Kangana Ranaut : ದೇಶಕ್ಕೆ ಸರ್ವಾಧಿಕಾರವೇ ಪರಿಹಾರ : ಮತ್ತೆ ಕುಟುಕಿದ ಕಂಗನಾ

ಸದಾ ರಾಷ್ಟ್ರದ ಆಗು ಹೋಗುಗಳಿಗೆ ಸ್ಪಂದಿಸುತ್ತ ಕಟುವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಕಂಗನಾ ರನಾವುತ್ (Kangana Ranaut) ಕೃಷಿ ಕಾಯ್ದೆ ( farm laws ) ರದ್ದುಗೊಳಿಸಿರುವುದಕ್ಕೆ ಸಖತ್ ಗರಂ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ತೋಡಿಕೊಂಡಿದ್ದಾರೆ. ಕಳೆದ ವರ್ಷ ಜಾರಿಯಾಗಿದ್ದ ಪ್ರಮುಖ ಮೂರು ಕೃಷಿ ಕಾಯ್ದೆಯನ್ನು ಪ್ರಧಾನಿ ನರೇಂದ್ರ ಮೋದಿ ಹಿಂಪಡೆಯುವುದಾಗಿ ಘೋಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇನ್ ಸ್ಟಾಗ್ರಾಂನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಕಂಗನಾ, ಕಾಯ್ದೆ ರದ್ದಾಗಿರೋದರ ಬಗ್ಗೆ ವ್ಯಕ್ತಿಯೊಬ್ಬರ ಟ್ವೀಟ್ ಶೇರ್ ಮಾಡಿರುವ ಕಂಗನಾ, ಇದು ದುಃಖದ ಸಂಗತಿ. ನಾಚಿಕೆಗೇಡಿನದ್ದು, ಸಂಪೂರ್ಣ ಅನ್ಯಾಯ ಎಂದಿದ್ದಾರೆ. ಮಾತ್ರವಲ್ಲ ಈ ದೇಶದಲ್ಲಿ ಬೀದಿಗಿಳಿದ ಜನರು ನಿಯಮ ರೂಪಿಸಲಾರಂಭಿಸಿದ್ದಾರೆಯೇ ವಿನಃ ಜನರಿಂದ ಆಯ್ಕೆಯಾದ ಸಂಸತ್ತಿನಲ್ಲಿರುವ ಸರ್ಕಾರವಲ್ಲ ಎಂದು ಕಂಗನಾ ವಿಷಾದ ವ್ಯಕ್ತಪಡಿಸಿದ್ದಾರೆ. ಇದು ಜಿಹಾದಿ ರಾಷ್ಟ್ರವಾಗಿದೆ ಎಂದಿರುವ ಕಂಗನಾ, ಈ ರೀತಿ ಆಗಬೇಕೆಂದು ಬಯಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಕಂಗನಾ ವ್ಯಂಗ್ಯವಾಡಿದ್ದಾರೆ.

ಎರಡನೇ ಪೋಸ್ಟ್ ನಲ್ಲೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಶುಭಾಶಯ ಕೋರುವ ನೆಪದಲ್ಲಿ ಅವರನ್ನು ಟೀಕಿಸಿರುವ ಕಂಗನಾ ಕೇಂದ್ರದ ನಿರ್ಧಾರವನ್ನು ಟೀಕಿಸಿದ್ದಾರೆ. ರಾಷ್ಟ್ರದ ಸಾಕ್ಷಿಪ್ರಜ್ಞೆ ಗಾಢವಾದ ನಿದ್ರೆಯಲ್ಲಿರುವಾಗ ಬೆತ್ತವೊಂದೆ ಪರಿಹಾರ, ಸರ್ವಾಧಿಕಾರವೊಂದೇ ಅಂತಿಮ‌ಪರಿಹಾರ. ಶುಭಾಶಯಗಳು ಮಾಜಿ ಪ್ರಧಾನಿಗಳೇ ಎಂದು ಕಂಗನಾ ಕುಟುಕಿದ್ದಾರೆ.

ನವೆಂಬರ್ 19 ರಂದು ಇಂಧಿರಾಗಾಂಧಿಯವನೇ 104ನೇ ಜನ್ಮದಿನವಾಗಿದೆ. ಹೀಗಾಗಿ ಅವರಿಗೆ ಗೌರವ ಸಲ್ಲಿಸುವ ನೆಪದಲ್ಲಿ ಕಂಗನಾ ಟೀಕಿಸಿದ್ದಾರೆ. ಕಳೆದ ವರ್ಷ ರೈತರ ಹಿತ ಕಾಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ ಕೃಷಿ ಕಾಯ್ದೆಗಳಿಗೆ ದೇಶದಾದ್ಯಂತ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಒಂದು ವರ್ಷದಿಂದ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ಯಲ್ಲಿ ತೊಡಗಿದ್ದಾರೆ.

ಈ ಮಧ್ಯೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕಂಗನಾ ರನಾವುತ್ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದಾರೆ.ಆದರೆ ಪ್ರಶಸ್ತಿ ಸ್ವೀಕರಿಸಿದ ಬಳಿಕ ಕಂಗನಾ ಸ್ವಾತಂತ್ರ್ಯೋತ್ಸವದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು ಕಂಗನಾ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಕಂಗನಾ ವಿರುದ್ಧ ದೇಶದ್ರೋಹದ ಪ್ರಕರಣ ಕೂಡ ದಾಖಲಾಗಿದ್ದು ಸ್ವಾತಂತ್ರ್ಯ ಹೋರಾಟವನ್ನು ಅವಮಾನಿಸಿದ ಕಂಗನಾಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿ ಹಿಂಪಡೆಯಬೇಕೆಂಬ ಒತ್ತಡವೂ ವ್ಯಕ್ತವಾಗುತ್ತಿದೆ‌. ಅದರೂ ಕಂಗನಾ ತಮ್ಮ ನಿರ್ಭಯ ಟೀಕಾ ಪ್ರವೃತ್ತಿ ಮುಂದುವರೆಸಿದ್ದು ಮತ್ತೊಮ್ಮೆ ರೈತ ಹೋರಾಟವನ್ನು ತರಾಟೆಗೆ ತೆಗೆದುಕೊಂಡು ಈ ದೇಶಕ್ಕೆ ಸರ್ವಾಧಿಕಾರ ಸೂಕ್ತ ಎಂದಿದ್ದಾರೆ.‌

ಇದನ್ನೂ ಓದಿ : ಕೇಂದ್ರದ 3 ವಿವಾದಿತ ಕೃಷಿ ಕಾಯಿದೆ ವಾಪಾಸ್‌ : ಪ್ರಧಾನಿ ಮೋದಿ ಮಹತ್ವದ ಘೋಷಣೆ

ಇದನ್ನೂ ಓದಿ : 9 Killed : ಭಾರೀ ಮಳೆಗೆ ಕುಸಿದ ಮನೆ, 4 ಮಕ್ಕಳು ಸೇರಿ 9 ಮಂದಿ ದುರ್ಮರಣ

( Kangana Ranaut reacts to farm laws repeal, Dictatorship is the only resolution)

Comments are closed.