Gandhadagudi : ಅಪ್ಪು ಅಭಿಮಾನಿಗಳಿಗೆ ಭರ್ಜರಿ ಆಫರ್ : ನಾಲ್ಕು ದಿನಗಳ ಕಾಲ ಗಂಧದಗುಡಿ ಟಿಕೇಟ್ ದರ ಕಡಿತ

ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಈ ನಾಡಿನ ಶ್ರೀಮಂತಿಕೆಯನ್ನು ಪರಿಚಯಿಸುವ ಉದ್ದೇಶದಿಂದ ಸಿದ್ಧಪಡಿಸಿದ ಗಂಧದಗುಡಿ (Gandhadagudi)ಸಾಕ್ಷ್ಯಚಿತ್ರ ಈಗಾಗಲೇ ನಾಡಿನಾದ್ಯಂತ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ನಾಡಿನ‌ ಜನರು ಹಾಗೂ ವಿಶೇಷವಾಗಿ ಮಕ್ಕಳು ಗಂಧದಗುಡಿ ಮೆಚ್ಚಿಕೊಂಡಿದ್ದು, ಮುಗಿಬಿದ್ದು ಜನರು ಥಿಯೇಟರ್ ಗಳಲ್ಲಿ ಗಂಧದಗುಡಿ ವೀಕ್ಷಿಸುತ್ತಿದ್ದಾರೆ. ಈ‌ ಮಧ್ಯೆ ಇನ್ನೂ ಗಂಧದಗುಡಿ ಸಾಕ್ಷ್ಯಚಿತ್ರ ನೋಡದವರಿಗಾಗಿ ನಿರ್ಮಾಪಕಿ ಅಶ್ವಿನಿ ಪುನೀತ್ ಸಖತ್ ಆಫರ್ ನೀಡಿದ್ದಾರೆ. ಇನ್ನೂ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಗಂಧದಗುಡಿ ಅರ್ಧ ದರಕ್ಕೆ ಪ್ರದರ್ಶನಗೊಳ್ಳಲಿದೆ.

ಕನ್ನಡ ನಾಡಿನಲ್ಲಿ ಶ್ರೀಮಂತವಾಗಿರುವ ಸಸ್ಯ ಸಂಪತ್ತು, ಪ್ರಾಣಿ ಪಕ್ಷಿ ಸಂಕುಲ, ಬೆಟ್ಟ ಗುಡ್ಡ ಹೀಗೆ ಎಲ್ಲವನ್ನೂ ಸಮಗ್ರವಾಗಿ ಹಾಗೂ ಸುಂದರವಾಗಿ ತೋರಿಸಲು ಸ್ವತಃ ಪರಿಶ್ರಮದಿಂದ ಗಂಧದಗುಡಿ ಸಿದ್ಧಪಡಿಸಿದ್ದರು ಪುನೀತ್ ರಾಜ್ ಕುಮಾರ್. ಆದರೆ ಈ ಸಾಕ್ಷ್ಯ ಚಿತ್ರ ತೆರೆಗೆ ಬರುವ ವೇಳೆ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿದ್ದರು. ಆದರೇ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಈ ಸಾಕ್ಷ್ಯಚಿತ್ರವನ್ನು ಅದ್ದೂರಿಯಾಗಿ ತೆರೆಗೆ ತಂದಿದ್ದಾರೆ. ಈಗ ಈ ಗಂಧದಗುಡಿ ಸಾಕ್ಷ್ಯಚಿತ್ರವನ್ನು ಎಲ್ಲರೂ ನೋಡಬೇಕೆಂಬ ಕಾರಣಕ್ಕೆ ನಿರ್ಮಾಪಕಿಯಾಗಿರುವ ಅಶ್ವಿನಿ ಸೋಮವಾರದಿಂದ ನಾಲ್ಕು ದಿನಗಳ ಕಾಲ ಟಿಕೇಟ್ ದರದಲ್ಲಿ ಕಡಿತ ಮಾಡಿದ್ದಾರೆ.

Gandhadagudi : ಮಕ್ಕಳಿಗೆ ಗಂಧದ ಗುಡಿ ತೋರಿಸಿ : ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌

ಗಂಧದಗುಡಿ ಸಾಕ್ಷ್ಯಚಿತ್ರದ ಪ್ರದರ್ಶನ ದರ ಇಳಿಕೆ ಬಗ್ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಿನಿಮಾದ ವಿತರಕರು ಹಾಗೂ ಪ್ರದರ್ಶಕರ ಜೊತೆ ಚರ್ಚಿಸಿದ್ದಾರಂತೆ. ಬಳಿಕ ತಮ್ಮ ಅಧಿಕೃತ ಟ್ವಿಟರ್ ಅಕೌಂಟ್ ಮೂಲಕ ಅಶ್ವಿನಿ ಈ ವಿಚಾರವನ್ನು ಪ್ರಕಟಿಸಿದ್ದಾರೆ. ನವೆಂಬರ್ 7 ರಿಂದ ನವೆಂಬರ್ 10 ರವರೆಗೆ ಟಿಕೇಟ್ ದರ ಸಿಂಗಲ್ ಸ್ಕ್ರಿನ್ ಗಳಲ್ಲಿ 56 ರೂಪಾಯಿ ಇರಲಿದ್ದು, ಮಲ್ಟಿಪ್ಲೆಕ್ಸ್ ಗಳಲ್ಲಿ ಈ ದರ 112 ಕ್ಕೆ ಇಳಿಸಲಾಗಿದೆ. ಈ ದರದಲ್ಲಿ ಥಿಯೇಟರ್ ಗಳಲ್ಲಿ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಎಲ್ಲಾ ಶೋಗಳನ್ನು ಪ್ರದರ್ಶಿಸಬೇಕೆಂದು ಅಶ್ವಿನಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ : Ramya Dhananjay | ಮತ್ತೆ ಸ್ಯಾಂಡಲ್ ವುಡ್ ಗೆ ಮರಳಿದ ರಮ್ಯ: ಡಾಲಿ ಉತ್ತರಕಾಂಡಕ್ಕೆ ಸ್ಯಾಂಡಲ್ ವುಡ್ ಕ್ವೀನ್ ಹೀರೋಯಿನ್

ಇದನ್ನೂ ಓದಿ : ಅಲ್ಲಿ ಹಳ್ಳಿ ಹುಡುಗಿ ಲೀಲಾ, ಇಲ್ಲಿ ಮಾಡರ್ನ್ ಲೈಲಾ: ಇದು ಕಾಂತಾರ ಸಪ್ತಮಿ ಹಾಟ್ ಪೋಟೋಸ್

ಇದನ್ನೂ ಓದಿ : Rocking star Yash‌ : ಕಾಂತಾರ ನನ್ನದೇ ಸಿನಿಮಾ : ಯಶ್ ಅಭಿಮಾನಕ್ಕೆ ಎಲ್ಲೆಡೆ ಮೆಚ್ಚುಗೆ

ಮಾತ್ರವಲ್ಲ ನಮ್ಮ ಮಕ್ಕಳ ನಾಳೆಗಳಿಗಾಗಿ ಕಾಡನ್ನು ಸಂರಕ್ಷಿಸೋಣ, ಗಂಧದಗುಡಿಯನ್ನು ತೋರಿಸೋಣ ಎಂದು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಗಂಧದಗುಡಿ ಟಿಕೇಟ್ ದರ ಇಳಿಕೆ ಅಪ್ಪು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಮಕ್ಕಳಿಗೆ ಉಚಿತವಾಗಿ ಗಂಧದಗುಡಿ ತೋರಿಸಬೇಕೆಂಬ ಒತ್ತಡವೂ ಹೆಚ್ಚಿದೆ.

Great offer for Appu fans: Gandhadagudi ticket price reduced for four days

Comments are closed.