IND vs NZ T20 : ನ್ಯೂಜಿಲೆಂಡ್‌ ವಿರುದ್ದ 2ನೇ ಟಿ20 ಪಂದ್ಯ : ಟೀಂ ಇಂಡಿಯಾಕ್ಕೆ 154 ರನ್‌ ಸವಾಲು

ರಾಂಚಿ : ಭಾರತ ಹಾಗೂ ನ್ಯೂಜಿಲೆಂಡ್‌ (IND vs NZ T20) ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ 6 ವಿಕೆಟ್‌ ಕಳೆದುಕೊಂಡು 20 ಓವರ್‌ಗಳಲ್ಲಿ 153 ರನ್‌ ಗಳಿಸಿದೆ. ಟೀಂ ಇಂಡಿಯಾಕ್ಕೆ 154 ರನ್‌ಗಳ ಗುರಿಯನ್ನು ನೀಡಿದೆ.

ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಷನಲ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ ತಂಡ ಉತ್ತಮ ಆಟವಾಡಿದೆ. ಆರಂಭಿಕರಾದ ಮಾರ್ಟಿನ್‌ ಗಫ್ಟಿಲ್‌ 15 ಎಸೆತಗಳಲ್ಲಿ 31 ರನ್‌ ಬಾರಿಸಿದ್ರೆ, ಡೆರಿಲ್‌ ಮಿಚೆಲ್‌ 28 ಎಸೆತಗಳಲ್ಲಿ 31 ರನ್‌ ಸಿಡಿಸುವ ಮೂಲಕ ತಂಡಕ್ಕೆ ಉತ್ತಮ ಜೊತೆಯಾಟ ನೀಡಿದ್ದಾರೆ. ನಂತರ ಕ್ರೀಸ್‌ಗೆ ಬಂದ ಮಾರ್ಕ್‌ ಚಾಪ್ಮನ್‌ 17 ಎಸೆತಗಳಲ್ಲಿ 21 ಹಾಗೂ ಗ್ಲೆನ್‌ ಫಿಲಿಪ್ಸ್‌ 21 ಎಸೆತಗಳಲ್ಲಿ 28ರನ್‌ಗಳಿಸಿದ್ದಾರೆ. ಆರಂಭದಿಂದಲೂ ಉತ್ತಮ ಆಟವಾಡುತ್ತಿದ್ದ ನ್ಯೂಜಿಲೆಂಡ್‌ ತಂಡ ಸವಾಲಿನ ಮೊತ್ತ ದಾಖಲಿಸುವ ನಿರೀಕ್ಷೆಯಲ್ಲಿತ್ತು.

ಆದರೆ ಹರ್ಷಲ್‌ ಪಟೇಲ್‌, ಚಹರ್‌ ಹಾಗೂ ಅಕ್ಷರ್‌ ಪಟೇಲ್‌ ಮಾರಕವಾಗಿ ಪರಿಣಮಿಸಿದ್ರು. ನಂತರದಲ್ಲಿ ಟೀಮ್‌ ಸೈಫರ್ಟ್‌ 13 ರನ್‌ ಬಾರಿಸಿದ್ದು ಹೊರತು ಪಡಿಸಿದ್ರೆ ಉಳಿದ ಯಾವುದೇ ಆಟಗಾರರು ಕೂಡ ಎರಡಂಕಿ ಮೊತ್ತವನ್ನು ದಾಖಲಿಸಲಿಲ್ಲ. ಅಂತಿಮವಾಗಿ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 153 ರನ್‌ ಗಳಿಸಿದೆ. ಭಾರತ ಪರ ಹರ್ಷಲ್‌ ಪಟೇಲ್‌ 2, ಭುವನೇಶ್ವರ್‌ ಕುಮಾರ್‌, ದೀಪಕ್‌ ಚಹರ್‌, ಅಕ್ಷರ್‌ ಪಟೇಲ್‌ ಹಾಗೂ ರವಿಚಂದ್ರನ್‌ ಅಶ್ವಿನ್‌ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : IPL ಸೇರಿ ಎಲ್ಲಾ ಮಾದರಿಯ ವೃತ್ತಿ ಬದುಕಿಗೆ ವಿದಾಯ ಹೇಳಿದ ಎಬಿ ಡಿವಿಲಿಯರ್ಸ್‌

ಇದನ್ನೂ ಓದಿ : ಬಂಗಾಳ ವಿರುದ್ದ ಸೂಪರ್‌ ಓವರ್‌ನಲ್ಲಿ ಗೆದ್ದಕರ್ನಾಟಕ ಸೆಮಿಫೈನಲ್‌ಗೆ ಎಂಟ್ರಿ

( IND vs NZ T20 2nd match against India vs New Zealand live updates )

Comments are closed.