Harassment: ಊಟದಲ್ಲಿ ಕೂದಲು ಸಿಕ್ಕಿದ್ದಕ್ಕೆ ಪತ್ನಿಯ ತಲೆ ಬೋಳಿಸಿದ ಸೈಕೋ ಪತಿ; ಅತ್ತೆ-ಮಾವ ಕೂಡಾ ಸಾಥ್..!

ಉತ್ತರ ಪ್ರದೇಶ: Harassment: ಊಟದಲ್ಲಿ ಕೂದಲು ಸಿಕ್ಕಿದ್ದಕ್ಕೆ ಸೈಕೋ ಪತಿಯೊಬ್ಬ ಪತ್ನಿಯ ತಲೆ ಬೋಳಿಸಿ, ಆಕೆಗೆ ಚಿತ್ರಹಿಂಸೆ ನೀಡಿರುವ ಘಟನೆ ಉತ್ತರ ಪ್ರದೇಶದ ಫಿಲಿಬಿತ್ ನಲ್ಲಿ ನಡೆದಿದೆ. ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಊಟ ಮಾಡುತ್ತಿದ್ದ ಪತಿಗೆ ಆಹಾರದಲ್ಲಿ ಕೂದಲು ಸಿಕ್ಕಿದೆ. ಇದರಿಂದ ಕೋಪಗೊಂಡ ಪತಿ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಬಲವಂತವಾಗಿ ಕೈ ಕಾಲು ಕಟ್ಟಿಹಾಕಿ ದೈಹಿಕ ಕಿರುಕುಳ ನೀಡಿದ್ದು ಮಾತ್ರವಲ್ಲದೇ ಆಕೆಯ ತಲೆ ಬೋಳಿಸಿ ವಿಕೃತಿ ಮೆರೆದಿದ್ದಾನೆ. ಈ ಹಿಂದೆಯೂ ಪತ್ನಿಗೆ ಈತ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Student rape: ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಿಂದ ಹೀನಾಯ ಕೃತ್ಯ; ಅಮಲು ಪದಾರ್ಥ ನೀಡಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ

ಚಿಕ್ಕ ಪುಟ್ಟ ವಿಷಯಗಳಿಗೂ ಕೋಪಗೊಂಡು ತನ್ನ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಾನೆ ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪತಿಯ ಕಾಟ ತಾಳಲಾರದೇ ಠಾಣೆ ಮೆಟ್ಟಿಲೇರಿದ ಪತ್ನಿ ಪತಿ ಹಾಗೂ ಅತ್ತೆ-ಮಾವನ ವಿರುದ್ಧ ದೂರು ದಾಖಲಿಸಿದ್ದಾಳೆ. ಫಿಲಿಬಿತ್ ನ ಗಜ್ರೌಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮಹಿಳೆ ತನ್ನ ದೂರಿನಲ್ಲಿ ಪತಿಯ ಜೊತೆಗೆ ಅತ್ತೆ-ಮಾವನ ಹೆಸರನ್ನೂ ನಮೂದಿಸಿದ್ದಾರೆ. ತನಗೆ ಪತಿ ಚಿತ್ರಹಿಂಸೆ ನೀಡುವಾಗ ಅತ್ತೆ-ಮಾವ ಕೂಡಾ ಮಗನಿಗೆ ಸಹಕಾರ ನೀಡುತ್ತಾರೆ. ನನ್ನ ಮೇಲೆ ಪತಿ ಮನಬಂದಂತೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡುತ್ತಿದ್ದರೂ ಅತ್ತೆ- ಮಾವ ಸಹಾಯಕ್ಕೆ ಬರಲಿಲ್ಲ. ಮಗ ಮೃಗೀಯವಾಗಿ ವರ್ತಿಸುತ್ತಿದ್ದರೂ ಸುಮ್ಮನಿದ್ದು ಸಂತಸಪಡುತ್ತಿದ್ದರು. ನನ್ನ ರಕ್ಷಣೆ ಮಾಡುವ ಬದಲಿಗೆ ನನ್ನ ಗಂಡನಿಗೆ ಸಾಥ್ ನೀಡಿದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Bangalore Couple : ರಸ್ತೆಯಲ್ಲಿ ನಡೆದಿದ್ದಕ್ಕೆ ಬೆಂಗಳೂರಿನ ದಂಪತಿಗೆ 3000 ರೂ. ದಂಡ : ಮುಂದೆ ಏನಾಯಿತು ಗೊತ್ತಾ ?

ಘಟನೆಯ ಕುರಿತಾಗಿ ಮಹಿಳೆ ದೂರವಾಣಿ ಮೂಲಕ ಪೋಷಕರಿಗೂ ತಿಳಿಸಿದ್ದಾಳೆ. ಇದನ್ನು ವಿಚಾರಿಸಲು ಪೋಷಕರು ಮನೆಗೆ ಬಂದಿದ್ದಾಗ ಅವರ ಮೇಲೆಯೂ ಪತಿ ಹಲ್ಲೆಗೆ ಯತ್ನಿಸಿದ್ದಾನೆ. ವರದಕ್ಷಿಣೆಗಾಗಿ ಪತಿ ಈ ರೀತಿ ವರ್ತಿಸುತ್ತಿರುವುದಾಗಿ ಮಹಿಳೆ ದೂರಿದ್ದಾಳೆ. ಸದ್ಯ ಪೊಲೀಸರು ಪತಿ, ಅತ್ತೆ ಮಾವನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಸೈಕೋ ಪತಿಯನ್ನು ಬಂಧಿಸಿದ್ದಾರೆ.

ಇಂಗ್ಲಿಷ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Harassment: Husband Got Mad After Getting Hair In Food Tortured His Wife

Comments are closed.