ಭಾನುವಾರ, ಏಪ್ರಿಲ್ 27, 2025
HomeCinemaInamdar Movie: ತೆರೆಗೆ ಬರಲು ಸಿದ್ದವಾಯ್ತು ಮತ್ತೊಂದು ಕನ್ನಡ ಸಿನಿಮಾ ಇನಾಮ್ದಾರ್‌

Inamdar Movie: ತೆರೆಗೆ ಬರಲು ಸಿದ್ದವಾಯ್ತು ಮತ್ತೊಂದು ಕನ್ನಡ ಸಿನಿಮಾ ಇನಾಮ್ದಾರ್‌

- Advertisement -

ಕರಾವಳಿಯ ಸೊಗಡಿಸಿ ಕಾಂತಾರ ಸಿನಿಮಾ ಭಾರತ ಚಿತ್ರರಂಗದಲ್ಲಿಯೇ ಹೊಸ ಇತಿಹಾಸ ಸೃಷ್ಟಿಸಿತ್ತು. ಸಿನಿಮಾದ ಬಗ್ಗೆ ಎಲ್ಲೆಡೆಯಿಂದಲೂ ಪ್ರಶಂಸೆಯ ಸುರಿಮಳೆಯೇ ಹರಿದು ಬಂದಿತ್ತು. ಇದೀಗ ಕರಾವಳಿಯ ಯುವ ನಿರ್ದೇಶಕ ಸಂದೇಶ್‌ ಶೆಟ್ಟಿ ಆಜ್ರಿ (Sandesh Shetty Ajri) ನಿರ್ದೇಶನದ ಇನಾಮ್ದಾರ್‌ (Inamdar Kannada Movie) ಸಿನಿಮಾ ಸಖತ್‌ ಸೌಂಡ್‌ ಮಾಡ್ತಿದೆ.

ಕನ್ನಡಿಗರೇ ನಿರ್ಮಾಣ ಮಾಡಿರುವ ಇನಾಮ್ದಾರ್‌ ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ವಿಭಿನ್ನ ಕಥಾ ಹಂದರ ಹೊಂದಿರುವ ಇನಾಮ್ದಾರ್‌ ನಿರ್ದೇಶಕ ಸಂದೇಶ್‌ ಶೆಟ್ಟಿ ಆಜ್ರಿ ಕನಸಿನ ಕೂಸು.Kannada Movie Inamdar Ready to Release Sandesh Shetty Ajri film Avinash

ಸ್ಯಾಂಡಲ್‌ವುಡ್‌ನಲ್ಲಿ ಕತ್ತಲೆಕೋಣೆ ಅನ್ನೋ ವಿಭಿನ್ನ ಹಾರರ್‌ ಬೇಸ್‌ ಸೈಂಟಿಫಿಕ್‌ ಥ್ರಿಲ್ಲರ್‌ ಸಿನಿಮಾ ತೆರೆಗೆ ತಂದಿದ್ದ ಸಂದೇಶ್‌ ಶೆಟ್ಟಿ ಆಜ್ರಿ. ಮೂರು ವರ್ಷಗಳ ಗ್ಯಾಪ್‌ ಬಳಿಕ ಇನಾಮ್ದಾರ್‌ ಸಿನಿಮಾ ಮೂಲಕ ಮತ್ತೆ ಕನ್ನಡಿಗರಿಗೆ ವಿಭಿನ್ನ ಸಿನಿಮಾ ತೋರಿಸಲು ಸಜ್ಜಾಗಿದ್ದಾರೆ.Kannada Movie Inamdar Ready to Release Sandesh Shetty Ajri film

ಇನಾಮ್ದಾರ್‌ ಸಿನಿಮಾದ ಕಥೆಯೇ ವಿಭಿನ್ನ. ನಿರ್ದಶಕ ಸಂದೇಶ ಶೆಟ್ಟಿ ಆಜ್ರಿ ಸಾಕಷ್ಟು ಶ್ರಮವಹಿಸಿ ಅದ್ಬುತ ಕಥೆ ಸೃಷ್ಟಿಸಿದ್ದಾರೆ. ಬಯಲುಸೀಮೆಯಿಂದ ಹಿಡಿದು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಸಿನಿಮಾವನ್ನು ಸಾಕಷ್ಟು ಶ್ರಮವಹಿಸಿ ಚಿತ್ರೀಕರಿಸಲಾಗಿದೆ. ನಿರ್ದೇಶಕರ ಕನಸಿಗೆ ನಿರ್ಮಾಪಕ ನಿರಂಜನ್‌ ತಲ್ಲೂರ್‌ ಅವರು ಸಾಥ್‌ ಕೊಟ್ಟಿದ್ದು, ಹಗಲಿರುಳು ಸಿನಿಮಾಕ್ಕಾಗಿ ಶ್ರಮಿಸಿದ್ದಾರೆ.Kannada Movie Inamdar Ready to Release Sandesh Shetty Ajri film Avinash

ಇದನ್ನೂ ಓದಿ : Imandar: ‘ಕಾಂತಾರ’ದ ಮಾದರಿಯಲ್ಲೇ ರೋಮಾಂಚನ ಸೃಷ್ಟಿಸಿದ ‘ಇನಾಮ್ದಾರ್​​’ ಸಿನಿಮಾ ಪೋಸ್ಟರ್​​

ಇನಾಮ್ದಾರ್‌ ಸಿನಿಮಾಕ್ಕೆ ಪ್ಲಸ್‌ ಪಾಯಿಂಟ್‌ ಆಗಿರುವುದೇ ಸಿನಿಮಾದ ಛಾಯಾಗ್ರಹಣ. ಅನುಭವಿ ಕ್ಯಾಮರಾಮೆನ್‌ ಮುರುಳಿ ಸಿನಿಮಾದ ಪ್ರತೀ ಪ್ರೇಮ್‌ನಲ್ಲಿಯೂ ಶ್ರಮಿಸಿದ್ದಾರೆ. ತನಗೆ ಬೇಕಾದ ಸೀನ್‌ ಶೂಟ್‌ ಮಾಡೋದಕ್ಕೆ ಚಿತ್ರತಂಡವನ್ನು ತಾವೇ ಹುರಿದುಂಬಿಸಿ ಛಾಯಾಗ್ರಹಣ ಮಾಡಿರುವ ಶ್ರೇಯ ಮುರುಳಿ ಅವರಿಗೆ ಸಲ್ಲುತ್ತದೆKannada Movie Inamdar Ready to Release Sandesh Shetty Ajri film Avinash

ಇನ್ನು ಸಿನಿಮಾದ ನಾಯಕ ನಟ ರಂಜನ್‌ ಛತ್ರಪತಿ. ಬೆಳಗಾವಿಯ ಗಟ್ಟಿಮಣ್ಣಿನ ಖಡಕ್ ಸ್ಟಾರ್ ಇನಾಮ್ದಾರ್‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.ಕನ್ನಡ, ತುಳು, ತಮಿಳು ಸಿನಿಮಾದಲ್ಲಿ ನಟನೆಯ ಮೂಲಕ ಖ್ಯಾತಿ ಪಡೆದಿರುವ, ಕುಡ್ಲದ ಚೆಲುವೆ, ನಗುಮೊಗದ ಸುಂದರಿ ಚಿರಶ್ರೀ ಅಂಜನ್‌ ನಾಯಕಿಯಾಗಿ ಮಿಂಚಿದ್ದಾರೆ.Kannada Movie Inamdar Ready to Release Sandesh Shetty Ajri film Avinash

ಇದನ್ನೂ ಓದಿ :ಅನ್ವೇಶಿ ಜೈನ್ ಎಂಬ ಮಾದಕಕನ್ಯೆ : ಸೋಷಿಯಲ್ ಮೀಡಿಯಾದಲ್ಲಿ

ಕಾಂತಾರಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಪ್ರಮೋದ್‌ ಶೆಟ್ಟಿ, ಹಿರಿಯ ನಟರಾದ ಶರತ್‌ ಲೋಹಿತಾಶ್ವ, ಅವಿನಾಶ್, ಎಂಕೆಮಠ, ಕಾಂತಾರ ಖ್ಯಾತಿಯ ನಾಗರಾಜ್ ಬೈಂದೂರು, ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಪ್ರಶಾಂತ್ ಸಿದ್ಧಿ, ರಘುಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಹಾಲಂಬಿ ಅವರಂತ ಖ್ಯಾತ ಕಲಾವಿದರು ಕೂಡ ಸಿನಿಮಾದಲ್ಲಿದ್ದಾರೆ.Kannada Movie Inamdar Ready to Release Sandesh Shetty Ajri film Avinash

ಚಿತ್ರಕ್ಕೆ ಆರ್ ಕೆ ಮಂಗಳೂರು ಸಹಕಾರ ನೀಡಿದ್ದು, ಸಹ ನಿರ್ದೇಶನದಲ್ಲಿ ರಾಜ್ ಕೃಷ್ಣ ಮತ್ತು ಮಿಥುನ್ ತೀರ್ಥಹಳ್ಳಿ ಸಾಥ್ ನೀಡಿದ್ದಾರೆ. ಚಿತ್ರತಂಡದಲ್ಲಿ ಸನತ್ ಉಪ್ಪುಂದ, ಅನೀಶ್ ಡಿಸೋಜಾ, ನಾಗೇಶ್ ಮತ್ತಿತರರು ಸಹಕಾರ ನೀಡಿದ್ದಾರೆ. ಬಯಲುಸೀಮೆಯ ಒಂದು ಜನಾಂಗ ಮತ್ತು ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಇನ್ನೊಂದು ಜನಾಂಗ ನಡುವೆ ನಡೆಯುವ ವರ್ಣ ಭೇದದ ಕಥೆಯ ಜೀವಾಳ.

Kannada Movie Inamdar Ready to Release Sandesh Shetty Ajri film Avinash
ವಿ.ಸೂ : ಧೂಮಪಾನ ಆರೋಗ್ಯಕ್ಕೆ ಹಾನಿಕರ

ಇದನ್ನೂ ಓದಿ : ವಯಸ್ಸಿನ ಜೊತೆ ಅಂದವೂ ಏರ್ತಿದೆ…! ಇದು ಮಲೈಕಾ ಅರೋರಾ ಎಂಬ ಮಾದಕ ಸುಂದರಿ ಕತೆ

ಚಿತ್ರದುದ್ದಕ್ಕೂ ಪಶ್ಚಿಮ ಘಟ್ಟದ ತಪ್ಪಲಿನ ಸೌಂದರ್ಯ ಕಾಣಬಹುದಾಗಿದ್ದು, ಬಯಲು ಸೀಮೆಯ ಸೊಬಗು ಚಿತ್ರ ರಸಿಕರಿಗೆ ಮೆಚ್ಚುಗೆ ಆಗಲಿದೆ. ಸದ್ಯ ಇನಾಮ್ದಾರ್ ಚಿತ್ರ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಇನ್ನು ಕೆಲವು ದಿನಗಳಲ್ಲಿ ಕರಾವಳಿ ಪ್ರತಿಭೆ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಎರಡನೇಯ ಚಿತ್ರ ತೆರೆಯ ಮೇಲೆ ಮೂಡಿಬರಲಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular