ಸಕ್ರಿಯವಾಗಿದ್ದ ಸೀರಿಯಲ್ ನಟಿ ಆತ್ಮ*ತ್ಯೆ, ನಂದಿನಿ ಡೆತ್ ನೋಟ್‍ನಲ್ಲಿ ಏನಿತ್ತು?
ಬೆಂಗಳೂರು: ಕನ್ನಡ ಮತ್ತು ತಮಿಳು ಧಾರಾವಾಹಿ ಮೂಲಕ ಫೇಮಸ್ ಆಗಿದ್ದ ನಟಿ ನಂದಿನಿ ಸಿ.ಎಂ ಆತ್ಮ*ತ್ಯೆಗೆ ಶರಣಾಗಿದ್ದಾರೆ. 26 ವರ್ಷದ ಕನ್ನಡ ಸೀರಿಯಲ್ ನಟಿ ನಂದಿನಿ ಸೋಮವಾರ ಬೆಂಗಳೂರಿನಲ್ಲಿರುವ ತಮ್ಮ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಂಗೇರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ಡೆತ್ ನೋಟ್‍ನಲ್ಲಿ ಏನಿತ್ತು?
ಸ್ಥಳದಿಂದ ದೊರೆತ ಡೆತ್ ನೋಟ್ ನಲ್ಲಿ ತಾನು ಖಿನ್ನತೆ ಮತ್ತು ವೈಯಕ್ತಿಕ ಸಮಸ್ಯೆಗಳಿಂದ ಬಳಲುತ್ತಿದ್ದೆ ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ. ಅಸಹಜ ಸಾವಿನ ಪ್ರಕರಣ ದಾಖಲಾಗಿದ್ದು, ಇಲ್ಲಿಯವರೆಗೆ ಯಾವುದೇ ಅನುಮಾನ ವ್ಯಕ್ತವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. “ತನಿಖೆ ಮುಂದುವರೆದ ನಂತರ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು” ಎಂದು ಪೆÇಲೀಸರು ತಿಳಿಸಿದ್ದಾರೆ.
ಕೊಟ್ಟೂರಿನವರು ಈ ನಂದಿನಿ
ಕಿರುತೆರೆ ನಟಿ ನಂದಿನಿ ಮೂಲತಃ ವಿಜಯನಗರ ಜಿಲ್ಲೆಯ ಕೊಟ್ಟೂರಿನವರು. ಮಾಡಲ್ ಆಗಿ ಮಿಂಚಿ ನಂತರ ಕಿರುತೆರೆ ಹೆಜ್ಜೆಯಿಟ್ಟಿದ್ದರು. ನೀನಾದೆ ನಾ ಕನ್ನಡ ಸೀರಿಯಲ್ ಮೂಲಕ ಫೇಮಸ್ ಆಗಿದ್ದರು. ಅಲ್ಲದೇ ಜೀವ ಹೂವಾಗಿದೆ, ಅಣ್ಣ ತಂಗಿ, ಸಂಘರ್ಷ, ಮಧುಮಗಳು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.
ಗೌರಿ ಧಾರಾವಾಹಿ ಮೂಲಕ ಫೇಮಸ್
ಕನ್ನಡದ ನಂತರ ತಮಿಳಿನತ್ತ ಪಾತ್ರಕ್ಕಾಗಿ ತೆರಳಿದ್ದರು. ನಂದಿನಿ ಸದ್ಯ ತಮಿಳಿನ ಗೌರಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ಕಲೈನರ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಮೂಲಕ ಅಲ್ಲೂ ನಂದಿನಿ ಫೇಮಸ್ ಆಗಿದ್ದರು.
ಇದನ್ನೂ ಓದಿ: https://kannada.newsnext.live/cinema/the-elimination-of-malu-shocked-the-fans/
ಇನ್‍ಸ್ಟಾಗ್ರಾಮ್‍ನಲ್ಲಿ ಅವರ ಕೊನೆಯ ಕಾರ್ಯಕ್ರಮ ಗೌರಿಯ ಪ್ರೋಮೋ ಆಗಿತ್ತು. ಇತ್ತೀಚೆಗೆ, ಅವರು ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮನ್ನು ತಾವು ಒಳಗೊಂಡ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು “ಪ್ರೀತಿಯನ್ನು ಪ್ರೀತಿಸುತ್ತೇನೆ” ಎಂದು ಶೀರ್ಷಿಕೆ ನೀಡಿದ್ದರು.



