ಎರಡೇ ತಿಂಗಳಿಗೆ ಚಿತ್ರೀಕರಣ ಮುಗಿಸಿದ “ಧೂಮಂ”‌ ಸಿನಿತಂಡ : ಹೊಂಬಾಳೆಯ ಮತ್ತೊಂದು ಸಿನಿಮಾ ರೆಡಿ

ಕೆಜಿಎಫ್‌ ಸರಣಿ ಸಿನಿಮಾ ಹಾಗೂ ಕಾಂತಾರ ಸೇರಿದಂತೆ ಇನ್ನಿತರ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ ಕೀರ್ತಿ ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆಗೆ ಸಲ್ಲುತ್ತದೆ. ಅಷ್ಟೇ ಅಲ್ಲದೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈಗ ದೇಶದ ನಂ.1 ಚಿತ್ರ ನಿರ್ಮಾಣ ಸಂಸ್ಥೆ ಆಗಿದೆ. ಇದೀಗ ಅವರು ಕನ್ನಡ ಮಾತ್ರವಲ್ಲದೆ ತೆಲುಗು, ಮಲಯಾಳಂ ಹಾಗೂ ತಮಿಳು ಸಿನಿರಂಗಗಳಲ್ಲಿ ಮೂರು ಸಾವಿರ ಕೋಟಿ ಬಂಡವಾಳ ಹೂಡಿ ಎಲ್ಲರ ಹುಬ್ಬೇರಿಸಿದ್ದಾರೆ. ಸದ್ಯ ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಡಿಯಲ್ಲಿ ಮತ್ತೊಂದು ಸಿನಿಮಾ ರಿಲೀಸ್‌ಗೆ (Dhoomam Movie) ರೆಡಿ ಆಗಿದೆ.

ವಿವಿಧ ಇಂಡಸ್ಟ್ರಿಗೆ ಕಾಲಿಟ್ಟ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಕನ್ನಡ ಹಾಗೂ ಮಲಯಾಳಂ ದ್ವಿಭಾಷಾ ಸಿನಿಮಾವೊಂದನ್ನು ನಿರ್ಮಿಸುತ್ತಿದೆ. ಹೌದು, ಕನ್ನಡದ ನಿರ್ದೇಶಕನಾದ ಲೂಸಿಯಾ, ಯು ಟರ್ನ್ ಖ್ಯಾತಿಯ ಪವನ್ ಕುಮಾರ್ ನಿರ್ದೇಶನದ ಧೂಮಂ ಸಿನಿಮಾಕ್ಕೆ ಹೊಂಬಾಳೆ ಫಿಲ್ಮ್ಸ್‌ ಬಂಡವಾಳ‌ ಹೂಡಿದೆ‌.ಕಳೆದ ಸೆಪ್ಟೆಂಬರ್ 30ರಂದು‌ ಘೋಷಣೆಯಾಗಿದ್ದ ಈ ಸಿನಿಮಾದ ಮುಹೂರ್ತ ಅಕ್ಟೋಬರ್ 9 ರಂದು ನಡೆದಿತ್ತು‌. ಹೀಗೆ ಅಂದು ಆರಂಭಗೊಂಡಿದ್ದ ಸಿನಿಮಾದ ಚಿತ್ರೀಕರಣ ನಿನ್ನೆ ( ಜನವರಿ 13 ) ಮುಕ್ತಾಯಗೊಂಡಿದೆ.

ಇದನ್ನೂ ಓದಿ : ವಂಚನೆ ಪ್ರಕರಣ : ಮಠ ನಿರ್ದೇಶಕ ಗುರುಪ್ರಸಾದ್‌ ಬಂಧನ

ಇದನ್ನೂ ಓದಿ : ಬಾಲಿವುಡ್‌ಗೆ ಲಗ್ಗೆ ಇಟ್ಟ ಕಾಂತಾರ ಲೀಲಾ ಖ್ಯಾತಿಯ ನಟಿ ಸಪ್ತಮಿ ಗೌಡ

ಇದನ್ನೂ ಓದಿ : ನಟ ಡಾ. ವಿಷ್ಣುವರ್ಧನ್‌ ಸ್ಮಾರಕ ಲೋಕಾರ್ಪಣೆಗೆ ಕೊನೆಗೂ ಕೂಡಿ ಬಂತು ಕಾಲ

ಇದನ್ನೂ ಓದಿ : ಜೂ. ಎನ್‌ಟಿಆರ್‌ ಜೊತೆ ನಟಿಸುವುದನ್ನು ದುನಿಯಾ ವಿಜಯ್‌ ಮಿಸ್‌ ಮಾಡಿಕೊಂಡಿದ್ದೇಕೆ ?

ಈ ಕುರಿತಾಗಿ ಹೊಂಬಾಳೆ ಫಿಲ್ಮ್ಸ್ ಫೋಟೊವೊಂದನ್ನು ಹಂಚಿಕೊಂಡಿದ್ದು “ಧೂಮಂ” ಚಿತ್ರೀಕರಣ ಮುಕ್ತಾಯಗೊಂಡಿದೆ ಎಂದು ಬರೆದುಕೊಂಡಿದೆ‌. ಇನ್ನು ಈ ಸಿನಿಮಾದಲ್ಲಿ ನಾಯಕನಾಗಿ ಫಾಹದ್ ಫಾಸಿಲ್ ಅಭಿನಯಿಸಿದ್ದರೆ, ನಾಯಕಿಯಾಗಿ ಅಪರ್ಣ ಬಾಲಮುರಳಿ ನಟಿಸಿದ್ದಾರೆ. ಹೀಗೆ ಎರಡು ತಿಂಗಳುಗಳಲ್ಲೇ ಚಿತ್ರೀಕರಣವನ್ನು ವೇಗವಾಗಿ ಮುಗಿಸಿರುವ ಸಿನಿತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಆದಷ್ಟು ಬೇಗ ಮುಗಿಸಲಿದ್ದು, ಆದಷ್ಟು ಬೇಗ ಸಿನಿಮಂದಿರದ ಅಂಗಳಕ್ಕೆ ಬರುವುದು ಖಚಿತ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ನಟ ದಳಪತಿ ವಿಜಯ್‌ ಅಭಿನಯದ “ವಾರಿಸು”ಗೆ ಮೊದಲ ದಿನವೇ ಭರ್ಜರಿ ಕಲೆಕ್ಷನ್

ಇದನ್ನೂ ಓದಿ : ಆದಿಲ್‌ ದುರಾನಿ ಜೊತೆ ಎರಡನೇ ಮದುವೆ ಆದ ರಾಖಿ ಸಾವಂತ್‌ ಮದುವೆ : ವೈರಲ್‌ ಆಯ್ತು ನಟಿಯ ಮದುವೆ ಪೋಟೋ

Hombale Films Company : “Dhoomam” film team completed shooting in two months: Another movie of Hombale is ready

Comments are closed.