BS Yadiyurappa Birthday: ಧೀಮಂತ ನಾಯಕ, ರೈತಪರ ಹೋರಾಟಗಾರ ಬಿ.ಎಸ್‌ ಯಡಿಯೂರಪ್ಪ ಬೆಳೆದು ಬಂದ ಹಾದಿ

ಬೆಂಗಳೂರು: (BS Yadiyurappa Birthday) ರಾಜ್ಯ ರಾಜಕಾರಣದ ರಾಜಹುಲಿ ಎಂದರೆ ನೆನಪಾಗುವುದು ರಾಜ್ಯದ ಧೀಮಂತ ನಾಯಕ, ರೈತಪರ ಹೋರಾಟಗಾರ ಬಿ.ಎಸ್‌. ಯಡಿಯೂರಪ್ಪ ಇಂದು ತಮ್ಮ 80 ನೇ ವರ್ಷದ ಹುಟ್ಟುಹಬ್ಬವನ್ನು ಅಚರಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಳೆದುಬಂದ ಹಾದಿಯೇ ರೋಚಕ.

ಬಡವರು, ದಲಿತರು, ರೈತ ಪರ ಹೋರಾಟ ನಡೆಸಿದ ಹೆಮ್ಮೆ ಇವರದ್ದು. ರಾಜ್ಯದ ಅಸಾಧಾರಣ ನಾಯಕನಾಗಿ, ರಾಜ್ಯದ ಜನರು ರೈತಬಂಧುಗಳ, ದುರ್ಬಲರ ಆಶೋತ್ತರಗಳಿಗಗಿ ದುಡಿದ ನಾಯಕಾಗಿದ್ದ ಇವರು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ಶಿಕಾರಿಪುರ ಎಂದರೇ ಮೊದಲಿಗೆ ನೆನಪಾಗುವುದು ಬಿಎಸ್‌ವೈ. ಮಂಡ್ಯದಲ್ಲಿ ತಮ್ಮ ಓದು ಮುಗಿಸಿ 1965 ರಲ್ಲಿ ಸರಕಾರಿ ಉದ್ಯೋಗಕ್ಕೆ ಸೇರಿಕೊಂಡರು. ನಂತರ ಉದ್ಯೋಗ ತೊರೆದ ಬಿಎಸ್‌ವೈ ಶಿಕಾರಿಪುರದ ವೀರಭದ್ರ ಶಾಸ್ತ್ರೀ ಶಂಕರ್‌ ರೈಸ್‌ ಮಿಲ್‌ ನಲ್ಲಿ ಗುಮಾಸ್ತರಾಗಿ ಸೇರಿಕೊಂಡು, ನಂತರ ಅದೇ ರೈಸ್‌ ಮಿಲ್‌ ಮಾಲೀಕರ ಮಗಳ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 1972 ರಲ್ಲಿ ಸಾರ್ವಜನಿಕರ ಉದ್ದಾರಕ್ಕೆ ಮುಂದಾದ ಬಿಎಸ್‌ ವೈ ಶಿಕಾರಿಪುರದ ಜನಸಂಘದ ಅಧ್ಯಕ್ಷರಾಗಿ ನೇಮಕಗೊಂಡರು.

ನಂತರ ರಾಜ್ಯದ ರಾಜಕೀಯ ಜೀವನದಲ್ಲಿ ನಿರೀಕ್ಷೆಗೂ ಮೀರಿ ಯಡಿಯೂರಪ್ಪ ಅವರು ಇಡೀ ದಕ್ಷಿಣ ಭಾರತದಲ್ಲಿ ಮೊದಲ ಭಾರಿಗೆ ಬಿಜೆಪಿಯನ್ನು ಅಸ್ತಿತ್ವಕ್ಕೆ ತರುವಲ್ಲಿ ಯಶಸ್ವಿಯಾದರು. ಅಲ್ಲದೇ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಜನಪರ ಸೇವೆಗೆ ಮುಂದಾದರು. ಅಧಿಕಾರ ಸಿಕ್ಕಾಗ ಶಿಕಾರಿಪುರ ನಗರದ ಚಿತ್ರಣವನ್ನೇ ಬದಲಾಯಿಸಿ ಬಡವರ ಬದುಕಿಗೆ ಸ್ಪಂದಿಸುವ ಸದಾ ಕ್ರಿಯಾಶೀಲರಾಗಿರುವ ರಾಜಕಾರಣಿ ಎಂಬ ಹೆಗ್ಗಳಿಕೆ ಪಾತ್ರರಾದರು. ಕುಮುದ್ವತಿ ನೀರನ್ನು ಮನೆ ಮನೆಗೆ ತಲುಪಿಸುವ ಸಂಕಲ್ಪ ತೊಟ್ಟು, ಅದರಲ್ಲಿ ಯಶಸ್ಸನ್ನು ಗಳಿಸಿದರು.

ಶಿವಮೊಗ್ಗದಲ್ಲಿ ರೈತರ ಬಡ ಜನರ ಹೋರಾಟಕ್ಕೆ ಮಣಿದ ಬಿಎಸ್‌ ವೈ ಮೊದಲ ಬಾರಿಗೆ ರೈತರ ಸಾಲಮನ್ನಾ ಮಾಡಲು ವಿಧಾನಸಭೆಯಲ್ಲಿ ಒತ್ತಾಯ ,ಮಾಡಿದ್ದರು. ಹೀಗಾಗಿ ರೈತರ ಸಾಲಮನ್ನಾ ವಿಚಾರವಾಗಿ ಬಿಎಸ್‌ ವೈ ಅವರನ್ನು ರೈತಪರ ಹೋರಾಟಗಾರ ಎಂತಲೇ ಕರೆಯುತ್ತಾರೆ. ನಂತರ ಜೈಲಿನಲ್ಲಿದ್ದುಕೊಂಡೇ ಖೈದಿಗಳಿಗಾಗುತ್ತಿರುವ ಅನ್ಯಾಯದ ವಿರುದ್ದ ಹೋರಾಟ ನಡೆಸಿ ನ್ಯಾಯ ದೊರಕಿಸಿಕೊಟ್ಟ ನಾಯಕ ಇವರು. 1988 ರಿಂದ 1991, 1995 ರಿಂದ 2000ರವರೆಗೆ 9 ವರ್ಷಗಳ ಕಾಲ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾಗಿ ಪಕ್ಷದ ಸರ್ವತೋಮುಖ ಬೆಳವಣಿಗೆಗೆ ಕಾರಣಕರ್ತ, ಬಿಜೆಪಿ ಕೇವಲ ನಗರ ಜನತೆಯ ಪಾರ್ಟಿ ಎನ್ನುತ್ತಿದ್ದವರಿಗೆ, ಬಿಜೆಪಿ ರೈತರ ಪಾರ್ಟಿ, ದೀನದಲಿತರ ಪಾರ್ಟಿ, ಕೃಷಿ ಕೂಲಿ ಕಾರ್ಮಿಕರ ಪಾರ್ಟಿ ಎನ್ನುವಂತೆ ಮಾಡಿದರು. ಸದನದಲ್ಲೇ ರೈತರ ಪರ ಕಣ್ಣೀರು ಸುರಿಸಿದ ನೇಗಿಲಯೋಗಿ ಸರ್ಕಾರದ ಕಣ್ಣು ತೆರೆಸಿ ರೈತರಿಗೆ ಆಶಾಕಿರಣವಾದರು.

ನಾಲ್ಕು ಭಾರಿ ರಾಜ್ಯದ ಮುಖ್ಯಮಂತ್ರಿಯಾಗಿ, ಹಣಕಾಸು ಮತ್ತು ಅಬಕಾರಿ ಖಾತೆ ನಿರ್ವಾಹಕನಾಗಿ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ, ರಾಜ್ಯ ಅಧ್ಯಕ್ಷರಾಗಿ, ವಿಧಾನಸಭೆಯ ವಿಪಕ್ಷ ನಾಯಕನಾಗಿ ರಾಜ್ಯದ, ಬಡ ಜನರ ಹಗಾಊ ರೈತರ ಸೇವೆ ಸಲ್ಲಿಸಿದ ಕೀರ್ತಿ ಬಿಎಸ್‌ ಯಡಿಯೂರಪ್ಪ ಅವರದ್ದು. ಇಂದು ಅವರ ಜನ್ಮದಿನಕ್ಕೆ ಇಡೀ ನಾಡಿನ ಜನತೆ ಶುಭಾಶಯಗಳನ್ನು ಕೋರುತ್ತಿದೆ. ಅಲ್ಲದೇ ಪಕ್ಷದ ನಾಯಕರು ಕೂಡ ಶುಭಾಶಯಗಳನ್ನು ಕೋರುತ್ತಿದ್ದಾರೆ. ಇವರ ಜನ್ಮದಿನದಂದೇ ಶಿವಮೊಗ್ಗದ ವಿಮಾನ ನಿಲ್ದಾಣದ ಉದ್ಘಾಟನೆಯಾಗಲಿದ್ದು, ಶಿವಮೊಗ್ಗ ಜನತೆಯ ಅಭಿಮಾನ ಇನ್ನಷ್ಟು ಉತ್ತುಂಗಕ್ಕೇರಿದೆ.

ಇದನ್ನೂ ಓದಿ : ಭಾರತ್ ಜೋಡೋ ಯಾತ್ರೆಯಿಂದ ಬಹಳಷ್ಟು ಕಲಿತಿದ್ದೇನೆ: ರಾಹುಲ್ ಗಾಂಧಿ

BS Yadiyurappa Birthday: Dimanta leader and peasant fighter BS Yadiyurappa grew up

Comments are closed.