KL Rahul marriage : “ಬ್ಯಾಚುಲರ್” ರಾಹುಲ್‌ಗೆ ಮದುವೆಗೂ ಮುನ್ನ ನಾಳೆ ಕೊನೆಯ ಕ್ರಿಕೆಟ್ ಮ್ಯಾಚ್

ತಿರುವನಂತಪುರಂ: ಕನ್ನಡಿಗ ಕೆ.ಎಲ್ ರಾಹುಲ್ (KL Rahul marriage) ಅವರ ಮದುವೆ ಇದೇ ತಿಂಗಳ 22 ಮತ್ತು 23ರಂದು ಮುಂಬೈನ ಖಂಡಾಲದಲ್ಲಿ ನಡೆಯಲಿದೆ. ಮದುವೆಗೂ ಮುನ್ನ “ಬ್ಯಾಚುಲರ್” ರಾಹುಲ್ ಭಾನುವಾರ ತಮ್ಮ ಕಟ್ಟ ಕಡೆಯ ಕ್ರಿಕೆಟ್ ಪಂದ್ಯವಾಡಲಿದ್ದಾರೆ. ಭಾನುವಾರ ಕೇರಳದ ತಿರುವನಂತಪುರಂನಲ್ಲಿರುವ ಗ್ರೀನ್ ಫೀಲ್ಡ್ ಸ್ಟೇಡಿಯಂನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ 3ನೇ ಏಕದಿನ ಪಂದ್ಯ ನಡೆಯಲಿದೆ. ಇದು ಬ್ಯಾಚುಲರ್ ಆಗಿ ರಾಹುಲ್ ಅವರಿಗೆ ಕೊನೆಯ ಪಂದ್ಯ.

ಮದುವೆಯ ಕಾರಣ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ರಾಹುಲ್ ಹೊರಗುಳಿದಿದ್ದಾರೆ. ಕಿವೀಸ್ ವಿರುದ್ಧದ ಏಕದಿನ ಸರಣಿ ಜನವರಿ 18ರಂದು ಆರಂಭವಾಗಲಿದೆ. ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯವನ್ನು ಮುಗಿಸಿಕೊಂಡು ಸೋಮವಾರ ಮುಂಬೈಗೆ ಪ್ರಯಾಣಿಸಲಿರುವ ರಾಹುಲ್ ಮದುವೆ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟ ಸುನಿಲ್ ಶೆಟ್ಟಿಯವರ ಪುತ್ರಿ ಆತಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ರಾಹುಲ್ ಅವರ ಮದುವೆ (KL Rahul – Athiya Shetty marriage) ಮುಂದಿನ ವಾರ ನಡೆಯಲಿದೆ. ಮದುವೆಯ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ.

30 ವರ್ಷದ ಕೆ.ಎಲ್ ರಾಹುಲ್ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅಜೇಯ 64 ರನ್ ಗಳಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು. 216 ರನ್’ಗಳ ಟಾರ್ಗೆಟ್ ಬೆನ್ನಟ್ಟಿದ್ದ ಭಾರತ ಒಂದು ಹಂತದಲ್ಲಿ 86 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಪೆವಿಲಿಯನ್ ಸೇರಿಕೊಂಡಿದ್ದರು.

ಇದನ್ನೂ ಓದಿ : Team India : ಕಿವೀಸ್, ಆಸೀಸ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ, ಯಾರಿಗೆಲ್ಲಾ ಸ್ಥಾನ?

ಇದನ್ನೂ ಓದಿ : Rahul Dravid health problem : ರಾಹುಲ್ ದ್ರಾವಿಡ್’ಗೆ BP ಪ್ರಾಬ್ಲಮ್, ಟೀಮ್ ಇಂಡಿಯಾ ಕ್ಯಾಂಪ್ ತೊರೆದು ಬೆಂಗಳೂರಿಗೆ ಬಂದ ಕೋಚ್

ಇದನ್ನೂ ಓದಿ : Veda Krishnamurthy marriage : ತಾಯಿಯ ಜನ್ಮದಿನದಂದೇ ಪ್ರೀತಿಸಿದ ಹುಡುಗನ ರಿಜಿಸ್ಟರ್ ಮದುವೆಯಾದ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

ಭಾರತ 62 ರನ್ನಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ 5ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದಿದ್ದ ರಾಹುಲ್ ಕೊನೆಯವರೆಗೂ ಅಜೇಯವಾಗಿ ನಿಂತು 103 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ ಅಜೇಯ 64 ರನ್ ಗಳಿಸಿ ಭಾರತವನ್ನು ಗೆಲುವಿನ ದಡ ಸೇರಿಸಿದ್ದರು. ರಾಹುಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ 43.2 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿ 4 ವಿಕೆಟ್’ಗಳ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ಕೈವಶ ಮಾಡಿಕೊಂಡಿತ್ತು.

KL Rahul marriage : Tomorrow is the last cricket match for “Bachelor” Rahul before his marriage

Comments are closed.