Jacqueline gets bail : ಬಹುಕೋಟಿ ವಂಚನೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಗೆ ರಿಲೀಫ್: ಷರತ್ತುಬದ್ಧ ಜಾಮೀನು ಮಂಜೂರು

ನವದೆಹಲಿ: Jacqueline gets bail: 200 ಕೋಟಿ ರೂ. ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ವಿಚಾರಣೆ ಎದುರಿಸುತ್ತಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ದೆಹಲಿ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಹೀಗಾಗಿ ಪ್ರಕರಣದಲ್ಲಿ ರಕ್ಕಮ್ಮಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.

ಇದನ್ನೂ ಓದಿ: Aamir Khan: ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡ ಅಮೀರ್ ಖಾನ್; ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋಲೇ ಈ ನಿರ್ಧಾರಕ್ಕೆ ಕಾರಣವಾಯ್ತಾ..?

ಪ್ರಕರಣದ ತನಿಖೆ ನಡೆಸಿರುವ ಇಡಿ ಅಧಿಕಾರಿಗಳು ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಿದ್ದು, ತನಿಖೆಯೂ ಮುಕ್ತಾಯಗೊಂಡಿದೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ನಟಿ ಜಾಕ್ವೆಲಿನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅವರ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಕಳೆದ ಸೆಪ್ಟಂಬರ್ 26ರಂದು ದೆಹಲಿ ನ್ಯಾಯಾಲಯವು ಜಾಕ್ವೆಲಿನ್ ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಬಳಿಕ ಅದನ್ನು ನವೆಂಬರ್ 15ರವರೆಗೆ ವಿಸ್ತರಣೆ ಮಾಡಿತ್ತು. ಇಂದು ಮತ್ತೆ ವಿಚಾರಣೆ ನಡೆಸಿದ ದೆಹಲಿ ಪಟಿಯಾಲ ಕೋರ್ಟ್, 2 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ನೀಡುವಂತೆ ಆದೇಶಿಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಹಿನ್ನೆಲೆ: ರಾನ್‍ಬಾಕ್ಸಿ ಸಂಸ್ಥೆಯ ಶಿವಿಂದರ್ ಸಿಂಗ್ ಅವರು ಬೇರೊಂದು ಹಣ ಅವ್ಯವಹಾರ ಪ್ರಕರಣದಲ್ಲಿ ಕಳೆದ 2019ರಲ್ಲಿ ಜೈಲು ಸೇರಿದ್ದರು. ಅವರನ್ನು ಜೈಲಿನಿಂದ ಕರೆತರುವ ಭರವಸೆ ನೀಡಿದ್ದ ಸುಕೇಶ್ ಚಂದ್ರಶೇಖರ್, ಶಿವಿಂದರ್ ಪತ್ನಿ ಅವರಿಂದ 200 ಕೋಟಿ ರೂ. ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಶಿವಿಂದರ್ ಸಿಂಗ್ ಪತ್ನಿ ಅದಿತಿ ಸಿಂಗ್ ಸುಕೇಶ್ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸುತ್ತಿದ್ದ ವೇಳೆ ಸುಕೇಶ್ ಚಂದ್ರಶೇಖರ್ ಜೊತೆ ನಟಿ ಜಾಕ್ವೆಲಿನ್ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ತಿಳಿದುಬಂದಿತ್ತು. ಕಳೆದ ಡಿಸೆಂಬರ್ ನಲ್ಲಿ ಪಿಎಂಎಲ್‍ಎ ಕಾಯ್ದೆಯಡಿ ಜಾರಿ ನಿರ್ದೇಶನಾಲಯವು ಆರೋಪಪಟ್ಟಿ ದಾಖಲಿಸಿತ್ತು. ನಟಿ ಜಾಕ್ವೆಲಿನ್ ಸೇರಿದಂತೆ ಕೆಲ ಬಾಲಿವುಡ್ ನಟ-ನಟಿಯರನ್ನು ಪ್ರಕರಣದ ಸಾಕ್ಷಿದಾರರೆಂದು ತೋರಿಸಿತ್ತು. ಅದಾದ ಬಳಿಕ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಫರ್ನಾಂಡಿಸ್ ನಿಕಟವಾಗಿರುವ ಫೋಟೋಗಳು ವೈರಲ್ ಆಗಿದ್ದವು.

ಇದನ್ನೂ ಓದಿ: ಐಪಿಎಲ್ ಗೆ ನಿವೃತ್ತಿ ಘೋಷಿಸಿದ ಕೀರನ್ ಪೊಲಾರ್ಡ್ : ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕ

ಜಾಕ್ವೆಲಿನ್‍ಗೆ ಐಷಾರಾಮಿ ಬಿಎಂಡಬ್ಲೂ ಕಾರನ್ನು ಉಡುಗೊರೆಯಾಗಿ ಸುಕೇಶ್ ಚಂದ್ರಶೇಖರ್ ನೀಡಿದ್ದ ಎಂದು ತಿಳಿದುಬಂದಿತ್ತು. ಅಲ್ಲದೇ ವಜ್ರದ ಬ್ರಾಸ್‍ಲೆಟ್, ಫ್ರಾಂಕ್ ಮುಲ್ಲರ್ ವಾಚ್, ದುಬಾರಿ ಬೆಲೆಬಾಳುವ ಗುಸ್ಸಿ, ಚಾನಲ್‍ಬ್ಯಾಗ್ ಸೇರಿದಂತೆ ಕುದುರೆಯೊಂದನ್ನೂ ನೀಡಿದ್ದ. ಅಲ್ಲದೇ ಜಾಕ್ವೆಲಿನ್ ಮ್ಯಾನೇಜರ್ ಅವರಿಗೂ ಸುಕೇಶ್ ಬೈಕ್ ಉಡುಗೊರೆ ಯನ್ನಾಗಿ ನೀಡಿದ್ದ ಎಂಬ ಮಾಹಿತಿ ಲಭಿಸಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ನಟಿಯ ವಿಚಾರಣೆ ನಡೆಸುತ್ತಿದ್ದಾರೆ. ಶ್ರೀಲಂಕಾ ಮೂಲದ ನಟಿ ಜಾಕ್ವೆಲಿನ್ ಫರ್ನಾಂಡಿಸ್ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಿಚ್ಚನಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

Jacqueline gets bail: bollywood Actress Jacqueline Fernandez Gets Bail In 200 Crores Money Laundering Case

Comments are closed.