Chennai-Mysore Vande Bharat Express: ಚೆನ್ನೈ-ಮೈಸೂರು ವಂದೇ ಭಾರತ್ ರೈಲು ಸಂಚಾರಕ್ಕೆ ಕ್ಷಣಗಣನೆ. ಇಂದಿನಿಂದ ಪ್ರಾಯೋಗಿಕ ಸಂಚಾರ

ಚೆನ್ನೈ : Chennai-Mysore Vande Bharat Express ದಕ್ಷಿಣ ಭಾರತದ ಮೊದಲ ಸೂಪರ್ ಸೆಮಿ ಸ್ಪೀಡ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಲೋಕಾಪರ್ಣೆಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಚೆನ್ನೈ ಮೈಸೂರು ವಂದೇ ಭಾರತ್ ರೈಲು ಇಂದಿನಿಂದ ರೈಲಿನ ಪ್ರಾಯೋಗಿಕ ಸಂಚಾರ ಶುರುವಾಗಿದೆ.

ಚೆನ್ನೈನ ಎಂಜಿ ರಾಮಚಂದ್ರನ್ ಸೆಂಟ್ರಲ್ ರೈಲು ನಿಲ್ದಾಣದಿಂದ ಬೆಳಗ್ಗ 6 ಗಂಟೆಗೆ ಪ್ರಾಯೋಗಿಕರ ಸಂಚಾರ ಶುರುವಾಗಿದ್ದು, ಮಧ್ಯಾಹ್ನ 12 ಗಂಟೆಗೆ ಈ ವಂದೇ ಭಾರತ್ ರೈಲು ಮೈಸೂರು ತಲುಪುವ ನಿರೀಕ್ಷೆಯಿದೆ. ನವೆಂಬರ್ 11ರಂದು‌ ಪ್ರಧಾನಿ ನರೇಂದ್ರ ಮೋದಿ ರೈಲಿಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಒಟ್ಟು 504 ಕಿಲೋಮೀಟರ್ ಗಳ ದೂರವನ್ನ ಈ ರೈಲು 6 ಗಂಟೆಯ ಅವಧಿಯಲ್ಲಿ ಕ್ರಮಿಸಲಿದೆ . ಮುಂದಿನ ವಾರದಿಂದ ಪ್ರಯಾಣಿಕರಿಗೆ ಮುಕ್ತವಾಗೋ ಈ ಮೈಸೂರು-ಬೆಂಗಳೂರು-ಚೆನ್ನೈ ನಡುವಿನ ವಂದೇ ಭಾರತ್ ರೈಲು ಈ ಭಾಗದ ಜನರಿಗೆ ಸಾಕಷ್ಟು ನಿರೀಕ್ಷೆ ಹುಟ್ಟಿದೆ.

ರೈಲಿನ ವೇಳಾ ಪಟ್ಟಿ : ದಕ್ಷಿಣ ಭಾರತದ ಮೊಟ್ಟಮೊದಲ ಅತೀ ವೇಗವಾಗಿ ಸಂಚರಿಸುವ ರೈಲಾಗಿದ್ದು, ಮೈಸೂರು-ಚೆನ್ನೈ ನಡುವೆ, ಗಂಟೆಗೆ 74 ಕಿ.ಮೀ.ಗಳ ವೇಗದಲ್ಲಿ, 497 ಕಿ.ಮೀ. ದೂರವನ್ನು ಕೇವಲ 6 ಗಂಟೆ 40 ನಿಮಿಷಗಳಲ್ಲಿ ಕ್ರಮಿಸಲಿದೆ. ‘ವಂದೇ ಭಾರತ್ ಎಕ್ಸ್ ಪ್ರೆಸ್’ ವಾರದಲ್ಲಿ ಆರು ದಿನಗಳ ಕಾಲ ಅಂದರೆ ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಸಂಚರಿಸುತ್ತದೆ. ಇದು 16 ಬೋಗಿಗಳನ್ನು ಹೊಂದಿರಲಿದ್ದು, ಸುಮಾರು 1200 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸಂಚರಿಸುವಾಗ ಬೆಂಗಳೂರು ನಗರ ಜಂಕ್ಷನ್‌ ನಲ್ಲಿ ಒಂದೇ ಒಂದು ನಿಲುಗಡೆ ಇರುತ್ತದೆ. ಈ ರೈಲು, ಚೆನ್ನೈ ಸೆಂಟ್ರಲ್‌ನಿಂದ ಬೆಳಿಗ್ಗೆ 5.50ಕ್ಕೆ ಹೊರಡುತ್ತದೆ. 359 ಕಿ.ಮೀ.ಗಳನ್ನು ಕ್ರಮಿಸಿ ಬೆಳಿಗ್ಗೆ 10:25ಕ್ಕೆ ಬೆಂಗಳೂರು ನಗರ ಜಂಕ್ಷನ್ ಗೆ ಆಗಮಿಸುತ್ತದೆ. ಇಲ್ಲಿ ಐದು ನಿಮಿಗಳ ಕಾಲ ನಿಂತು, ಬೆಳಿಗ್ಗೆ 10:30 ಗಂಟೆಗೆ ಮೈಸೂರಿಗೆ ಹೊರಡುತ್ತದೆ. ನಂತರ 137.6 ಕಿ.ಮೀ.ಗಳ ದೂರ ಕ್ರಮಿಸಿ ಮಧ್ಯಾಹ್ನ 12.30ಕ್ಕೆ ಮೈಸೂರು ಜಂಕ್ಷನ್‌ಗೆ ತಲುಪುತ್ತದೆ. ಇದೇ ರೈಲು ಮೈಸೂರಿನಿಂದ ವಾಪಸ್ ಮಧ್ಯಾಹ್ನ 1:05ಕ್ಕೆ ಹೊರಟು 2:55ಕ್ಕೆ ಬೆಂಗಳೂರು ತಲುಪುತ್ತದೆ. ಐದು ನಿಮಿಷಗಳ ನಂತರ, ಅಂದರೆ ಮಧ್ಯಾಹ್ನ 3:00 ಗಂಟೆಗೆ ಹೊರಟು, ಚೆನ್ನೈ ಸೆಂಟ್ರಲ್ ನಿಲ್ದಾಣವನ್ನು ರಾತ್ರಿ 7:35ಕ್ಕೆ ತಲುಪುತ್ತದೆ.

ಇದನ್ನೂ ಓದಿ : By Election Result  : 7 ವಿಧಾನಸಭೆಗೆ ನಡೆದ ಉಪಚುನಾವಣೆ ಫಲಿತಾಂಶ.. ನಾಲ್ಕು ಕಡೆ ಬಿಜೆಪಿ ಗೆಲುವು

ಇದನ್ನೂ ಓದಿ : Tanzania Plane Crash : ತಾಂಜಾನಿಯಾದ ವಿಕ್ಟೋರಿಯಾ ಸರೋವರದಲ್ಲಿ ವಿಮಾನ ಪತನ

Chennai-Mysore Vande Bharat Express Trial run started from Chennai MG Ramachandran Central Railway station today

Comments are closed.