ವೆಬ್ ಸಿರೀಸ್ ಆಗಿ ಬಿಡುಗಡೆಯಾಲಿದೆ ಹನ್ಸಿಕಾ ಮೊಟ್ವಾನಿ ವಿವಾಹ

ಸ್ಯಾಂಡಲ್‌ವುಡ್‌ ಪುನೀತ್ ರಾಜ್‌ಕುಮಾರ್ ನಟನೆಯ ಬಿಂದಾಸ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಹನ್ಸಿಕಾ ಮೊಟ್ವಾನಿ (Hansika Motwani Wedding) ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗೆ ಕಾಲಿವುಡ್ ಹಾಗೂ ಟಾಲಿವುಡ್ ನಟಿ ಎಂದೇ ಗುರುತಿಸಿಕೊಂಡ ಹನ್ಸಿಕಾ ಮೊಟ್ವಾನಿ ಕಳೆದ ವರ್ಷ ತನ್ನ ಗೆಳೆಯ ಸೊಹೈಲ್ ಕಥುರಿಯಾ ಎಂಬುವವರನ್ನು ವಿವಾಹವಾಗಿದ್ದಾರೆ. ತನ್ನ ಆಪ್ತ ಗೆಳತಿಯ ಮಾಜಿ ಪತಿಯನ್ನೇ ವರಿಸಿದ ಹನ್ಸಿಕಾ ಮೊಟ್ವಾನಿ ಚರ್ಚೆಗೂ ಒಳಗಾಗಿದ್ದರು.

ಇನ್ನು ವೃತ್ತಿಯಲ್ಲಿ ಉದ್ಯಮಿಯಾಗಿರುವ ಸೊಹೈಲ್ ಕಥುರಿಯಾ ಹನ್ಸಿಕಾ ಮೊಟ್ವಾನಿ ಒಡೆತನದ ಉದ್ಯಮದಲ್ಲಿ ಪಾಲುದಾರನೂ ಸಹ ಆಗಿದ್ದರು. ಹೀಗೆ ಬಹುದಿನಗಳಿಂದ ಸ್ನೇಹಿತರಾಗಿದ್ದ ಈ ಜೋಡಿ ಪ್ರೀತಿಗೆ ಬಿದ್ದಿತ್ತು. ಬಳಿಕ ವೈವಾಹಿಕ ಜೀವನಕ್ಕೂ ಸಹ ಕಾಲಿಟ್ಟಿತು. ಹೀಗೆ ವಿಭಿನ್ನ ಲವ್ ಸ್ಟೋರಿಯನ್ನು ಹೊಂದಿದ್ದ ಈ ಜೋಡಿ ಕಳೆದ ಡಿಸೆಂಬರ್‌ನಲ್ಲಿ ವಿವಾಹವಾಗಿತ್ತು. ಈ ಜೋಡಿಯ ವಿವಾಹದ ವಿಡಿಯೊವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದೂ ಸಹ ಸುದ್ದಿಯಾಗಿತ್ತು. ಆದರೆ ನಂತರದ ದಿನಗಳಲ್ಲಿ ಈ ಕುರಿತ ಹೆಚ್ಚೇನೂ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ ಈ ಕುರಿತು ದೊಡ್ಡ ಸುದ್ದಿಯೇ ಹೊರಬಿದ್ದಿದ್ದು, ಹನ್ಸಿಕಾ ಹಾಗೂ ಸೊಹೈಲ್ ವಿವಾಹವನ್ನು ವೆಬ್ ಸರಣಿಯಾಗಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಇದನ್ನೂ ಓದಿ : KGF to Kantara : ಸ್ಯಾಂಡಲ್‌ವುಡ್‌ 100 ಕೋಟಿ ಕ್ಲಬ್ ಸೇರಿ ಇತಿಹಾಸ ಸೃಷ್ಟಿದ 7 ಸಿನಿಮಾಗಳು ಯಾವುವು ಗೊತ್ತಾ ?

ಇದನ್ನೂ ಓದಿ : Kabza movie trailer : ಕಬ್ಜ ಟ್ರೈಲರ್ ಬಿಡುಗಡೆಗೆ ಡೇಟ್‌ ಫಿಕ್ಸ್‌

ಇದನ್ನೂ ಓದಿ : ದಕ್ಷಿಣ ಭಾರತ ಚಿತ್ರರಂಗವನ್ನು ಹೊಗಳಿದ ನಿರ್ದೇಶಕ ಅನುರಾಗ್ ಕಶ್ಯಪ್‌

ಇದಕ್ಕೆ ಮುಂಚಿತವಾಗಿ ಇದರ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಈ ಟೀಸರ್‌ನಲ್ಲಿ ಮದುವೆಗೂ ಮುಂಚೆ ಏನೆಲ್ಲಾ ಸನ್ನಿವೇಶಗಳು ಎದುರಾದವು, ಮದುವೆಯನ್ನು ಯಾವ ರೀತಿ ನಿಶ್ಚಯಿಸಲಾಯಿತು ಎನ್ನುವುದನ್ನು ತೋರಿಸಲಾಗಿದೆ. ಸದ್ಯ ಈ ಟೀಸರ್ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಲವರು ಇದೊಂದು ಒಳ್ಳೆಯ ಪ್ರಯತ್ನ ಎಂದಿದ್ದರೆ, ಇನ್ನೂ ಕೆಲವರು ಇದು ಸತ್ಯಕ್ಕೆ ದೂರವಾದಂತಿದೆ. ಮದುವೆಯಲ್ಲೂ ನಟನೆ ಯಾಕೆ ಎಂದಿದ್ದಾರೆ. ಇನ್ನು ಹನ್ಸಿಕಾ ಹಾಗೂ ಸೊಹೈಲ್ ಮದುವೆಯ ವೆಬ್ ಸರಣಿಗೆ ‘ಹನ್ಸಿಕಾಸ್ ಲವ್ ಶಾದಿ ಡ್ರಾಮಾ’ ಎಂದು ಶೀರ್ಷಿಕೆಯನ್ನು ಇಡಲಾಗಿದ್ದು, ಫೆಬ್ರವರಿ 10ರಿಂದ ಹಾಟ್‌ಸ್ಟಾರ್‌ನಲ್ಲಿ ಇದು ಸ್ಟ್ರೀಮ್ ಆಗಲಿದೆ.

Hansika Motwani Wedding will be released as a web series

Comments are closed.