ದೈವಕ್ಕೆ ಅಪಮಾನಗೈದ ರಣವೀರ್​ ಸಿಂಗ್​​ಗೆ ಹೈಕೋರ್ಟ್ ತರಾಟೆ : ಸೂಪರ್​ಸ್ಟಾರ್​​ ವರ್ತನೆ ಹೇಗಿರಬೇಕೆಂದು ಪಾಠ

ದೈವಕ್ಕೆ ಅಪಮಾನ ಮಾಡುವ ಮೂಲಕ ಕರಾವಳಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟ ರಣವೀರ್​ ಸಿಂಗ್​ಗೆ ರಾಜ್ಯ ಹೈಕೋರ್ಟ್ ತಾತ್ಕಾಲಿಕ ರಿಲೀಫ್​ ನೀಡಿದೆ. ಅರ್ಜಿ ವಿಚಾರಣೆ ನಡೆಸಿದ ಉಚ್ಛ […]

Ranveer Singh

ದೈವಕ್ಕೆ ಅಪಮಾನ ಮಾಡುವ ಮೂಲಕ ಕರಾವಳಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟ ರಣವೀರ್​ ಸಿಂಗ್​ಗೆ ರಾಜ್ಯ ಹೈಕೋರ್ಟ್ ತಾತ್ಕಾಲಿಕ ರಿಲೀಫ್​ ನೀಡಿದೆ. ಅರ್ಜಿ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯ, ನಟನ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದೆ.
ತನ್ನ ವಿರುದ್ಧ ದಾಖಲಾಗಿರುವ ಎಫ್​ಐಆರ್​ ರದ್ದತಿಗೆ ನಟ ರಣವೀರ್​ ಸಿಂಗ್​ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಸೂಪರ್​ಸ್ಟಾರ್​ ಎಂದ ಮಾತ್ರಕ್ಕೆ ನೀವು ಮನಬಂದಂತೆ ವರ್ತಿಸಬಹುದೇ? ಎಂದು ಪ್ರಶ್ನಿಸಿದೆ. ರಣವೀರ್​ ಸಿಂಗ್​ ಆಗಿರಲಿ, ಅಥವಾ ಇನ್ಯಾರೇ ಆಗಿರಲಿ ಯಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಧಿಕಾರ ನಿಮಗಿಲ್ಲ. ನಿಮ್ಮನ್ನು ಸಾಕಷ್ಟು ಜನ ಫಾಲೋ ಮಾಡುವವರು ಇದ್ದಾರೆ. ಇದನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಹೇಳಿದೆ.

ಇದನ್ನೂ ಓದಿ: ರಶ್ಮಿಕಾ-ವಿಜಯ್ ದೇವರಕೊಂಡಗೆ ಪ್ರಧಾನಿಯಿಂದ ವಿಶ್, ಹೊಸ ಅಧ್ಯಾಯಕ್ಕೆ ಪ್ರೀತಿಯಿಂದ ಶುಭಾಶಯ ತಿಳಿಸಿದ ಮೋದಿ!

ಗೋವಾದಲ್ಲಿ ಸಿನಿಮಾ ಫೆಸ್ಟಿವಲ್​ ಸಂದರ್ಭದಲ್ಲಿ ನಟ ರಿಷಭ್​ ಶೆಟ್ಟಿ ನಟನೆಯನ್ನು ಹೊಗಳುವ ಭರದಲ್ಲಿ ನಟ ರಣವೀರ್​ ಸಿಂಗ್​ ದೈವಗಳನ್ನು ಅಪಹಾಸ್ಯ ಮಾಡಿದ್ದರು. ಹೆಣ್ಣು ದೈವವನ್ನು ದೆವ್ವ ಎಂದು ಕರೆದಿದ್ದ ರಣವೀರ್​ ವಿರುದ್ಧ ಹೈಗ್ರೌಂಡ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

About The Author

Scroll to Top