Kalatapasvi Rajesh : ಸ್ಯಾಂಡಲ್‌ವುಡ್‌ ಹಿರಿಯ ನಟ ರಾಜೇಶ್‌ ವಿಧಿವಶ

ಬೆಂಗಳೂರು : ಸ್ಯಾಂಡಲ್‌ವುಡ್‌ ಹಿರಿಯ ನಟ (Kalatapasvi Rajesh) ರಾಜೇಶ್‌ (89 ವರ್ಷ) ವಿಧಿವಶರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ತೀವ್ರ ಉಸಿರಾಟದ ಸಮಸ್ಯೆ ಯಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ವಿಧಿವಶರಾಗಿದ್ದಾರೆ.

ಬೃಂದಾವನ, ಕಪ್ಪು ಬಿಳುಪು, ಕಾವೇರಿ, ದೇವರ ಗುಡಿ, ಸೊಸೆ ತಂದ ಸೌಭಾಗ್ಯ, ನಮ್ಮ ಊರು, ಗಂಗೆ ಗೌರಿ, ಬೆಳುವಲದ ಮಡಿಲಲ್ಲಿ, ಬೋರೆ ಗೌಡ ಬೆಂಗಳೂರಿಗೆ ಬಂದ, ಮರೆಯದ ದೀಪಾವಳಿ, ಪ್ರತಿಧ್ವನಿ, ಬದುಕು ಬಂಗಾರವಾಯ್ತು, ಸೊಸೆ ತಂದ ಸೌಭಾಗ್ಯ, ಮುಗಿಯದ ಕಥೆ, ಬಿಡುಗಡೆ, ದೇವರದುಡ್ಡು, ಕಲಿಯುಗ, ಪಿತಾಮಹ ಸೇರಿದಂತೆ ಸುಮಾರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ರಾಜೇಶ್‌ ಅವರು ಅಭಿನಯಿಸಿದ್ದಾರೆ. ಇನ್ನು ಓಲ್ಡ್‌ ಮಂಕ್‌ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದ ರಾಜೇಶ್‌ ಅವರು ಇದೀಗ ಸಿನಿಮಾ ಬಿಡುಗಡೆಗೆ ಮೊದಲೇ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

1932ರ ಏ.15ರಂದು ಬೆಂಗಳೂರಿನಲ್ಲಿ ಜನಿಸಿದ್ದ ರಾಜೇಶ್ ಅವರು ಬಾಲ್ಯದಲ್ಲಿಯೇ ನಟನೆಯ ಕುರಿತು ಆಸಕ್ತಿ ಹೊಂದಿದ್ದರು. ಮುನಿ ಚೌಡಪ್ಪ ಆಗಿದ್ದ ರಾಜೇಶ್‌ ನಾಟಕಗಳಲ್ಲಿ ಅಭಿನಯ ಮಾಡುವಾಗ ವಿದ್ಯಾಸಾಗರ್‌ ಹೆಸರಿನಿಂದ ಗುರುತಿಸಿಕೊಂಡಿದ್ದರು. ಆದರೆ ಚಿತ್ರರಂಗದಲ್ಲಿ ರಾಜೇಶ್‌ ಎಂದೇ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಶಕ್ತಿ ನಾಟಕ ಮಂಡಳಿಯನ್ನು ಸ್ಥಾಪಿಸಿ ರಾಜ್ಯದಾದ್ಯಂತ ನಾಟಕ ಪ್ರದರ್ಶನವನ್ನು ನೀಡಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ಕಳೆದ ಕೆಲವೇ ದಿನಗಳ ಹಿಂದೆಯಷ್ಟೇ ರಾಜೇಶ್‌ ಅವರು ಪತ್ನಿಯನ್ನು ಕಳೆದುಕೊಂಡಿದ್ದರು. ಇನ್ನು ಧಾರವಾಡ ವಿಶ್ವ ವಿದ್ಯಾಲಯ ರಾಜೇಶ್‌ ಅವರಿಗೆ ಡಾಕ್ಟರೇಟ್‌ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ರಾಜೇಶ್‌ ಅವರಿಗೆ ಒಟ್ಟು ಐದು ಮಂದಿ ಮಕ್ಕಳು. ಈ ಪೈಕಿ ಪುತ್ರಿ ಆಶಾ ರಾಣಿ ಅವರು ಖ್ಯಾತ ನಟ ಅರ್ಜುನ್‌ ಸರ್ಜಾ ಅವರನ್ನು ವಿವಾಹವಾಗಿದ್ದಾರೆ. ಇಂದು ವಿದ್ಯಾರಣ್ಯಪುರ ದಲ್ಲಿರುವ ಅವರ ನಿವಾಸದಲ್ಲಿ ಸಂಜೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಂತರದಲ್ಲಿ ಅಂತ್ಯಕ್ರೀಯೆ ನೆರವೇರಲಿದೆ.

ಇದನ್ನೂ ಓದಿ : ‘ನಿಮಗೆ ಶುಭಸುದ್ದಿ ತಿಳಿಸುವೆ ‘ ಅಭಿಮಾನಿಗಳು ತುದಿಗಾಲಲ್ಲಿ ಕಾಯುವಂತೆ ಮಾಡಿದ ಮೋಹಕತಾರೆ ರಮ್ಯಾ

ಇದನ್ನೂ ಓದಿ : ಕೆಜಿಎಫ್- 2 ಗೆ ಬಾಲಿವುಡ್ ಕಂಟಕ : ಏಪ್ರಿಲ್ 14 ರಂದೇ ತೆರೆಗೆ ಬರಲಿದೆ ಜೆರ್ಸಿ ಸಿನಿಮಾ

ಇದನ್ನೂ ಓದಿ : ಬೆಂಗಳೂರಿನ ರಿಂಗ್ ರೋಡ್ ಗೆ ಪುನೀತ್ ರಾಜ್‌ ಕುಮಾರ್ ಹೆಸರು

(Kannada senior actor Rajesh, Kalatapasvi Rajesh passes away at 82 in Bengaluru)

Comments are closed.