ಬದಲಾಗಲಿದೆ ಜೊತೆ ಜೊತೆಯಲಿ ಧಾರಾವಾಹಿ : ಯಾವ ಸಮಯದಲ್ಲಿ ಪ್ರಸಾರವಾಗುತ್ತೆ ಗೊತ್ತಾ ?

0

ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸ ಬರೆದ ಧಾರಾವಾಹಿ ಜೊತೆ ಜೊತೆಯಲಿ… ಕನ್ನಡದ ನಂ.1 ಮನೋರಂಜನಾ ವಾಹಿನಿ ಝೀ ಕನ್ನಡದಲ್ಲಿ ಹೊಸ ಮೈಲಿಗಲ್ಲು ಬರೆದ ಧಾರಾವಾಹಿ. ಅನಿರುದ್ದ ಆರ್ಯವರ್ಧನ್ ಆಗಿ ತೆರೆಮೇಲೆ ದಾದಾ ನೆನಪನ್ನು ಮರುಕಳಿಸಿದ್ರು. ಕರಾವಳಿಯ ಬೆಡಗಿ ಮೇಘಾ ಶೆಟ್ಟಿ ಅನುಸಿರಿಮನೆಯಾಗಿ ಕನ್ನಡಿಗರ ಮನಗೆದ್ದಿದ್ದಾರೆ.

ನಿತ್ಯವೂ ರಾತ್ರಿ 8.30 ಆಗೋದನ್ನೇ ಜನ ಕಾದು ಕುಳಿತಿರುವಷ್ಟರ ಮಟ್ಟಿಗೆ ಆರ್ಯವರ್ಧನ್ – ಅನುಸಿರಿಮನೆ ಜೋಡಿ ಮೋಡಿ ಮಾಡಿತ್ತು. ಆರೂರು ಜಗದೀಶ್ ನಿರ್ದೇಶನ ಧಾರವಾಹಿ ಕನ್ನಡ ಕಿರುತೆರೆ ಲೋಕಕ್ಕೆ ಹೊಸ ಆಯಾವನ್ನೇ ನೀಡಿತ್ತು.

ಅತೀ ಹೆಚ್ಚು ಟಿಆರ್ ಟಿ ಗಳಿಸಿದ್ದ ಧಾರವಾಹಿ ಇನ್ನೇನು ಹೊಸ ಆಯಾಮ ಪಡೆದುಕೊಳ್ಳುತ್ತೆ. ರಾಜನಂದಿನಿಯ ಸ್ಟೋರಿ ಆರಂಭವಾಗುತ್ತೆ ಅನ್ನೋ ಹೊತ್ತಲ್ಲೇ ಶಾಕಿಂಗ್ ಸುದ್ದಿಯೊಂದನ್ನು ಧಾರಾವಾಹಿ ತಂಡ ನೀಡಿದೆ.

ಕೊರೊನಾ ಎಫೆಕ್ಟ್ ಇದೀಗ ಜೊತೆ ಜೊತೆಯಲಿ ಧಾರಾವಾಹಿಗೂ ತಟ್ಟಿದೆ. ಜೊತೆ ಜೊತೆಯಲಿ ಧಾರಾವಾಹಿಯ ಹೊಸ ಎಪಿಸೋಡ್ ಗಳು ಈಗಾಗಲೇ ಮುಗಿದು ಹೋಗಿವೆ. ಹೀಗಾಗಿ ಹಳೆಯ ಎಫಿಸೋಡ್ ಗಳನ್ನು ಪ್ರಸಾರ ಮಾಡೋದಕ್ಕೆ ಝೀ ಕನ್ನಡ ಮುಂದಾಗಿದೆ. ಇನ್ಮುಂದೆ ರಾತ್ರಿ 8.30ಕ್ಕೆ ಪ್ರೇಕ್ಷಕರು ಆರ್ಯವರ್ಧನ್ ಹಾಗೂ ಅನು ಸಿರಿಮನೆಯನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

ಇದೇನಪ್ಪಾ ಹಳೆ ಎಫಿಸೋಡ್ ಪ್ರಸಾರವಾಗುತ್ತೆ, ಆದ್ರೆ ಮಿಸ್ ಮಾಡಿಕೊಳ್ಳೋದೇನು ಅಂದ್ಕೋಬೇಡಿ. ಯಾಕೆಂದ್ರೆ ಧಾರಾವಾಹಿಯ ಪ್ರಸಾರದ ಸಮಯದಲ್ಲಿಯೂ ಬದಲಾವಣೆಯನ್ನು ಮಾಡೋದಕ್ಕೆ ಹೊರಟಿದ್ದು, ಸಂಜೆ 6 ಗಂಟೆಯಿಂದ 8 ಗಂಟೆಯ ವರೆಗೆ ಜೊತೆ ಜೊತೆಯಲಿ ಧಾರಾವಾಹಿ ಪ್ರಸಾರಗೊಳ್ಳಲಿದೆ.

ಕೊರೊನಾ ಲಾಕ್ ಡೌನ್ ನಿಂದಾಗಿ ಬಹುತೇಕ ಧಾರಾವಾಹಿಗಳು ಶೂಟಿಂಗ್ ಬಂದ್ ಮಾಡಿವೆ. ಹೀಗಾಗಿ ಹಳೆಯ ಎಫಿಸೋಡ್ ಪ್ರಸಾರ ಮಾಡಲಿವೆ. ಅದ್ರಲ್ಲೂ ಝೀ ಕನ್ನಡ ಕಾರ್ಯಕ್ರಮ ಪ್ರಸಾರದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಆನಂದ ಗುರೂಜಿ ನಡೆಸಿಕೊಡುವ ಮಹರ್ಷಿ ವಾಣಿ ಕಾರ್ಯಕ್ರಮ ಎಂದಿನಂತೆ ಹೊಸ ಎಫಿಸೋಡ್ ಗಳೇ ಪ್ರಸಾರವಾಗಲಿದೆ.

ಬೆಳಗ್ಗೆ 9.30ರಿಂದ 11 ಗಂಟೆಯವರೆಗೆ ಸರಿಗಮಪ ಸೀಸನ್ -15 ಪ್ರಸಾರವಾಗಲಿದ್ರೆ, 11 ಗಂಟೆಯಿಂದ 12.30ರ ವರೆಗೆ ಡ್ರಾಮಾ ಜ್ಯೂನಿಯರ್ ಸೀಸನ್ -1 ಶೋಗಳು ಮರು ಪ್ರಸಾರವಾಗಲಿವೆ. ಸಂಜೆ 3 ಗಂಟೆಗೆ ನಿತ್ಯವೂ ಝೀ ಕನ್ನಡ ನಡೆಸಿಕೊಟ್ಟಿರೋ ಅವಾರ್ಡ್ಸ್ ಕಾರ್ಯಕ್ರಮಗಳು ಪ್ರಸಾರವಾಗುವ ಸಾಧ್ಯತೆಯಿದೆ.

ಸಂಜೆ 6 ರಿಂದ 8 ಗಂಟೆಯವರೆಗೆ ಜೊತೆ ಜೊತೆಯಲಿ ಧಾರಾವಾಹಿ ಪ್ರಸಾರವಾಗಲಿದ್ರೆ, 8 ಗಂಟೆಗೆ ಎಂದಿನಂತೆ ಗಟ್ಟಿಮೇಳ ಪ್ರಸಾರವಾಗಲಿದ್ರೆ, 8.30ಕ್ಕೆ ಕಮಲಿ ಧಾರವಾಹಿಯ ಹೊಸ ಸಂಚಿಕೆಗಳು ಪ್ರಸಾರಗೊಳ್ಳಲಿವೆ. ಇನ್ನು 9 ಗಂಟೆಗೆ ನಾಗಿಣಿ, 9.30ಕ್ಕೆ ಪಾರು, 10 ಗಂಟೆಗೆ ಕಾಮಿಡಿ ಕಿಲಾಡಿಗಳು ಸೀಸನ್ -1 ಹಾಗೂ 11.30ಕ್ಕೆ ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಛೋಟಾ ಚಾಂಪಿಯನ್ ಕಾರ್ಯಕ್ರಮ ಪ್ರಸಾರವಾಗಲಿದೆ ಅಂತಾ ಝೀ ಕನ್ನಡ ಹೇಳಿಕೊಂಡಿದೆ.

ಲಾಕ್ ಡೌನ್ ನಿಂದಾಗಿ ಶೂಟಿಂಗ್ ನಡೆಯದೇ ಇದ್ರೂ ಝೀ ಕನ್ನಡದ ಮುಖ್ಯಸ್ಥ ರಾಘವೇಂದ್ರ ಹುಣಸೂರು ಜನರಿಗೆ ಭರ್ಜರಿ ಮನರಂಜನೆಯನ್ನು ಕೊಡುವುದಕ್ಕೆ ರೆಡಿಯಾಗಿದ್ದಾರೆ.

Leave A Reply

Your email address will not be published.