Rishabh Pant health update : ರಿಷಭ್ ಪಂತ್ ಆಪರೇಷನ್ ಸಕ್ಸಸ್, ಕ್ರಿಕೆಟ್ ಮೈದಾನಕ್ಕೆ ಮರಳುವ ಬಗ್ಗೆ ಡಾಕ್ಟರ್ ಹೇಳಿದ್ದೇನು?

ಮುಂಬೈ : ಟೀಮ್ ಇಂಡಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ (Rishabh Pant health update) ಅವರ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಮುಂಬೈನ ಕೊಕಿಲಾ ಬೆನ್ ಧೀರೂಬಾಯ್ ಅಂಬಾನಿ ಆಸ್ಪತ್ರೆಯಲ್ಲಿ ರಿಷಭ್ ಪಂತ್ ಚಿಕಿತ್ಸೆ ಪಡೆಯುತ್ತಿದ್ದು, ಶಸ್ತ್ರಚಿಕಿತ್ಸೆಯ ನಂತರ ಇದೇ ಮೊದಲ ಬಾರಿ ಪಂತ್ ತಮ್ಮ ಬಲಗಾಲನ್ನು ನೆಲಕ್ಕೆ ಊರಿದ್ದಾರೆ.

ರಿಷಭ್ ಪಂತ್’ಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಹೇಳುವ ಪ್ರಕಾರ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಕ್ರಿಕೆಟ್ ಮೈದಾನಕ್ಕೆ ಮರಳಲು ಇನ್ನೂ ನಾಲ್ಕರಿಂದ ಐದು ತಿಂಗಳು ಹಿಡಿಯಲಿದೆ. ಹೀಗಾಗಿ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಹಾಗೂ ಐಪಿಎಲ್’ನಿಂದ ರಿಷಬ್ ಪಂತ್ ಹೊರಗುಳಿಯಲಿದ್ದಾರೆ. ಆದರೆ ಆಕ್ಟೋಬರ್-ನವೆಂಬರ್ ತಿಂಗಳಲ್ಲಿ ಭಾರತದಲ್ಲೇ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಹೊತ್ತಿಗೆ ರಿಷಭ್ ಪಂತ್ ಚೇತರಿಸಿಕೊಳ್ಳಲಿದ್ದಾರೆಯೇ ಎಂಬುದು ಸದ್ಯದ ಕುತೂಹಲ.
ಒಂದು ವಾರದ ಕಾಲ ರಿಷಭ್ ಪಂತ್ ಆಸ್ಪತ್ರೆಯಲ್ಲೇ ಇರಲಿದ್ದಾರೆ.

25 ವರ್ಷದ ರಿಷಭ್ ಪಂತ್ ಡಿಸೆಂಬರ್ 30ರಂದು ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೊರ್ಕಿ ಎಂಬಲ್ಲಿ ಅಪಘಾತಕ್ಕೀಡಾಗಿದ್ದರು (Rishabh Pant car accident). ಡಿಸೆಂಬರ್ 30ರ ಬೆಳಗ್ಗೆ 5.30ಕ್ಕೆ ಈ ಅಪಘಾತ ಸಂಭವಿಸಿತ್ತು. ಬೆಳ್ಳಂ ಬೆಳಗ್ಗೆ ರೊರ್ಕಿಯಿಂದ ಉತ್ತರಾಖಂಡ್’ನಲ್ಲಿರುವ ತನ್ನ ಗೆಳತಿಯನ್ನ ನೋಡಲು ಹೊರಟಿದ್ದ ರಿಷಬ್ ಪಂತ್ ಸ್ವತಃ ತಾವೇ ತಮ್ಮ ಮರ್ಸಿಡಿಸ್ ಬೆಂಜ್ ಕಾರು ಚಲಾಯಿಸುತ್ತಿದ್ದರು.

ಇದನ್ನೂ ಓದಿ : KL Rahul marriage : “ಬ್ಯಾಚುಲರ್” ರಾಹುಲ್‌ಗೆ ಮದುವೆಗೂ ಮುನ್ನ ನಾಳೆ ಕೊನೆಯ ಕ್ರಿಕೆಟ್ ಮ್ಯಾಚ್

ಇದನ್ನೂ ಓದಿ : Team India : ಕಿವೀಸ್, ಆಸೀಸ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ, ಯಾರಿಗೆಲ್ಲಾ ಸ್ಥಾನ?

ಇದನ್ನೂ ಓದಿ : Rahul Dravid health problem : ರಾಹುಲ್ ದ್ರಾವಿಡ್’ಗೆ BP ಪ್ರಾಬ್ಲಮ್, ಟೀಮ್ ಇಂಡಿಯಾ ಕ್ಯಾಂಪ್ ತೊರೆದು ಬೆಂಗಳೂರಿಗೆ ಬಂದ ಕೋಚ್

ಪಂತ್ ನಿದ್ದೆಯ ಮಂಪರಿನಲ್ಲಿದ್ದ ಕಾರಣ ರೊರ್ಕಿ ಬಳಿ ಕಾರು ರಸ್ತೆ ಡಿವೈಡರ್’ಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿಪಂತ್ ಅವರ ಮುಖ, ಬೆನ್ನು, ಮೊಣಕಾಲು ಮತ್ತು ಪಾದಕ್ಕೆ ಗಂಭೀರ ಗಾಯವಾಗಿತ್ತು.ಅಪಘಾತದ ರಭಸಕ್ಕೆ ರಿಷಬ್ ಪಂತ್ ಅವರ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಸ್ಥಳಕ್ಕೆ ಧಾವಿಸಿದ್ದ ಹರ್ಯಾಣ ಮೂಲಕ ಟ್ರಕ್ ಡ್ರೈವರ್ ಒಬ್ಬರು ಪಂತ್ ಅವರನ್ನು ಉರಿಯುತ್ತಿದ್ದ ಕಾರಿನಿಂದ ಹೊರಗೆಳೆದು ಪ್ರಾಣ ಕಾಪಾಡಿ ಆಸ್ಪತ್ರೆಗೆ ದಾಖಲಿಸಿದ್ದರು.

Rishabh Pant health update : What did the doctor say about Rishabh Pant’s operation success, returning to the cricket field?

Comments are closed.