ಸ್ಮೋಕಿಂಗ್ ಇಂಜುರಿಯಸ್..’ ಅಂತಾನೇ ಮತ್ತೇರಿಸುತ್ತಿದೆ ‘ಗಡಿಯಾರ’

0

ಈಗಂತೂ ಎಲ್ಲೆಲ್ಲೂ ಕೊರೊನಾದ್ದೇ ಫೀವರ್… ಆದ್ರೆ ಕೊರೊನಾ ಫೀವರ್ ನಡುವಲ್ಲೇ ‘ಸ್ಮೋಕಿಂಗ್ ಇಂಜುರಿಯಸ್ ಟು ಹೆಲ್ತ್ ಆಂತಾ ಸಿಗರೇಟ್ ಪ್ಯಾಕ್ ಮೇಲೆ ಬರೆದಿರೋ ಸ್ಲೋಗನ್ ಇಟ್ಕೊಂಡು ಸಿದ್ದವಾಗಿರೋ ಹಾಡೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಸ್ಮೋಕಿಂಗ್ ಇಂಜುರಿಯಸ್ ಅಂತಾ ಆಯ್ತೆ ಪ್ಯಾಕೆಟ್ಟು…. ತುಟಿಯೊಳಗೆ ಕುಳಿತುಕೊಂಡು ಬುಸುಗುಡುತೈತೆ ಸಿಗರಟ್ಟು… ಹುಕ್ಕಾದ ಹುಕ್ಕೆಯೊಳಗೆ ಸ್ವರ್ಗ ತಂದು ಬಚ್ಚಿಟ್ಟು… ಮೈ ಮರೆಸಿ ಕುಣಿಸುತ್ತಿರುವ ದೇವಾ ನೀನೆ ಫರ್ಪೆಕ್ಟು… ಈ ಹಾಡನ್ನು ಹೊತ್ತು ಬರ್ತಿರೋ ಸಿನಿಮಾನೇ ಗಡಿಯಾರ.

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾಗಳ ಸಾಲಿಗೆ ಸೇರಿರೋ ಗಡಿಯಾರ ಈಗಾಗಲೇ ಪೋಸ್ಟರ್, ಟೀಸರ್ ಮೂಲಕ ಸಖತ್ ಸುದ್ದಿ ಮಾಡಿತ್ತು. ಯುವ ನಿರ್ದೇಶಕ ಪ್ರಬೀಕ್ ಮೊಗವೀರ್ ನಿರ್ದೇಶನದ ಜೊತೆಗೆ ನಿರ್ಮಾಣದಲ್ಲಿ ಮೂಡಿಬರ್ತಿರೋ ಗಡಿಯಾರ ಇದೀಗ ಚಿತ್ರದ ಹಾಡಿನ ಆಡಿಯೋ ಟ್ರ್ಯಾಕ್ ಬಿಡುಗಡೆ ಮಾಡಿದೆ.

ರಾಘವ್ ಸುಭಾಶ್ ಸಂಗೀತ ನಿರ್ದೇಶನದಲ್ಲಿ ಹಾಡು ಅದ್ಬುತವಾಗಿ ಮೂಡಿಬಂದಿದೆ. ಅಪೂರ್ವ ಶ್ರೀಕುಮಾರ್ ಹಾಗೂ ವ್ಯಾಸರಾಜ್ ಅವರ ಧ್ವನಿ ಕಿವಿಗಿಂಪು ನೀಡುತ್ತಿದೆ. ಸುಭಾಶ್ ಬೆಟ್ಟಗೆರೆ ಅವರ ಸಾಹಿತ್ಯ ಇಷ್ಟವಾಗಿದ್ದು, ಚಿತ್ರದ ಮೊದಲ ಹಾಡಿಗೆ ಸಂಗೀತ ಪ್ರೀಯರು ಫಿದಾ ಆಗಿದ್ದಾರೆ.

ಲವ್, ಮಾಸ್, ಹಿಸ್ಟಾರಿಕಲ್, ಹಾರರ್, ಥ್ರಿಲ್ಲರ್ ಅಂಶವನ್ನಿಟ್ಟುಕೊಂಡು ಕಥೆ ಹಣೆದಿರೋ ನಿರ್ದೇಶಕ ಪ್ರಬೀಕ್ ಮೊಗವೀರ್. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಗಡಿಯಾರ ಸಿನಿಮಾದ ಮೂಲಕ ಪ್ರಬಿಕ್ ಮೊಗವೀರ್ ಕನ್ನಡ ಸಿನಿಮಾರಂಗಕ್ಕೆ ವಿಭಿನ್ನವಾಗಿರೋ ಸಿನಿಮಾವೊಂದನ್ನು ನೀಡೋದಕ್ಕೆ ಪಣತೊಟ್ಟಿದ್ದಾರೆ. ಈಗಾಗಲೇ ಟೀಸರ್ ಮೂಲಕ ಚಿತ್ರರಸಿಕರ ತೆಲೆ ಕೆಸಿಡಿಸಿದ್ದ ಗಡಿಯಾರ ಸಾಮಾನ್ಯ ಸಿನಿಮಾ ಅಲ್ಲಾ ಅನ್ನೋದನ್ನು ಸಾಬೀತು ಪಡಿಸಿತ್ತು. ಇದೀಗ ಚಿತ್ರದ ಅದ್ಬುತ ಹಾಡೊಂದನ್ನು ಬಿಡುಗಡೆ ಮಾಡಿರೋ ಚಿತ್ರತಂಡ ಸಿನಿ ಪ್ರೇಕ್ಷಕರನ್ನು ಹಾಡಿನ ನಶೆಯಲ್ಲೇ ಕಳೆದುಹೋಗುವಂತೆ ಮಾಡಿದೆ.

ಬಹುತಾರಾಗಣವನ್ನು ಹೊಂದಿರೋ ಗಡಿಯಾದ ಸಿನಿಮಾದ ವಿಶೇಷ ಪಾತ್ರದಲ್ಲಿ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಎಸ್.ಪಿ. ಸಾಂಗ್ಲಿಯಾನ ಹಾಗೂ ಯಶ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಮುಖ್ಯಭೂಮಿಕೆಯಲ್ಲಿ ಶರತ್ ಲೋಹಿತಾಶ್ವ ಮತ್ತು ಸುಚೇಂದ್ರ ಪ್ರಸಾದ ಜೊತೆಗೆ ಪ್ರದೀಪ್ ಪೂಜಾರಿ, ಗಣೇಶ್ ರಾವ್, ಮನದೀಪ್ ರೈ, ರಾಧಾ ರಾಮಚಂದ್ರ, ಪ್ರಣಯ ಮೂರ್ತಿ, ಎಸಿಪಿ ಚಬ್ಬಿ, ವಿನಯ್ ಕುಮಾರ್ ರಾವ್, ಲೀಲಾ ಮೋಹನ್ ಬಣ್ಣ ಹಚ್ಚಿದ್ದಾರೆ.

ಖ್ಯಾತ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರ ನಾಲ್ಕು ಅದ್ಬುತ ಸಾಹಸ ಸನ್ನಿವೇಶಗಳು ಚಿತ್ರದಲ್ಲಿದ್ದು, ವಿನಯ್ ಕುಮಾರ್ ರಾವ್, ಲೀಲಾ ಮೋಹನ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳು ಅದ್ಬುತವಾಗಿ ಮೂಡಿಬಂದಿದ್ದು, ಖ್ಯಾತ ಗಾಯಕರಾದ ಹೇಮಂತ್ ಕುಮಾರ್, ವ್ಯಾಸರಾಜ್, ಅನುರಾಧ ಭಟ್, ಅಪೂರ್ವ ಶ್ರಿ ಕುಮಾರ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಪೋಸ್ಟರ್, ಟೀಸರ್ ನಿಂದ ಪ್ರೇಕ್ಷಕರ ಮನಗೆದ್ದಿರೋ ಗಡಿಯಾರ ಇದೀಗ ಹಾಡುಗಳ ಮೂಲಕವೂ ಪ್ರೇಕ್ಷಕರಿಗೆ ಇಷ್ಟವಾಗ್ತಿದೆ. ಒಟ್ಟಿನಲ್ಲಿ ಲಾಕ್ ಡೌನ್ ನಿಂದಾಗಿ ಮನೆಯಲ್ಲಿಯೇ ಬಂಧಿಯಾಗಿರೋ ನಿಮಗೆಲ್ಲಾ ಈ ಹಾಡು ನಿಜಕ್ಕೂ ಇಷ್ಟವಾಗುತ್ತದೆ.

ಗಡಿಯಾರ ಸಿನಿಮಾದ ಹಾಡು ಹೇಗಿದೆ ಅನ್ನೋದನ್ನು ನೀವೂ ಕೇಳಿ….

https://youtu.be/kBuPUzaea_c

ಗಡಿಯಾರ ಸಿನಿಮಾದ ಕುತೂಹಲ ಮೂಡಿಸಿರೋ ವಿಭಿನ್ನ ಟೀಸರ್....
https://youtu.be/jeLisR2xFdA

Leave A Reply

Your email address will not be published.