ಸರಕಾರದ ನಡೆ ಹಳ್ಳಿ ಕಡೆ, ಆರೂರಿನಲ್ಲಿ ವಾಸ್ತವ್ಯ, ಕೊಕ್ಕರ್ಣೆಯಲ್ಲಿ ಜನಸ್ಪಂದನ : ಸಚಿವ ಆರ್.‌ ಅಶೋಕ್‌ ವಿರುದ್ದ ಜನರ ಆಕ್ರೋಶ

ಉಡುಪಿ : ಹಳ್ಳಿಯಲ್ಲಿನ ಜನರ ಸಮಸ್ಯೆಯನ್ನು ನೇರವಾಗಿ ಆಲಿಸುವ ಸಲುವಾಗಿ ಕಂದಾಯ ಇಲಾಖೆ ಸರಕಾರದ ನಡೆ ಹಳ್ಳಿ ಕಡೆಗೆ ಅನ್ನುವ ಕಾರ್ಯಕ್ರಮವನ್ನು ಆಯೋಜಿಸಿದ್ದು, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆರೂರಿನಲ್ಲಿಂದು ಕಂದಾಯ ಸಚಿವ ಆರ್.‌ ಅಶೋಕ್‌ ಅವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಆದರೆ ಕೊಕ್ಕರ್ಣೆ ಗ್ರಾಮದಲ್ಲಿ ಜನಸ್ಪಂದನಾ (Janaspandana) ಕಾರ್ಯಕ್ರಮ ನಡೆಸಲಿದ್ದು, ಆರೂರು ಗ್ರಾಮದಲ್ಲಿನ ಜನರ ಸಮಸ್ಯೆ ಆಲಿಸಲು ಸಚಿವರು ಕಾಲಾವಕಾಶ ನೀಡದಿರುವುದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.

ಇಂದು ಬೆಳಿಗ್ಗೆ ಕೊಕ್ಕರ್ಣೆಗೆ ಆಗಮಿಸಲಿರುವ ಕಂದಾಯ ಸಚಿವ ಆರ್.‌ ಅಶೋಕ್‌ ಅವರು ಬೆಳಗ್ಗೆ 11.30ಕ್ಕೆ ಕೊಕ್ಕರ್ಣೆ ಬಸ್ ಸ್ಟ್ಯಾಂಡ್ ಬಳಿಯಿಂದ ಕೊಕ್ಕರ್ಣೆ ಹೈ ಸ್ಕೂಲನ ವರೆಗೆ ಬೃಹತ್‌ ಮೆರವಣಿಗೆ ನಡೆಯಲಿದ್ದು, ನಂತರದಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಊಟೋಪಚಾರದ ಬಳಿಕ ಮಧ್ಯಾಹ್ನ 2 ಗಂಟೆಗೆ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಹಕ್ಕುಪತ್ರ ವಿತರಣೆ ಹಾಗೂ ಡೀಮ್ಡ್ ಫಾರೆಸ್ಟ್ ಬಗ್ಗೆ ಚರ್ಚೆ ನಡೆಯಲಿದ್ದಾರೆ.

ಸಂಜೆ 4 ಗಂಟೆಗೆ ಕೊಕ್ಕರ್ಣೆ ಒಳಬೈಲು ಕುಡುಬಿ ಸಮುದಾಯದವರ ಜೊತೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ಮುಂಡ್ಕಿನಜಡ್ಡುಯಿಂದ ಆರೂರು ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಯ ವರೆಗೆ ಬೈಕ್ ರಾಲಿ ನಡೆಸಿ ನಂತರ ವಾಸ್ತವ್ಯ ಹೂಡಲಿದ್ದಾರೆ. ಇನ್ನು ರಾತ್ರಿ 8.00 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸರ್ಕಾರದ ನಡೆ, ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮರಾವ್‌ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಚಿವರು ಗ್ರಾಮ ವಾಸ್ತವ್ಯವನ್ನು ಆರೂರು ಗ್ರಾಮದಲ್ಲಿ ನಡೆಸಲಿದ್ದಾರೆ. ಆದರೆ ಆರೂರು ಗ್ರಾಮದ ಜನರ ಸಮಸ್ಯೆಯನ್ನು ಆಲಿಸಲು ಯಾವುದೇ ಕಾಲಾವಕಾಶವನ್ನು ನೀಡಿಲ್ಲ ಅನ್ನೋದು ಗ್ರಾಮಸ್ಥರ ಆರೋಪ. ಈ ಕುರಿತು ಜಿಲ್ಲಾಡಳಿತ ಗಮನಹರಿಸಬೇಕಾಗಿದೆ. ಸಚಿವರ ಗ್ರಾಮ ವಾಸ್ತವ್ಯದ ನೆಪದಲ್ಲಾದ್ರೂ ಆರೂರು ಗ್ರಾಮದ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಕಿಸಬೇಕಾಗಿದೆ. ಜಿಲ್ಲಾಧಿಕಾರಿ ಸೇರಿದಂತೆ ಇಡೀ ಆಡಳಿತ ಯಂತ್ರವನ್ನೇ ಗ್ರಾಮಕ್ಕೆ ಕೊಂಡೊಯ್ಯುವ ಸಲುವಾಗಿ ರಾಜ್ಯ ಸರಕಾರ ಇಂತಹ ವಿಶಿಷ್ಠ ಕಾರ್ಯಕ್ರಮ ಆಯೋಜಿಸಿದೆ. ಲಕ್ಷಾಂತರ ರೂಪಾಯಿ ವ್ಯಯಿಸುವ ಕಾರ್ಯಕ್ರಮದಿಂದ ಜನರಿಗೆ ಅನುಕೂಲವಾಗಬೇಕು ಅನ್ನೋದು ಜನರ ಆಶಯ.

ಇದನ್ನೂ ಓದಿ :  ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ; ಎಜಿ ನಾವದಗಿ ವಾದ, ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ

ಇದನ್ನೂ ಓದಿ : 100ನೆ ದಿನದ ಸಂಭ್ರಮಕ್ಕೆ ಆಟಗಾರರಿಗೆ ವಿಶೇಷ ಕೊಡುಗೆ ನೀಡಲಿದೆ ಪಬ್ಜಿ

ಇದನ್ನು ಒದಿ : By Two Love ಸಿನಿಮಾ ಹೀರೋ ಅಭಿಮಾನಿ ಮೇಲೆ ಹಲ್ಲೆ: ನಟ ಧನ್ವೀರ್ ಮೇಲೆ FIR

(Government walk village Aroor stay, Kokkarni Janaspandana, People’s outrage against Minister R. Ashok)

Comments are closed.