Muruli Krishna passed away: ಸ್ಯಾಂಡಲ್‌ ವುಡ್‌ ನ ಖ್ಯಾತ ನಿರ್ದೇಶಕ-ನಿರ್ಮಾಪಕ ಮುರುಳಿ ಕೃಷ್ಣ ನಿಧನ

(Muruli Krishna passed away) ಖ್ಯಾತ ಸ್ಯಾಂಡಲ್ ವುಡ್‌ ನ ನಿರ್ಮಾಪಕ ಹಾಗೂ ನಿರ್ದೇಶಕ ಮುರುಳಿ ಕೃಷ್ಣ ಅವರು ಹೃದಯಾಘಾತದಿಂದ ನಿಧನರಾದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮುರಳಿ ಅವರು ಸೋಮಾವಾರ ರಾತ್ರಿ ನಿಧನರಾದರು ಎಂದು ವರದಿಯಾಗಿದೆ.

ಮುರುಳಿ ಕೃಷ್ಣ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮುರುಳಿ ಕೃಷ್ಣ ಅವರು ಬ್ರೈನ್ ಟ್ಯೂಮರ್​​ನಿಂದ ಬಳಲುತ್ತಿದ್ದು, ಬಹಳ ತಡವಾಗಿ ಬೆಳಕಿಗೆ ಬಂದಿತ್ತು. ಸಿಟಿ ಸ್ಕ್ಯಾನ್ ಮಾಡಿದ ಬಳಿದ ಅವರಿಗೆ ಬ್ರೈನ್ ಟ್ಯೂಮರ್‌ ಇರುವುದು ಪತ್ತೆಯಾಗಿದ್ದು, ಅವರನ್ನು ತಕ್ಷಣವೇ ಲಾಲ್ ಬಾಗ್ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ನೀಡಲಾಗಿತ್ತು. ಟ್ಯೂಮರ್‌ ಶಸ್ತ್ರ ಚಿಕಿತ್ಸೆ ಫಲಕಾರಿಯಾದರೂ ಕೂಡ ನಿನ್ನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಸಹಕಾರ ನಗರದ ತಮ್ಮ ನಿವಾಸದಲ್ಲಿ ಅವರ ಅಂತಿಮ ದರ್ಶನ ಪಡೆದ ಬಳಿಕ ಹೆಬ್ಬಾಳ ಚಿತಾಗಾರದಲ್ಲಿ ಇಂದು ಮಧ್ಯಾಹ್ನ ಅಂತ್ಯಕ್ರೀಯೆ ನಡೆಯಿತು.

Muruli Krishna passed away: ಬಾಲಿವುಡ್‌ ನ ಖ್ಯಾತ ಕಾಮೆಡಿಯನ್‌ ಅನ್ನುಕನ್ನಡಕ್ಕೆ ಕರೆತಂದ ಹಿರಿಮೆ

ಸತ್ಯ, ಗರ ಚಿತ್ರಗಳನ್ನು ನಿರ್ದೇಶನ ಮಾಡಿದ ಇವರು ಗರ ಸಿನಿಮಾಕ್ಕಾಗಿ ಬಾಲಿವುಡ್‌ ನ ಜಾನಿ ಲಿವರ್‌ ನನ್ನು ಕನ್ನಡಕ್ಕೆ ಕರೆತಂದಿದ್ದರು. ಸಾದು ಕೋಕಿಲ ಹಾಗೂ ಜಾನಿ ಲಿವರ್‌ ಅವರ ಕಾಂಬಿನೇಷನ್‌ ಅಲ್ಲಿ ಚಿತ್ರವನ್ನು ನಿರ್ದೇಶಿಸಿ ಜನಮೆಚ್ಚುಗೆಯನ್ನು ಪಡೆದಿದ್ದರು.

ಇದನ್ನೂ ಓದಿ : Aamir Khan: ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡ ಅಮೀರ್ ಖಾನ್; ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋಲೇ ಈ ನಿರ್ಧಾರಕ್ಕೆ ಕಾರಣವಾಯ್ತಾ..?

ಇದನ್ನೂ ಓದಿ : Makkala Chitrotsava : ಅಪ್ಪು ನೆನಪಲ್ಲಿ ‘ಮಕ್ಕಳ ಚಿತ್ರೋತ್ಸವ’ ಲೋಗೋ ಲಾಂಚ್ – ಉಲ್ಲಾಸ್ ಸ್ಕೂಲ್ ಸಿನಿಮಾಸ್ ವತಿಯಿಂದ ಮಕ್ಕಳ ಚಿತ್ರಕ್ಕೆ ಪ್ರೋತ್ಸಾಹ

ವಕೀಲರಾಗಿದ್ದವರು ಗುರುತಿಸಿಕೊಂಡಿದ್ದು ಮಾತ್ರ ಸಿನಿಮಾ ರಂಗದಲ್ಲಿ

ವೃತ್ತಿಯಲ್ಲಿ ವಕೀಲರಾದರೂ ಕೂಡ ಸಿನಿಮಾ ಪ್ರವೃತ್ತಿಯಲ್ಲಿ ನಿರ್ದೇಶಕರಾಗಿಯೂ , ನಿರ್ಮಾಪಕರಾಗಿಯೂ ಕನ್ನಡ ಸಿನಿಮಾ ರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಸಿನಿಮಾಗಳ ಮೇಲೆ ಬಹಳವಾಗಿ ಆಸಕ್ತಿ ಹೊಂದಿದ್ದ ಇವರು ಬಾಳನೌಕೆ , ಹೃದಯ ಸಾಮ್ರಾಜ್ಯ, ಮರಳಿ ಗೂಡಿಗೆ ಸಿನಿಮಾಗಳನ್ನು ನಿರ್ಮಿಸಿದ್ದರು.

ಹಿರಿಯ ನಿರ್ದೇಶಕ, ನಿರ್ಮಾಪಕ ಮುರುಳೀಕೃಷ್ಣ ನಿಧನಕ್ಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ ಸೇರಿದಂತೆ ಚಿತ್ರರಂಗದ ಮಂದಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

(Muruli Krishna passed away) Famous Sandalwood producer and director Muruli Krishna passed away due to heart attack. Reportedly, Murali passed away on Monday night after suffering from prolonged illness.

Comments are closed.