್ರಂ ಮಂಜು ಅವರಿಗೆ ಮದುವೆ ಫಿಕ್ಸ್ ಆಗಿದೆ. ಅದಕ್ಕೆ ಬಿಗ್ ಬಾಸ್ ವಿಶ್ ಮಾಡಿದ್ದಾರೆ. ನಿಮಗೆ ಒಳ್ಳೆಯದಾಗಲಿ ಎಂದಿದ್ದಾರೆ. ಅದಕ್ಕೆ ಗಿಲ್ಲಿ ನಟ ಎಷ್ಟನೇ ಮದುವೆ ಇದು? ಎರಡನೇ ಮದುವೆಯಾ? ಮೂರನೇ ಮುದುವೆಯಾ ಎಂದು ರೇಗಿಸಿದ್ದಾರೆ.

ಗಿಲ್ಲಿ ಮೇಲೆ ಕೋಪ
ಅದಕ್ಕೆ ಕೋಪಗೊಂಡ ಉಗ್ರಂ ಮಂಜು, ವೈಯಕ್ತಿಕ ವಿಚಾರಕ್ಕೆ ಬರಬೇಡ, ನಾವು ಅತಿಥಿಗಳನ್ನು ಅನ್ನೋದನ್ನು ಮರೆತು ನಿಮ್ಮನ್ನು ವಿಚಾರಿಸಿಕೊಳ್ಳಬೇಕಾಗುತ್ತೆ ಎಂದು ವಾರ್ನಿಂಗ್ ಮಾಡಿದ್ದಾರೆ.

ಇದನ್ನೂ ಓದಿ: ಇದು ಬೆಸ್ಟ್ ಬ್ಯುಸಿನೆಸ್ ಪ್ಲಾನ್

ರಜತ್ ಕೆಂಡಾಮಂಡಲ
ನಿಮಗೆಲ್ಲಾ ಉಗ್ರಂ ಮಂಜು ಲೀಡರ್? ನಿವೆಲ್ಲಾ ಬಿಟ್ಟಿ ಊಟ ತಿನ್ನುವುದಕ್ಕೆ ಬಂದಿದ್ದೀರಾ ಎಂದು ಗಿಲ್ಲಿ ಹೇಳಿದ್ದಾರೆ. ಅದಕ್ಕೆ ರಜತ್ ಕೋಪಕೊಂಡು ನೀನು ಕೊಡ್ತಾ ಇದಿಯೇನಪ್ಪಾ? ಬಿಗ್ ಬಾಸ್ ಕೊಡ್ತಾ ಇರೋದು. ನೀನು ಎಷ್ಟರಲ್ಲಿ ಇರಬೇಕೋ ಅಷ್ಟರಲ್ಲಿ ಇರು. ಜಾಸ್ತಿ ಮಾಡಬೇಡ ಎಂದಿದ್ದಾರೆ.

ಒಟ್ಟಿನಲ್ಲಿ ಮಾಜಿ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬಂದಿರೋದು ಹೊಸ ಹುರುಪು ನೀಡಿದೆ. ಸಂಚಿಕೆ ನೋಡೋಕೆ ಪ್ರೇಕ್ಷಕರು ಕಾಯ್ತಾ ಇದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories