ಕಬ್ಜ ಸಿನಿಮಾದ 3ನೇ ಹಾಡು ಅದ್ದೂರಿ ರಿಲೀಸ್‌ : ಸ್ಪೆಷಲ್‌ ಸಾಂಗ್‌ಗೆ ಫಿದಾ ಆದ ಫ್ಯಾನ್ಸ್‌

ಸ್ಯಾಂಡಲ್‌ವುಡ್‌ನ ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ಆರ್‌.ಚಂದ್ರ ಕಾಂಬಿನೇಷನ್ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ಕಬ್ಜ ದಿನದಿಂದ ದಿನಕ್ಕೆ ಕುತೂಹಲವನ್ನು ಹುಟ್ಟಿಸುತ್ತಿದೆ. ಸಿನಿತಂಡ ಸಿನಿಮಾದ ಹಾಡಗಳನ್ನು ಒಂದೊಂದಾಗಿ ಬಿಡುಗಡೆ ಮಾಡುವ ಮೂಲಕ ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈಗಾಗಲೇ ಬಿಡುಗಡೆಯಾದ ಟೀಸರ್‌, ನಾಮಮಿ ಸಾಂಗ್‌ ಬಾಲಿವುಡ್‌ ರೇಂಜ್‌ಗೆ ಸದ್ದು ಮಾಡುತ್ತಿದೆ. ಇದೀಗ ನಿನ್ನೆ ಬಿಡುಗಡೆಯಾದ ಕಬ್ಜ ಸಿನಿಮಾದ ಸ್ಪೆಷಲ್‌ ಸಾಂಗ್‌ ಮತ್ತೊಂದು ಟ್ರೆಂಡ್‌ನ್ನು ಹುಟ್ಟು ಹಾಕಿದೆ. ನಿನ್ನೆ ( ಫೆಬ್ರವರಿ 26 ) ಶಿಡ್ಲಘಟ್ಟದಲ್ಲಿ ನಡೆಯುತ್ತಿರುವ ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ (Kabza Special Song Release)‌ ಬಿಡುಗಡೆಗೊಂಡಿದೆ. ಹಾಗೆಯೇ ಆನಂದ್ ಆಡಿಯೊ ಯುಟ್ಯೂಬ್ ಚಾನೆಲ್‌ನಲ್ಲೂ ಸಹ ಹಾಡು ಬಿಡುಗಡೆಯಾಗಿದೆ‌.

ಹೌದು ಯಜಮಾನ ಸಿನಿಮಾದ ಬಸಣ್ಣಿ ಸಾಂಗ್‌ ಖ್ಯಾತಿಯ ನಟಿ ತಾನ್ಯಾ ಸಖತ್‌ ಆಗಿ ಕುಣಿದಿದ್ದಾರೆ. ಸಿನಿತಂಡ ಈ ಹಾಡನ್ನು ಬಿಡುಗಡೆ ಮಾಡುವ ಮೊದಲು ‘ದ ಸೆಲೆಬ್ರೇಷನ್ ಸಾಂಗ್ ಆಫ್ ದ ಇಯರ್’ ಎಂದು ಪ್ರಚಾರ ಮಾಡಿದ್ದು, ಇದೀಗ ಆ ಮಾತನ್ನು ಉಳಿಸಿಕೊಂಡಿದೆ. ಈ ಹಾಡುಕ್ಕೂ ನೋಡುಗರಿಗೆ ಹಾಗೂ ಕೇಳುಗರಿಗೆ ಹಬ್ಬ ಸರಿ. ಉಗ್ರಂ, ಕೆಜಿಎಫ್‌ ಅಂತಹ ಹಿಟ್‌ ಸಿನಿ ಆಕ್ಕೆ ಹಿಟ್‌ ಟ್ಯೂನ್‌ನ್ನು ನೀಡಿರುವ ರವಿ ಬಸ್ರೂರು ಅವರು ಈ ಹಾಡಿಗಾಗಿ ಟ್ಯೂನ್‌ ನೀಡಿದ್ದು ಬಹಳ ವಿಭಿನ್ನವಾದ ಮನರಂಜನೆಯನ್ನು ನೀಡಲಿದೆ.

ಚುಮ್ ಚುಮ್ ಚಳಿ ಚಳಿ ಎಂಬ ಸಾಲಿನೊಂದಿಗೆ ಶುರುವಾಗುವ ಈ ಹಾಡಿನಲ್ಲಿ ನಟಿ ತಾನ್ಯಾ ಹೋಪ್ ಸೊಂಟ ಬಳುಕಿಸಿದ್ದಾರೆ‌. ಉಪೇಂದ್ರ ವಿಂಟೇಜ್ ಸೂಟ್ ಧರಿಸಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಪ್ರಮೋದ್ ಮರವಂತೆ ಈ ಹಾಡಿನ ಸಾಹಿತ್ಯ ಬರೆದಿದ್ದು, ಏರಾ ಉಡುಪಿ, ಮನೀಶ್ ದಿನಕರ್ ಹಾಗೂ ಸಂತೋಷ್ ವೆಂಕಿ ದನಿ ನೀಡಿದ್ದಾರೆ‌. ಇನ್ನು ಲಿರಿಕಲ್ ವಿಡಿಯೊದಲ್ಲಿ ತಾನ್ಯಾ ಹೋಪ್ ಥೇಟ್ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ರೀತಿಯೇ ಒಂದೆರಡು ಕಡೆ ಕಾಣಿಸುತ್ತಿದ್ದು, ನಿರ್ದೇಶಕ ಆರ್ ಚಂದ್ರು ಅವರ ಈ ಆಯ್ಕೆಯೂ ಪಕ್ಕಾ ಕೆಲಸ ನಿರ್ವಹಿಸಿದೆ.

ಇದನ್ನೂ ಓದಿ : Kabza Namami Song : ಬಾಲಿವುಡ್‌ಗೆ ಸೆಡ್ಡು ಹೊಡೆಯುತ್ತಿದೆ ಕಬ್ಜ ಸಾಂಗ್ : ನಮಾಮಿ ಎನ್ನುತ್ತ ಮನಗೆದ್ದ ಶ್ರೀಯಾ ಶರಣ್

ಇದನ್ನೂ ಓದಿ : ಸ್ಯಾಂಡಲ್‌ವುಡ್‌ ನಟ ರಾಘವೇಂದ್ರ ರಾಜ್‌ಕುಮಾರ್‌ ಅಭಿನಯದ 13 ಸಿನಿಮಾದ ಟೀಸರ್ ರಿಲೀಸ್

ಇದನ್ನೂ ಓದಿ : ಮಡಿಕೇರಿಯಲ್ಲಿ ಗಲ್ಲಿ ಕ್ರಿಕೆಟ್‌ ಆಡಿದ ನಟ ದರ್ಶನ್‌ : ವೈರಲ್‌ ಆಯ್ತು ವಿಡಿಯೋ

ತೆಲುಗಿನ ಜಾನಿ‌ ಮಾಸ್ಟರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ರಾಜಕುಮಾರ, ನಟ ಸಾರ್ವಭೌಮ ಹಾಗೂ ಯುವರತ್ನ ಮತ್ತು ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ರಾರಾ ರಕ್ಕಮ್ಮ ಹಾಡಿನ ಬಳಿಕ ಮತ್ತೊಮ್ಮೆ ಈ ಹಾಡಿನ ಮೂಲಕ ಕನ್ನಡದ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ. ಉಪ್ಪಿ ಡಿಫರೆಂಟ್ ಸ್ಟೆಪ್ಸ್, ತಾನ್ಯಾ ಹೋಪ್ ಗ್ಲಾಮರಸ್ ಲುಕ್, ರವಿ ಬಸ್ರೂರು ಸಂಗೀತ ಲಿರಿಕಲ್ ವಿಡಿಯೊ ಮೂಲಕವೇ ಸಿನಿ ರಸಿಕರ ಮನ ಗೆದ್ದಿದ್ದು, ಇನ್ನು ವಿಡಿಯೊ ಸಾಂಗ್ ಸಿನಿಮಂದಿರಗಳಲ್ಲಿ ಪ್ರೇಕ್ಷಕರ ಎದೆಗೆ ಸುರ್ ಸುರ್ ಸುರ್ ಬತ್ತಿ ಇಡುವುದು ಪಕ್ಕ. ಸಿನಿಮಾ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 17ರಂದು ತೆರೆಗೆ ಬರಲಿದೆ.

Kabza Special Song Release: 3rd song of Kabza movie is grand release: Fans are excited for the special song.

Comments are closed.