Kantara Hindi in Netflix‌ : ನೆಟ್‌ಫ್ಲಿಕ್ಸ್‌ನಲ್ಲಿ “ಕಾಂತಾರ” ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದು ಯಾಕೆ ಗೊತ್ತಾ ?

ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ವಿಶೇಷ ದಾಖಲೆಯನ್ನು ಸೃಷ್ಟಿಸಿದ್ದ ಕೀರ್ತಿ “ಕಾಂತಾರ” ಸಿನಿಮಾಕ್ಕೆ ಸಲ್ಲುತ್ತದೆ. ಈ ಸಿನಿಮಾವನ್ನು ಸಣ್ಣ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದು, ಸಿನಿಮಂದಿರಗಳಲ್ಲಿ ಸೂಪರ್‌ ಡೂಪರ್‌ ಹಿಟ್‌ ಆಗಿ 400 ಕೋಟಿಗೂ ಅಧಿಕ ಕಲೆಕ್ಷನ್‌ನ್ನು (Kantara Hindi in Netflix‌) ತನ್ನದಾಗಿಸಿಕೊಂಡಿದೆ. ಈ ಸಿನಿಮಾ ಪರಭಾಷೆಗಳಲ್ಲಿ ಬಿಡುಗಡೆಯಾಗಿ ಸಿನಿಮಂದಿರಗಳಲ್ಲಿ ಸೂಪರ್‌ ಹಿಟ್‌ ಆಗಿದೆ. ಇದಾದ ಬಳಿಕ ಅಮೆಜಾನ್‌ ಪ್ರೈಮ್‌ನಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಗೊಂಡು ಅಲ್ಲಿ ಕೂಡ ಕಮಾಲ್‌ ಮಾಡಿದೆ. ಆದರೆ “ಕಾಂತಾರ” ಸಿನಿಮಾ ಹಿಂದಿ ಆವೃತ್ತಿಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೊಂಡು ಪ್ರೇಕ್ಷಕರಲ್ಲಿ ಅಸಮಾಧಾನವನ್ನು ಉಂಟು ಮಾಡಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಸಿನಿಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಡಿಸೆಂಬರ್‌ 9ರಂದು “ಕಾಂತಾರ” ಸಿನಿಮಾದ ಹಿಂದಿ ವರ್ಷನ್‌ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿತಂಡ ಬಿಡುಗಡೆ ಮಾಡಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆಗೊಂಡ ಒಂದೇ ದಿನಕ್ಕೆ ಸಿನಿಪ್ರೇಕ್ಷಕರಿಂದ ದೂರುಗಳನ್ನು ನೀಡಿದ್ದಾರೆ. ಇದರಲ್ಲಿ ಈ ಸಿನಿಮಾ ಹಿಂದಿ ಭಾಷೆಗೆ ಡಬ್ಬಿಂಗ್‌ ಆಗಿರುವುದು ಜನರಿಗೆ ಹೆಚ್ಚು ಇಷ್ಟವಾಗಿಲ್ಲ.

“ಕಾಂತಾರ” ಸಿನಿಮಾ ಸಿನಿಮಂದಿರಗಳಲ್ಲಿ ಕನ್ನಡ ಭಾಷೆಯಲ್ಲಿ ಬಿಟ್ಟರೆ ಹಿಂದಿ ಭಾಷೆಯಲ್ಲಿ ಹೆಚ್ಚಿನ ಕಲೆಕ್ಷನ್‌ನ್ನು ಕಂಡಿದೆ. ಆದರೆ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೊಂಡ ಹಿಂದಿ ವರ್ಷನ್‌ ವಿಕ್ಷಕರಿಗೆ ಇಷ್ಟವಾಗಿಲ್ಲ ಎಂದಿದ್ದಾರೆ. ಸಿನಿಮಂದಿರಗಳಲ್ಲಿ ಹಿಂದಿ ವರ್ಷನ್‌ ಬಿಡುಗಡೆಯಾದ ಹಾಗೆ ನೆಟ್‌ಫ್ಲಿಕ್ಸ್‌ನಲ್ಲಿ ಕಾಣಿಸಿಕೊಂಡಿಲ್ಲ, ಸಿನಿಮಂದಿರಗಳಲ್ಲಿ ಚೆನ್ನಾಗಿ ಇತ್ತು ಎಂದು ಕೆಲವರು ದೂರಿದ್ದಾರೆ.

ಇದನ್ನೂ ಓದಿ : Just Pass Kannada Movie:’ಜಸ್ಟ್ ಪಾಸ್’ ಆಗಲು ಹೊರಟ ನಟ ಶ್ರೀ ಗೆ ಸಿಕ್ಕಳು ಹೀರೋಯಿನ್ – ಡಿಸೆಂಬರ್ 14ಕ್ಕೆ ಸೆಟ್ಟೇರಲಿದೆ ಸಿನಿಮಾ

ಇದನ್ನೂ ಓದಿ : Vasanthi Nalidaga Movie : ಸಿನಿಮಂದಿರಗಳಲ್ಲಿ ಎರಡನೇ ವಾರಕ್ಕೆ ಕಾಲಿಟ್ಟ “ವಾಸಂತಿ ನಲಿದಾಗ”

ಇದನ್ನೂ ಓದಿ : Sharath Kumar: ತಮಿಳಿನ ಖ್ಯಾತ ನಟ ಶರತ್ ಕುಮಾರ್ ಅಸ್ವಸ್ಥ; ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : Puneeth – Darshan Thoogudeepa : ಅಪ್ಪು ನೆಚ್ಚಿನ ಊರಿನಲ್ಲಿ “ಕ್ರಾಂತಿ” 2ನೇ ಹಾಡು : ತೂಗುದೀಪ್‌ ದರ್ಶನ್‌ ಘೋಷಣೆ

“ಕಾಂತಾರ” ಸಿನಿಮಾದ ಹಿಂದಿ ವರ್ಷನ್‌ ಸಿನಿಮಂದಿರಗಳಲ್ಲಿ ನೋಡಲು ಚೆನ್ನಾಗಿದ್ದು, ಓಟಿಟಿಯಲ್ಲಿ ನೋಡಲು ಅಷ್ಟೊಂದು ಚೆನ್ನಾಗಿ ಇಲ್ಲ ಎಂದು ಹೇಳಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಹಿಂದಿ ಆವೃತ್ತಿ ನೋಡುವಾಗ ಕೆಲವು ಸಂಭಾಷಣೆಗಳು ಸಡನ್‌ ಆಗಿ ಕನ್ನಡದಲ್ಲಿ ಬರುತ್ತದೆ ಎಂದಿದ್ದಾರೆ. ಸಿನಿಮಾದ ಆರಂಭದಲ್ಲಿ ಹಾಗೂ ಅರಣ್ಯದಲ್ಲಿ ನಡೆದ ಕೆಲವು ದೃಶ್ಯಗಳಲ್ಲಿ ಆಗುತ್ತಿದೆ ಎಂದು ಒಂದಷ್ಟು ಪ್ರೇಕ್ಷಕರು ಟ್ವೀಟ್‌ ಮಾಡಿದ್ದು, ಅದನ್ನು ದಯವಿಟ್ಟು ಸರಿ ಮಾಡಿ ಎಂದು ಮನವಿ ಮಾಡಿದ್ದಾರೆ.

Kantara Hindi in Netflix‌: Do you know why the viewers of “Kantara” expressed dissatisfaction on Netflix?

Comments are closed.