Sonia Gandhi : ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಾಯಿ ವಿಧಿವಶ

ದೆಹಲಿ : Sonia Gandhi :ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮಾತೃ ವಿಯೋಗವಾಗಿದೆ. ಸೋನಿಯಾ ಗಾಂಧಿ ತಾಯಿ ಪಾವೋಲಾ ಮೈನಾ ಶನಿವಾರದಂದು ಇಟಲಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದು ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ನಡೆಸಲಾಗಿದೆ ಎಂದು ಕಾಂಗ್ರೆಸ್​ ಅಧಿಕೃತ ಮಾಹಿತಿ ನೀಡಿದೆ. ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಗಸ್ಟ್​ 23ರಂದು 90 ವರ್ಷ ಪ್ರಾಯದ ತಮ್ಮ ತಾಯಿಯನ್ನು ಭೇಟಿಯಾಗಲು ಇಟಲಿಗೆ ತೆರಳಿದ್ದರು.


ಸೋನಿಯಾ ಗಾಂಧಿ ತಾಯಿ, ಪಾವೋಲಾ ಮೈನೋ 2022ರ ಆಗಸ್ಟ್​ 27ರಂದು ಶನಿವಾರ ಇಟಲಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ನಿನ್ನೆ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್​ ರಮೇಶ್​ ಬುಧವಾರದಂದು ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ. ಸೋನಿಯಾ ಗಾಂಧಿ ಪುತ್ರ ರಾಹುಲ್​ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಈಗಾಗಲೇ ವಿದೇಶದಲ್ಲಿದ್ದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ತಾಯಿ ಪಾವೊಲಾ ಮೈನೋ ನಿಧನಕ್ಕೆ ಕಾಂಗ್ರೆಸ್​ ಪರಿವಾರವು ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತಿದೆ. ನಾವು ಅಗಲಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದೇವೆ. ಅಲ್ಲದೇ ಈ ದುಃಖದ ಸಂದರ್ಭದಲ್ಲಿ ನಾವು ಗಾಂಧಿ ಕುಟುಂಬದ ಜೊತೆ ನಿಲ್ಲುತ್ತೇವೆ ಎಂದು ಕಾಂಗ್ರೆಸ್​ ತನ್ನ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಲ್ಲಿ ಮಾಹಿತಿ ನೀಡಿದೆ.


ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಇತರ ಕಾಂಗ್ರೆಸ್ ನಾಯಕರು ಸಂತಾಪ ಸೂಚಿಸಿದ್ದಾರೆ.


“ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ತಾಯಿ ಶ್ರೀಮತಿ ಪಾವೊಲಾ ಮೈನೋ ಜಿ ಅವರ ನಿಧನದ ಬಗ್ಗೆ ತಿಳಿದು ತುಂಬಾ ದುಃಖವಾಗಿದೆ. ಸೋನಿಯಾ ಜಿ, ರಾಹುಲ್ ಜಿ, ಪ್ರಿಯಾಂಕಾ ಜಿ ಮತ್ತು ಎಲ್ಲಾ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು. ದೇವರು ಅವರಿಗೆ ಈ ನಷ್ಟವನ್ನು ಭರಿಸುವ ಶಕ್ತಿಯನ್ನು ನೀಡಲಿ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಗೆಹ್ಲೋಟ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.


ಕಾಂಗ್ರೆಸ್​ನ ಮಾಧ್ಯಮ ಉಸ್ತುವಾರಿ ಪವನ್​ ಖೇರಾ ಕೂಡ ಟ್ವೀಟ್​ ಮಾಡಿದ್ದು, ಸೋನಿಯಾ ಗಾಂಧಿ ತಾಯಿ ನಿಧನಕ್ಕೆ ನನ್ನ ಸಂತಾಪಗಳು. ದೇವರು ನಿಮಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಬರೆದಿದ್ದಾರೆ. ಕಾಂಗ್ರೆಸ್​ ಸಂಸದ ಮನೀಶ್​ ತಿವಾರಿ, ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ತಾಯಿ ಪಾವೊಲಾ ಮೈನೋ ನಿಧನಕ್ಕೆ ನನ್ನ ಸಂತಾಪಗಳು. ಕಾಂಗ್ರೆಸ್​ ಅಧ್ಯಕ್ಷೆಯ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟಾಯಿಸಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಕೂಡ ಸೋನಿಯಾ ಗಾಂಧಿ ತಾಯಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ, ಸೋನಿಯಾ ಗಾಂಧಿ ತಾಯಿ ಪಾವೊಲಾ ಮೈನೋ ನಿಧನಕ್ಕೆ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ . ಈ ದುಃಖದ ಸಮಯದಲ್ಲಿ ಇಡೀ ಕುಟುಂಬದ ಜೊತೆ ನಾವಿದ್ದೇವೆ ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನು ಓದಿ : Zomato : ಹೈದರಾಬಾದ್​ನಿಂದ ಬಿರಿಯಾನಿ, ಮೈಸೂರಿನಿಂದ ಮೈಸೂರುಪಾಕ್​ ತಿನ್ನಬೇಕೆಂದು ಆಸೆಯಾಗ್ತಿದ್ಯಾ :ಜೊಮ್ಯಾಟೋದಲ್ಲಿದೆ ಪರಿಹಾರ

ಇದನ್ನೂ ಓದಿ : Kichcha Sudeeps Special Postal Envelope :ಕಿಚ್ಚ ಸುದೀಪ್ ಹೆಸರಿನಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಹೊರತರುತ್ತಿದೆ ಭಾರತೀಯ ಅಂಚೆ ಇಲಾಖೆ

Congress chief Sonia Gandhi’s mother Paola Maino passes away in Italy

Comments are closed.