India vs New Zealand 2nd T20 : ರಾಹುಲ್‌ – ರೋಹಿತ್‌ ಆರ್ಭಟ, ಸರಣಿ ಕೈವಶ ಮಾಡಿಕೊಂಡ ಟೀಂ ಇಂಡಿಯಾ

ರಾಂಚಿ : ಕನ್ನಡಿಗ ಕೆ.ಎಲ್.‌ ರಾಹುಲ್‌ ಹಾಗೂ ನಾಯಕ ರೋಹಿತ್‌ ಶರ್ಮಾ ಆರ್ಭಟಕ್ಕೆ ನ್ಯೂಜಿಲೆಂಡ್‌ ತಂಡ ಮಂಕಾಗಿದೆ. ನ್ಯೂಜಿಲೆಂಡ್‌ ಹಾಗೂ ಭಾರತ ನಡುವೆ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ಕೇವಲ 17.2 ಓವರ್‌ಗಳಲ್ಲಿ ಭರ್ಜರಿ 7 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ. ರೋಹಿತ್‌ ಶರ್ಮಾ 36 ಎಸೆತಗಳಲ್ಲಿ 55 ರನ್‌ಗಳಿಸಿದ್ರೆ, ಕೆ.ಎಲ್.‌ ರಾಹುಲ್‌ ಕೇವಲ 49 ಎಸೆತಗಳಲ್ಲಿ 65 ರನ್‌ ಸಿಡಿಸಿದ್ದಾರೆ.

ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಷನಲ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ ತಂಡ ಉತ್ತಮ ಆಟವಾಡಿದೆ. ಆರಂಭಿಕರಾದ ಮಾರ್ಟಿನ್‌ ಗಫ್ಟಿಲ್‌ 15 ಎಸೆತಗಳಲ್ಲಿ 31 ರನ್‌ ಬಾರಿಸಿದ್ರೆ, ಡೆರಿಲ್‌ ಮಿಚೆಲ್‌ 28 ಎಸೆತಗಳಲ್ಲಿ 31 ರನ್‌ ಸಿಡಿಸುವ ಮೂಲಕ ತಂಡಕ್ಕೆ ಉತ್ತಮ ಜೊತೆಯಾಟ ನೀಡಿದ್ದಾರೆ. ನಂತರ ಕ್ರೀಸ್‌ಗೆ ಬಂದ ಮಾರ್ಕ್‌ ಚಾಪ್ಮನ್‌ 17 ಎಸೆತಗಳಲ್ಲಿ 21 ಹಾಗೂ ಗ್ಲೆನ್‌ ಫಿಲಿಪ್ಸ್‌ 21 ಎಸೆತಗಳಲ್ಲಿ 28ರನ್‌ಗಳಿಸಿದ್ದಾರೆ. ಆರಂಭದಿಂದಲೂ ಉತ್ತಮ ಆಟವಾಡುತ್ತಿದ್ದ ನ್ಯೂಜಿಲೆಂಡ್‌ ತಂಡ ಸವಾಲಿನ ಮೊತ್ತ ದಾಖಲಿಸುವ ನಿರೀಕ್ಷೆಯಲ್ಲಿತ್ತು. ಆದರೆ ಹರ್ಷಲ್‌ ಪಟೇಲ್‌, ಚಹರ್‌ ಹಾಗೂ ಅಕ್ಷರ್‌ ಪಟೇಲ್‌ ಮಾರಕವಾಗಿ ಪರಿಣಮಿಸಿದ್ರು. ನಂತರದಲ್ಲಿ ಟೀಮ್‌ ಸೈಫರ್ಟ್‌ 13 ರನ್‌ ಬಾರಿಸಿದ್ದು ಹೊರತು ಪಡಿಸಿದ್ರೆ ಉಳಿದ ಯಾವುದೇ ಆಟಗಾರರು ಕೂಡ ಎರಡಂಕಿ ಮೊತ್ತವನ್ನು ದಾಖಲಿಸಲಿಲ್ಲ. ಅಂತಿಮವಾಗಿ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 153 ರನ್‌ ಗಳಿಸಿದೆ. ಭಾರತ ಪರ ಹರ್ಷಲ್‌ ಪಟೇಲ್‌ 2, ಭುವನೇಶ್ವರ್‌ ಕುಮಾರ್‌, ದೀಪಕ್‌ ಚಹರ್‌, ಅಕ್ಷರ್‌ ಪಟೇಲ್‌ ಹಾಗೂ ರವಿಚಂದ್ರನ್‌ ಅಶ್ವಿನ್‌ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ.

ನ್ಯೂಜಿಲೆಂಡ್‌ ನೀಡಿದ್ದ154 ರನ್‌ ಗುರಿಯನ್ನು ಪಡೆದ ಭಾರತ ತಂಡಕ್ಕೆ ಆರಂಭಿಕರಾದ ಕನ್ನಡಿಗ ಕೆ.ಎಲ್.ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಆರ್ಭಟಕ್ಕೆ ನ್ಯೂಜಿಲೆಂಡ್‌ ತಂಡ ಮಂಕಾಗಿ ಹೋಗಿತ್ತು. ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಜೋಡಿ ಮೊದಲ ವಿಕೆಟ್‌ಗೆ 117 ರನ್‌ ಜೊತೆಯಾಟ ನೀಡಿದ್ರು. ಕೇವಲ ೪49 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 6 ಬೌಂಡರಿ ಮೂಲಕ 65 ರನ್‌ಗಳಿಸಿದ್ದ ರಾಹುಲ್‌ ಟೀಂ ಸೌಥಿ ಬೌಲಿಂಗ್‌ನಲ್ಲಿ ಗ್ಲೆನ್‌ ಫಿಲಿಪ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ರು. ನಂತರ ನಾಯಕ ರೋಹಿತ್‌ ಶರ್ಮಾಗೆ ಜೊತೆಯಾದ ವೆಂಕಟೇಶ್‌ ಅಯ್ಯರ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಅಂತಿಮವಾಗಿ ರೋಹಿತ್‌ ಶರ್ಮಾ 36 ಎಸೆತಗಳಲ್ಲಿ 1 ಸಿಕ್ಸರ್‌, 5 ಬೌಂಡರಿ ನೆರವಿನಿಂದ 55 ರನ್‌ ಗಳಿಸಿ ಉತ್ತಮವಾಗಿ ಆಡುತ್ತಿದ್ದರು. ಆದರೆ ಟೀಮ್‌ ಸೌಥಿ ಎಸೆತದಲ್ಲಿ ಕೆಟ್ಟ ಹೊಡೆತಕ್ಕೆ ಮನ ಮಾಡಿದ ರೋಹಿತ್‌ ಗಪ್ಟಿಲ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ. ರೋಹಿತ್‌ ಶರ್ಮಾ ಔಟಾಗುತ್ತಲೇ ಕ್ರೀಸ್‌ಗೆ ಬಂದ ಸೂರ್ಯ ಕುಮಾರ್‌ ಯಾದವ್‌ ಸೌಥಿ ಮೊದಲ ಎಸೆತದಲ್ಲಿಯೇ ಬೌಲ್ಡ್‌ ಆಗುವ ಮೂಲಕ ನಿರಾಸೆ ಅನುಭವಿಸಿದ್ರು. ನಂತರ ವೆಂಕಟೇಶ್‌ ಅಯ್ಯರ್‌ ಜೊತೆಯಾದ ರಿಷಬ್‌ ಪಂತ್‌

ಸಂಕ್ಷಿಪ್ತ ಸ್ಕೋರ್‌ :
ಭಾರತ : ಕೆ.ಎಲ್.ರಾಹುಲ್‌ 65 , ರೋಹಿತ್‌ ಶರ್ಮಾ 55 , ವೆಂಕಟೇಶ್‌ ಅಯ್ಯರ್‌ 12, ಪಂತ್‌ 12, ಟೀಮ್‌ ಸೌಥಿ 136/3

ನ್ಯೂಜಿಲೆಂಡ್‌ : ಗ್ಲೆನ್‌ ಫಿಲಿಫ್‌ 34, ಗುಪ್ಟಿಲ್‌ 31, ಡೆರೆಲ್‌ ಮಿಚಲ್‌ 31, ಚಾಂಪ್ಮನ್‌ 21, ಟೀಮ್‌ ಸೈಫರ್ಟ್‌ 13, ಸಂತ್ನರ್‌ 8, ಮಿಲ್ನೆ 5, ಹರ್ಷಲ್‌ ಪಟೇಲ್‌ 25/2, ಭುವನೇಶ್ವರ್‌ 39/1, ದೀಪಕ್‌ ಚಹರ್‌ 42/1, ಅಕ್ಷರ್‌ ಪಟೇಲ್‌ 26/1, ಆರ್.ಅಶ್ವಿನ್‌ 19/1

ಇದನ್ನೂ ಓದಿ : IPL ಸೇರಿ ಎಲ್ಲಾ ಮಾದರಿಯ ವೃತ್ತಿ ಬದುಕಿಗೆ ವಿದಾಯ ಹೇಳಿದ ಎಬಿ ಡಿವಿಲಿಯರ್ಸ್‌

ಇದನ್ನೂ ಓದಿ : ಬಂಗಾಳ ವಿರುದ್ದ ಸೂಪರ್‌ ಓವರ್‌ನಲ್ಲಿ ಗೆದ್ದಕರ್ನಾಟಕ ಸೆಮಿಫೈನಲ್‌ಗೆ ಎಂಟ್ರಿ

(IND vs NZ 2nd T20 New Zealand tour of india 2021 India win by 7 wicket)

Comments are closed.